Advertisement

ಯಶಸ್ಸು ತಂದುಕೊಟ್ಟ ದೈವಕ್ಕೆ ಕೋಲ ಕೊಟ್ಟು ಹರಕೆ ತೀರಿಸಿದ ‘ಕಾಂತಾರ’ತಂಡ

12:39 PM Jan 20, 2023 | Team Udayavani |

ರಿಷಬ್ ಶೆಟ್ಟ ನಟಿಸಿ ನಿರ್ದೇಶನ ಮಾಡಿದ್ದ ‘ಕಾಂತಾರ’ ಚಿತ್ರವು ವಿಶ್ವದಲ್ಲೆಡೆ ಭರ್ಜರಿ ಸದ್ದು ಮಾಡಿದ್ದು ಗೊತ್ತೇ ಇದೆ. ಹೊಂಬಾಳೆ ಫಿಲಂಸ್ ನಿರ್ಮಾಣದ ಚಿತ್ರದ ಹೆಸರು ಆಸ್ಕರ್ ಅವಾರ್ಡ್ ವರೆಗೂ ಹೋಗಿದೆ. ಚಿತ್ರದ ಅದ್ಭುತ ಯಶಸ್ಸಿನ ಬಳಿಕ ಇದೀಗ ಚಿತ್ರ ತಂಡವು ದೈವಕ್ಕೆ ಕೋಲ ಕೊಟ್ಟು ಹರಕೆ ತೀರಿಸಿದೆ.

Advertisement

ಇತ್ತೀಚೆಗೆ ಮಂಗಳೂರು ಭಾಗದಲ್ಲಿ ದೈವಕ್ಕೆ ಕೋಲ ಕೊಟ್ಟು ಹರಕೆ ತೀರಿಸಿತ್ತು, ನಟ ನಿರ್ದೇಶಕ ರಿಷಬ್ ಶೆಟ್ಟಿ, ನಿರ್ಮಾಪಕ ವಿಜಯ್ ಕಿರಗಂದೂರು, ಕಾರ್ತಿಕ್ ಗೌಡ, ನಟಿ ಸಪ್ತಮಿ ಗೌಡ ಸೇರಿದಂತೆ ಚಿತ್ರತಂಡವು ಭಾಗವಹಿಸಿತ್ತು.

ಇದರ ವಿಡಿಯೋವನ್ನು ಇದೀಗ ಹೊಂಬಾಳೆ ಫಿಲಂಸ್ ಯುಟ್ಯೂಬ್ ಚಾನೆಲ್ ನಲ್ಲಿ ಅಪ್ಲೋಡ್ ಮಾಡಿದೆ. ವರಾಹ ರೂಪಂ ಹಾಡು ಬಳಸಿ ಕೋಲದ ವಿಡಿಯೋ ಎಡಿಟ್ ಮಾಡಲಾಗಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ಹೊಂಬಾಳೆ ಫಿಲಂಸ್, “ನೀವು ಪ್ರಕೃತಿಗೆ ಶರಣಾಗಿ ಮತ್ತು ಜೀವನದಲ್ಲಿ ಯಶಸ್ಸು ಮತ್ತು ಸ್ವಾತಂತ್ರ್ಯವನ್ನು ನಿಮಗೆ ನೀಡಿದ ದೇವರನ್ನು ಆರಾಧಿಸಿ. ‘ಕಾಂತಾರ’ ತಂಡವು ದೈವವನ್ನು ನೈಜ ರೂಪದಲ್ಲಿ ವೀಕ್ಷಿಸಿತು, ದೈವದ ಆಶೀರ್ವಾದವನ್ನು ಪಡೆಯಿತು” ಎಂದು ಬರೆದುಕೊಂಡಿದೆ.

Advertisement

ದೈವ, ದೈವ ನರ್ತಕ ಮತ್ತು ಜಮೀನ್ದಾರರು, ಮಾನವ ಮತ್ತು ಪ್ರಕೃತಿ ನಡುವಿನ ಸಂಬಂಧದ ಬಗೆಗಿನ ಕಥಾಹಂದರದಲ್ಲಿ ಕಾಂತಾರ ಚಿತ್ರವನ್ನು ಮಾಡಲಾಗಿತ್ತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next