Advertisement

ಕೇರಳದ ಮನೆಯಲ್ಲಿ ಬಾಂಬ್ ಸ್ಫೋಟ: ಪತಿ, ಪತ್ನಿಗೆ ಗಾಯ

10:07 PM Mar 13, 2023 | Team Udayavani |

ಕಣ್ಣೂರು: ಕೇರಳದ ಕಣ್ಣೂರು ಜಿಲ್ಲೆಯ ಕಕ್ಕಯಂಗಡ ಪ್ರದೇಶದ ಮನೆಯೊಂದರಲ್ಲಿ ಭಾನವಾರ ರಾತ್ರಿ ಬಾಂಬ್‌ ಸ್ಫೋಟಗೊಂಡಿದೆ. ಇದರಿಂದ ಪತಿ, ಪತ್ನಿ ಗಾಯಗೊಂಡಿದ್ದಾರೆ. ಮನೆಯಲ್ಲಿ ಬಾಂಬ್‌ ತಯಾರಿಸುತ್ತಿದ್ದ ಸಂದರ್ಭದಲ್ಲಿ ಸ್ಫೋಟ ಸಂಭವಿಸಿದೆ ಎನ್ನಲಾಗಿದೆ.

Advertisement

ಆದರೆ ಈ ಬಗ್ಗೆ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಘಟನೆಯಲ್ಲಿ ಸಂತೋಷ್‌ ಮತ್ತು ಅವರ ಪತ್ನಿ ಲಸಿತಾ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮನೆಯ ಮತ್ತೂಂದು ಕೊಠಡಿಯಲ್ಲಿ ಸಂತೋಷ್‌ ಅವರ ತಾಯಿ ಮತ್ತು ಪುತ್ರಿ ಇದ್ದು, ಅವರು ಬಚಾವಾಗಿದ್ದಾರೆ. ಘಟನೆ ಕುರಿತು ಮುಜಕ್ಕುನ್ನು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next