ಕಾನ್ಪುರ: ಉತ್ತರಪ್ರದೇಶದ ಕಾನ್ಪುರದ ಮುಖ್ಯ ಅಂಚೆ ಕಚೇರಿಯಲ್ಲಿ ಅಚಾತುರ್ಯವೊಂದು ನಡೆದಿರುವುದು ಭಾರೀ ಸುದ್ದಿಯಾಗಿದೆ.
ಕುಖ್ಯಾತ ಭೂಗತ ದೊರೆಗಳಾದ ಛೋಟಾ ರಾಜನ್ ಮತ್ತು ಮುನ್ನಾ ಬಜರಂಗಿ ಚಿತ್ರವಿರುವ 24 ಸ್ಟಾಂಪ್ ಗಳನ್ನು ಬಿಡುಗಡೆ ಮಾಡಲಾಗಿದೆ.
ಮೈಸ್ಟಾಂಪ್ ಯೋಜನೆಯಡಿ ಈ ಸ್ಟಾಂಪ್ ಗಳನ್ನು ಬಿಡುಗಡೆ ಮಾಡುವಾಗ, ಸಂಬಂಧಪಟ್ಟ ವ್ಯಕ್ತಿಗಳ ಗುರುತುಪತ್ರವನ್ನೂ ಪಡೆದಿಲ್ಲ. ಅಲ್ಲದೇ ಅರ್ಜಿ ಸಲ್ಲಿಸಿದ ವ್ಯಕ್ತಿ ಯಾರೆಂದೂ ಗೊತ್ತಿಲ್ಲ! ಈ ಹಿನ್ನೆಲೆಯಲ್ಲಿ ಅಂಚೆ ಚೀಟಿ ಸಂಗ್ರಹಣ ವಿಭಾಗದ ಮುಖ್ಯಸ್ಥ ರಜನೀಶ್ ಕುಮಾರ್‌ರನ್ನು ಅಮಾನತುಗೊಳಿಸಿ, ವಿಚಾರಣೆ ನಡೆಸಲಾಗುತ್ತಿದೆ.
ಇದನ್ನೂ ಓದಿ:ಲಾತೂರ್ ರೈಲು ಕೋಚ್ ಫ್ಯಾಕ್ಟರಿಯಲ್ಲಿ ಮೊದಲ ಬೋಗಿ ಉತ್ಪಾದನೆ
ಅಂಚೆ ಇಲಾಖೆ “ಮೈ ಸ್ಟಾಂಪ್’ ಯೋಜನೆಯಡಿ ವ್ಯಕ್ತಿಗಳು ತಮ್ಮ ಅಥವಾ ಕುಟುಂಬ ಸದಸ್ಯರ ಸ್ಟಾಂಪ್ ಗಳನ್ನು ಹೊಂದಲು ಅವಕಾಶ ನೀಡಿದೆ. ಅದಕ್ಕಾಗಿ 300 ರೂ. ಪಾವತಿಸಿದರೆ ಸಾಕು.