Advertisement

ಒತ್ತುವರಿ ತೆರವು ವೇಳೆ ಗುಡಿಸಲಿಗೆ ಬೆಂಕಿ: ತಾಯಿ – ಮಗಳು ಸಜೀವ ದಹನ

02:44 PM Feb 14, 2023 | Team Udayavani |

ಲಕ್ನೋ: ಅತಿಕ್ರಮಣ ಜಾಗವನ್ನು ತೆರವುಗೊಳಿಸುವ ವೇಳೆ ತಾಯಿ – ಮಗಳು ಮನೆಯೊಳಗೆ ಸಜೀವ ದಹನವಾದ ಘಟನೆ ಕಾನ್ಪುರದ ದೇಹತ್‌ನ ಮದೌಲಿ ಗ್ರಾಮದಲ್ಲಿ ನಡೆದಿದೆ. ಪ್ರಮೀಳಾ ದೀಕ್ಷಿತ್ (45) ನೇಹಾ (20) ಸಜೀವ ದಹನವಾಗಿದ್ದಾರೆ.

Advertisement

ಘಟನೆ ಹಿನ್ನೆಲೆ:

ಸ್ಥಳೀಯ ಅಧಿಕಾರಿಗಳ ಸಮ್ಮುಖದಲ್ಲಿ ಸರ್ಕಾರ ಜಾಗ ಒತ್ತುವರಿ ತೆರವು ಕಾರ್ಯಚರಣೆ ಕಾನ್ಪುರದ ದೇಹತ್‌ನ ಮದೌಲಿ ಗ್ರಾಮದಲ್ಲಿ ಆರಂಭಿಸಿದೆ. ಆರಂಭದಲ್ಲಿ ಗುಡಿಸಲಿಗೆ ಬೆಂಕಿ ಹಚ್ಚಿದ್ದಾರೆ. ಈ ವೇಳೆ ಜನರೆಲ್ಲ ಓಡಿ ಜೀವ ಉಳಿಸಿಕೊಂಡಿದ್ದಾರೆ. ಹತ್ತಾರು ಗುಡಿಸಲು ಮನೆ ಬೆಂಕಿಯ ಕೆನ್ನಾಲೆಯಲ್ಲಿ ಸುಟ್ಟು ಹೋಗುತ್ತಿದ್ದ ವೇಳೆ ಒಂದು ಮನೆಯಲ್ಲಿ ತಾಯಿ – ಮಗಳು ಸಜೀವ ದಹನವಾಗಿದ್ದಾರೆ.

ಇದನ್ನೂ ಓದಿ: ದೆಹಲಿ- ಮುಂಬಯಿ ಬಿಬಿಸಿ ಕಚೇರಿಗಳ ಮೇಲೆ ಐಟಿ ಅಧಿಕಾರಿಗಳ ದಾಳಿ: ಮೊಬೈಲ್‌ ಜಪ್ತಿ

ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡು ಮನೆ ನಿರ್ಮಾಣ ಮಾಡಿಕೊಂಡಿರುವ ಜನರಿಗೆ ಒಂದು ವಾರದ ಹಿಂದೆ ಮನೆ ಖಾಲಿ ಮಾಡಿ ಎಂದು ನೋಟೀಸ್‌ ನೀಡಲಾಗಿತ್ತು ಎಂದು ಪೊಲೀಸರು ಘಟನೆ ಬಳಿಕ ಹೇಳಿದ್ದಾರೆ.

Advertisement

ಆದರೆ ಸ್ಥಳೀಯರು ಇದನ್ನು ನಿರಾಕರಿಸಿದ್ದು, ನಮಗೆ ಯಾವುದೇ ನೋಟೀಸ್‌ ಬಂದಿಲ್ಲ. ಬುಲ್ಡೋಜರ್ ತಂದು ಹಲವು ಮನೆಗಳ ನೆಲಸಮ ಮಾಡಲಾಗಿದೆ. ಈ ವೇಳೆ ಗುಡಿಸಲು ಮನೆಗಳಿಗೆ ಬೆಂಕಿ ಕೊಟ್ಟಿದ್ದಾರೆ. ಮನೆಯ ಒಳಗಿದ್ದ ತಾಯಿ – ಮಗಳು ಸಿಲುಕಿಕೊಂಡು ಮೃತಪಟ್ಟಿದ್ದಾರೆ ಎಂದು ಸ್ಥಳೀಯರು ಹೇಳಿದ್ದಾರೆ.

ಕೊಲೆ ಆರೋಪ:

ಮೃತ ಮಹಿಳೆಯ ಪುತ್ರ ಶಿವಂ ದೀಕ್ಷಿತ್, ಚಾಲಕ ಮೇಲಾಧಿಕಾರಿಗಳ ಆದೇಶದಂತೆ ಮನೆಯನ್ನು ಕೆಡವಿದ್ದಾನೆ. ಮನೆಯ ಒಳಗೆ ಜನ ಇದ್ದರೂ, ಬೆಂಕಿ ಹಚ್ಚಿದ್ದಾರೆ. ಎಲ್ಲರೂ ಓಡಿದ್ದಾರೆ ಯಾರೂ ಕೂಡ ನನ್ನ ತಾಯಿ – ಸಹೋದರಿಯನ್ನು ರಕ್ಷಿಸಿಲ್ಲ. ಬೇಕಂತಲೇ ಇದನ್ನು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಸ್ಥಳೀಯ ಅಧಿಕಾರಿಗಳು ಹಾಗೂ ಪೊಲೀಸರು ತಾಯಿ – ಮಗಳು ತಾವೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದಿದ್ದಾರೆ. ಆದರೆ ಇದನ್ನು ತಳ್ಳಿ ಹಾಕಿರುವ ಗ್ರಾಮಸ್ಥರು ಇದೊಂದು ಕೊಲೆ ಎಂದು ಆರೋಪಿಸಿದ್ದಾರೆ.

ಸದ್ಯ ರಾಜ್ಯ ಪೊಲೀಸರು 13 ಮಂದಿಯ ವಿರುದ್ಧ ಕೊಲೆ ಪ್ರಕರಣವನ್ನು ದಾಖಲಿಸಿದ್ದಾರೆ.  ಬುಲ್ಡೋಜರ್ ಚಾಲಕ ದೀಪಕ್ ನನ್ನು ಬಂಧಿಸಲಾಗಿದ್ದು, ಬೆಂಕಿ ಹಚ್ಚಿದ ಕಂದಾಯ ಅಧಿಕಾರಿ ಅಶೋಕ್ ಸಿಂಗ್ ನನ್ನು ಅಮಾನತುಗೊಳಿಸಲಾಗಿದೆ ಎಂದು ವರದಿ ತಿಳಿಸಿದೆ.

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next