ತಿರುವನಂತಪುರ: ರಿಷಭ್ ಶೆಟ್ಟಿ ನಿರ್ದೇಶನದ “ಕಾಂತಾರ’ ಸಿನಿಮಾಗೆ ಮತ್ತೆ ನ್ಯಾಯಾಲಯದಲ್ಲಿ ಹಿನ್ನಡೆಯಾಗಿದೆ. ಸಿನಿಮಾದ “ವರಾಹ ರೂಪಂ’ ಹಾಡಿನ ವಿರುದ್ಧ ಕೇರಳದ ಮ್ಯೂಸಿಕ್ ಬ್ಯಾಂಡ್ ಥೈಕುಡಂ ಬ್ರಿಡ್ಜ್ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿ ಕಲ್ಲಿಕೋಟೆ ಜಿಲ್ಲಾ ನ್ಯಾಯಾಲಯ ನೀಡಿದ್ದ ಆದೇಶಕ್ಕೆ ಕೇರಳ ಹೈಕೋರ್ಟ್ ಶುಕ್ರವಾರ ತಡೆಯಾಜ್ಞೆ ತಂದಿದೆ.
ಡಿ.8ರವರೆಗೆ ತಡೆಯಾಜ್ಞೆ ನೀಡಿರುವ ಹೈಕೋರ್ಟ್ ನ್ಯಾ.ಪಿ. ಸೋಮರಾಜನ್ ಅವರು, ಹೊಂಬಾಳೆ ಫಿಲಂಸ್, ರಿಷಭ್ ಶೆಟ್ಟಿ, ಸಂಗೀತ ನಿರ್ದೇಶಕ ಬಿ.ಎಲ್.ಅಜನೀಶ್, ಪೃಥ್ವಿರಾಜ್ ಫಿಲಂಸ್, ಅಮೆಜಾನ್ ಸೆಲ್ಲರ್ ಸರ್ವಿಸ್ ಪ್ರೈವೇಟ್ ಲಿ., ಗೂಗಲ್ ಇಂಡಿಯಾ ಪ್ರಧಾನ ಕಚೇರಿ, ನ್ಪೋಟಿಫೈ ಇಂಡಿಯಾ ಪ್ರೈ.ಲಿ. ಮತ್ತು ಪೃಥ್ವಿರಾಜ್ ಸುಕುಮಾರನ್ ಮತ್ತಿತರರಿಗೆ ನೋಟಿಸ್ ಕೂಡ ಜಾರಿ ಮಾಡಿದ್ದಾರೆ.