ಸಂಪೂರ್ಣ ಹೊಸಬರೇ ಸೇರಿಕೊಂಡು ಸಿದ್ದಪಡಿಸಿರುವ “ಕಪೋ ಕಲ್ಪಿತಂ’ ಚಿತ್ರ ಸದ್ಯ ಸೆನ್ಸಾರ್ ಅಂಗಳದಲ್ಲಿದ್ದು, ಇತ್ತೀಚೆಗೆ ತಂಡ ಚಿತ್ರದ ಮೊದಲ ಟ್ರೇಲರ್‌ನ ಬಿಡುಗಡೆಗೊಳಿಸಿದೆ.
ಈ ಹಿಂದೆ “ಜಿಷ್ಣು’ ಸಿನಿಮಾದಲ್ಲಿ ನಾಯಕಿಯಾಗಿ ಮತ್ತು ಸಹ ನಿರ್ದೇಶಕಿಯಾಗಿ ಕೆಲಸ ಮಾಡಿದ ಅನುಭವವಿರುವ ಸುಮಿತ್ರಾ ಗೌಡ “ಕಪೋಕಲ್ಪಿತಂ’ ಚಿತ್ರಕ್ಕೆ ಕಥೆ ಚಿತ್ರಕಥೆ ಬರೆದು ಆ್ಯಕ್ಷನ್ ಕಟ್ ಹೇಳುವುದರ ಜೊತೆಗೆ ತೆರೆಮೇಲೆ ನಾಯಕಿಯಾಗಿಯೂ ಕಾಣಿಸಿಕೊಂಡಿದ್ದಾರೆ.
ಉಳಿದಂತೆ ಚಿತ್ರದಲ್ಲಿ ಪ್ರೀತಂ ಮಕ್ಕಿಹಾಲಿ, ಸಂದೀಪ್ ಮಲಾನಿ, ಶಿವರಾಜ್ ಕರ್ಕೇರ, ಗೌರೀಶ್ ಅಕ್ಕಿ, ರಾಜೇಶ್ ಕಣ್ಣೂರ್, ವಿನೀತ್, ವಿಶಾಲ್, ಅಮೋಘ್, ಚೈತ್ರಾ, ದೀಕ್ಷಿತ್ ಗೌಡ ಮುಂತಾದವರು ಚಿತ್ರದ ಇತರ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಇದನ್ನೂ ಓದಿ:ಶೂಟಿಂಗ್ ಗೆ ಅದಿತಿ ರೆಡಿ: ಹೊಸ ಜೋಶ್ ನಲ್ಲಿ ಕೆಲಸಕ್ಕೆ ಹಾಜರ್
ಚಿತ್ರದ ಬಗ್ಗೆ ಮಾತನಾಡಿದ ನಾಯಕಿ ಕಂ ನಿರ್ದೇಶಕಿ ಸುಮಿತ್ರಾ ಗೌಡ, “ಇದೊಂದು ಹಾರರ್ ಶೈಲಿಯ ಸಿನಿಮಾವಾಗಿದ್ದು, ಯುವಕರ ತಂಡವೊಂದು ದೂರದ ಮನೆಗೆ ಹೋಗುತ್ತಾರೆ. ಅಲ್ಲಿ ಅವರಿಗಾಗುವ ವಿಚಿತ್ರ ಅನುಭವಗಳ ಸುತ್ತ ಸಿನಿಮಾ ನಡೆಯುತ್ತದೆ. ಅದರಿಂದ ಹೇಗೆ ಯುವಕರ ತಂಡ ತಪ್ಪಿಸಿಕೊಂಡು ಹೊರಗೆ ಬರುತ್ತಾರೆ ಎನ್ನುವುದು ಸಿನಿಮಾದಕಥೆಯ ಎಳೆ’ ಎಂದರು