Advertisement

ಒಡೆಯನಿಲ್ಲದ ದುಃಖದಲ್ಲಿ ಕನ್ವರ್

11:40 AM Nov 26, 2018 | Team Udayavani |

ಅಂಬರೀಷ್‌ ಅವರಿಗೆ ಪ್ರಾಣಿಗಳೆಂದರೆ ತುಂಬಾ ಪ್ರೀತಿ. ಅದರಲ್ಲೂ ವಿಶೇಷ ತಳಿಯ ಶ್ವಾನಗಳನ್ನು ಸಾಕುವ ಕ್ರೇಜ್‌ ಅಂಬರೀಷ್‌ ಅವರಿಗಿತ್ತು. ಆ ತರಹದ ಅವರ ಪ್ರೀತಿಗೆ ಪಾತ್ರವಾಗಿದ್ದು, ಅವರ ಸಾಕು ನಾಯಿ. ಕನ್ವರ್‌ ಹಾಗೂ ಬುಲ್‌ ಬುಲ್‌ ಎಂದು ಪ್ರೀತಿಯಿಂದ ಅವುಗಳನ್ನು ಕರೆಯುತ್ತಿದ್ದರು ಅಂಬಿ.

Advertisement

ಮನೆಯಲ್ಲಿ ಬಿಡುವಿನ ವೇಳೆಯಲ್ಲಿ ತಮ್ಮ ಮುದ್ದಿನ ಶ್ವಾನದ ಜೊತೆ ಆಟವಾಡುತ್ತಿದ್ದ ಅಂಬಿಯನ್ನು ಆ ಮೂಕಪ್ರಾಣಿ ಕೂಡಾ ಅಷ್ಟೇ ಹಚ್ಚಿಕೊಂಡಿತ್ತು. ಅದಕ್ಕೆ ಸಾಕ್ಷಿಯಾಗಿದ್ದು, ಅಂಬಿ ಸಾಕುನಾಯಿಯ ಕಣ್ಣೀರು. ತನ್ನ ಒಡೆಯನನ್ನು ಕಳೆದುಕೊಂಡ ನೋವಿನಿಂದ ಕಣ್ಣೀರಿಡುತ್ತಾ ರೋದಿಸುತ್ತಿದ್ದ ರೀತಿ ಎಂಥವರ ಮನಸ್ಸನ್ನು ಕಲುಕುವಂತಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next