Advertisement

ಹೌಸ್‌ ಫುಲ್‌ ನೊಂದಿಗೆ 50ನೇ ದಿನದತ್ತ ‘ಕಾಂತಾರ’

10:38 AM Nov 15, 2022 | Team Udayavani |

ಸಿನಿಮಾ ಬಿಡುಗಡೆಯಾದ ಒಂದು ವಾರ ಹೌಸ್‌ಫ‌ುಲ್‌ ಕಂಡರೆ ಸಾಕು ಎನ್ನುವ ಈ ಸಂದರ್ಭದಲ್ಲಿ ರಿಷಭ್‌ ಶೆಟ್ಟಿ ನಟನೆ, ನಿರ್ದೇಶನದ “ಕಾಂತಾರ’ ಚಿತ್ರ ಬಿಡುಗಡೆಯಾದ ಎಲ್ಲಾ ಚಿತ್ರಮಂದಿರಗಳಲ್ಲೂ ಹೌಸ್‌ಫ‌ುಲ್‌ ಶೋನೊಂದಿಗೆ 50ನೇ ದಿನದತ್ತ ದಾಪುಗಾಲು ಹಾಕುತ್ತಿದೆ. ಚಿತ್ರ ಬಿಡುಗಡೆಯಾಗಿ ಇಂದಿಗೆ 47ನೇ ದಿನ. ನ.18ಕ್ಕೆ ಚಿತ್ರ 50 ದಿನಗಳನ್ನು ಪೂರೈಸಲಿದೆ.

Advertisement

ವಿಶೇಷವೆಂದರೆ 300ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಚಿತ್ರ 50 ದಿನ ಪೂರೈಸುತ್ತಿದೆ. ಜೊತೆಗೆ ಇದರಲ್ಲಿ ಬಹುತೇಕ ಚಿತ್ರಮಂದಿರಗಳು ಹೌಸ್‌ಫ‌ುಲ್‌ ಶೋನೊಂದಿಗೆ ಇವತ್ತಿಗೂ ನಡೆಯುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಇದು ಕನ್ನಡ ಚಿತ್ರರಂಗದ ಮಟ್ಟಿಗೆ ದೊಡ್ಡ ದಾಖಲೆಯೇ ಸರಿ.

ಒಂದೆರಡು ವಾರ ಸಿನಿಮಾ ಓಡೋದೇ ಕಷ್ಟ ಎಂಬಂತಿರುವ ಇವತ್ತಿನ ಪರಿಸ್ಥಿತಿಯಲ್ಲಿ “ಕಾಂತಾರ’ ಹಲವು ಅಚ್ಚರಿಗಳೊಂದಿಗೆ ಮುನ್ನುಗ್ಗುತ್ತಿದೆ. ಸಾಮಾನ್ಯವಾಗಿ ಸಿನಿಮಾ ಬಿಡುಗಡೆಯಾದ ಮೊದಲ ವಾರದಿಂದಲೇ ಚಿತ್ರಮಂದಿರಗಳ ಸಂಖ್ಯೆಯಲ್ಲಿ ಇಳಿಕೆಯಾಗುತ್ತಾ ಬರುತ್ತದೆ. ಆದರೆ, “ಕಾಂತಾರ’ ಮಾತ್ರ ಅದಕ್ಕೆ ಉಲ್ಟಾ. ವಾರದಿಂದ ವಾರಕ್ಕೆ ಚಿತ್ರಮಂದಿರಗಳ ಸಂಖ್ಯೆ ಹೆಚ್ಚಾಗುತ್ತಾ ಹೋಗುವ ಮೂಲಕ ಸಿನಿಮಾದ ಕ್ರೇಜ್‌ ಕೂಡಾ ಹೆಚ್ಚಾಯಿತು.

ಕನ್ನಡ ಚಿತ್ರಗಳಿಗೆ ಚಿತ್ರಮಂದಿರ ನೀಡಲು ಆಸಕ್ತಿ ತೋರದ ಅದೆಷ್ಟೋ ಚಿತ್ರಮಂದಿರಗಳು ತಾವಾಗಿಯೇ “ಕಾಂತಾರ’ಕ್ಕೆ ರೆಡ್‌ ಕಾರ್ಪೆಟ್‌ ಹಾಕಿ ಸ್ವಾಗತಿಸಿವೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next