Advertisement
ಅರಣ್ಯ ಇಲಾಖೆಯ ಗದಗ ಅರಣ್ಯ ವಿಭಾಗವು ಕಪ್ಪತಗುಡ್ಡ ಚಾರಣ(ಟ್ರೆಕ್ಕಿಂಗ್) ಬನ್ನಿ, ನಮ್ಮ ಉತ್ತರ ಕರ್ನಾಟಕದ ಸಹ್ಯಾದ್ರಿಯನ್ನು ಅನ್ವೇಷಿಸಿ ಎಂಬ ವಾಕ್ಯದೊಂದಿಗೆ ಆ. 5ರಂದು ಪ್ರಥಮ ಬಾರಿಗೆ ಟ್ರೆಕ್ಕಿಂಗ್ ಆರಂಭಿಸಿದೆ. ಆ. 5ರಂದು ಬೆಳಿಗ್ಗೆ 6ರಿಂದ ಟ್ರೆಕ್ಕಿಂಗ್ ಆರಂಭಿಸಿದ್ದು, ಈಗಾಗಲೇ ತುಮಕೂರು, ಧಾರವಾಡ, ಹಾವೇರಿ, ಕೊಪ್ಪಳ ಸೇರಿ ಹಲವು ಜಿಲ್ಲೆಗಳ ಚಾರಣಿಗರು ಸೇರಿ ಜಿಲ್ಲೆಯ ಮುಂಡರಗಿ, ಲಕ್ಕುಂಡಿಯ ಜನರು ಕೂಡ ಫೋನ್ ಮೂಲಕ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ.
Related Articles
Advertisement
ಚಾರಣಿಗರಿಗೆ ಅರಣ್ಯ ಇಲಾಖೆ ಸಲಹೆ: ಟ್ರೆಕ್ಕಿಂಗ್‌ಗೆ ಆಗಮಿಸುವ ಚಾರಣಿಗರು ಶೂಸ್ ಜೊತೆಗೆ ಗುಡ್ಡ ಪ್ರದೇಶಗಳನ್ನು ಹತ್ತಲು ಬೇಕಾದ ಅಗತ್ಯದ ಬಟ್ಟೆಗಳನ್ನು ಹಾಕಿಕೊಂಡು ಬರಬೇಕು. ಚಾರಣದ ಮಾರ್ಗದಲ್ಲಿ ವನ್ಯಜೀವಿಗಳಿರುವುದರಿಂದ ಅರಣ್ಯ ಇಲಾಖೆ ಅಧಿಕಾರಿಗಳ ಹಾಗೂ ಸಿಬ್ಬಂದಿ ಮಾರ್ಗದರ್ಶನ ಹಾಗೂ ಸೂಚನೆಗಳನ್ನು ತಪ್ಪದೇ ಪಾಲಿಸಬೇಕು.
ಟ್ರೆಕ್ಕಿಂಗ್ ಮಾರ್ಗಕಡಕೋಳ ಕಡಕೋಳ ವೀವ್ ಪಾಯಿಂಟ್ ಕಡಕೋಳ ದೈವೀವನಕಡಕೋಳ ಕಪ್ಪತ ಮಲ್ಲೇಶ್ವರ ದೇವಸ್ಥಾನ ಗಾಳಿಗುಂಡಿ ವೀವ್ ಪಾಯಿಂಟ್ ಕಡಕೋಳ ದೈವೀವನ
ಚಾರಣದ ಉದ್ದ: 4 ಕಿ.ಮೀ. ಚಾರಣದ ಸಮಯ: ಅಂದಾಜು 3 ಗಂಟೆ
ನೊಂದಣಿ: 150 ರೂ.
ಆರಂಭ: ಸಮಯ ಬೆಳಿಗ್ಗೆ 6ಕ್ಕೆ
ಉಪಹಾರ: ಕಡಕೋಳ ದೈವೀವನ ಉತ್ತರ ಕರ್ನಾಟಕದ ಸಹ್ಯಾದ್ರಿ ಕಪ್ಪತಗುಡ್ಡದಲ್ಲಿ ಟ್ರೆಕ್ಕಿಂಗ್ ಆರಂಭಿಸುತ್ತಿದ್ದಂತೆ ಚಾರಣಿಗರಿಂದ ಉತ್ತಮ ಬೆಂಬಲ ದೊರೆಯುತ್ತಿದೆ. ರಾಜ್ಯದೆಲ್ಲೆಡೆಯಿಂದ ಚಾರಣಕ್ಕೆ ಆಗಮಿಸಲು ಕರೆಗಳು ಬರುತ್ತಿವೆ. ಮೊದಲ ಬಾರಿ ಚಾರಣ ಆರಂಭವಾಗುತ್ತಿರುವುದರಿಂದ ಹಂತ ಹಂತವಾಗಿ ಚಾರಣದ ಮಾರ್ಗಗಳನ್ನು ಹೆಚ್ಚಿಸುತ್ತ ಚಾರಣಿಗರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮೂಲಸೌಕರ್ಯಗಳನ್ನು ಕಲ್ಪಿಸುವುದರ ಜೊತೆಗೆ ರಾಜ್ಯದ ಜನತೆಗೆ ಕಪ್ಪತಗುಡ್ಡದ ಮಹತ್ವವನ್ನು ಸಾರುವ ಕೆಲಸ ಮಾಡಲಾಗುತ್ತದೆ ಎಂದು ಮುಂಡರಗಿ ಆರ್‌ಎಫ್‌ಒ ವೀರೇಂದ್ರ ಅವರು ಉದಯವಾಣಿಯೊಂದಿಗೆ ಮಾಹಿತಿ ಹಂಚಿಕೊಂಡರು. ಕಪ್ಪತಗುಡ್ಡದಲ್ಲಿ ಮೊಟ್ಟ ಮೊದಲ ಬಾರಿ ಟ್ರೆಕ್ಕಿಂಗ್ ಆರಂಭಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಈಗಾಗಲೇ 40 ಅಧಿಕ ಚಾರಣಿಗರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಚಾರಣಿಗರಿಂದ ಉತ್ತಮ ಪ್ರತ್ರಿಕಿಯೆ ವ್ಯಕ್ತವಾಗುತ್ತಿದ್ದು, ಮುಂಬರುವ ದಿನಗಳಲ್ಲಿ ಶನಿವಾರ ಮತ್ತು ರವಿವಾರ ಚಾರಣ ಹಮ್ಮಿಕೊಳ್ಳಲು ಕ್ರಮ ಕೈಗೊಳ್ಳಲಾಗುತ್ತದೆ.
-ವೀರೇಂದ್ರ ಎಂ, ಆರ್‌ಎಫ್‌ಒ, ಮುಂಡರಗಿ -ಅರುಣಕುಮಾರ ಹಿರೇಮಠ