ತೆಕ್ಕಟ್ಟೆ , ಜು.18 : ದಿ. ಪಾಲ್ಕನ್ ಕ್ಲಬ್, ಕನ್ನುಕೆರೆ, ತೆಕ್ಕಟ್ಟೆ ಇವರ ಆಶ್ರಯದಲ್ಲಿ ತೆಕ್ಕಟ್ಟೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕೋವಿಡ್ 19 ಸಂಕಷ್ಟದಿಂದ ನಲುಗಿದ ಸುಮಾರು 75ಕ್ಕೂ ಅಧಿಕ ಅಶಕ್ತ ಕುಟುಂಬಗಳಿಗೆ ಸುಮಾರು ರೂ.3.5 ಲಕ್ಷ ವೆಚ್ಚದಲ್ಲಿ ಅಗತ್ಯ ವಸ್ತುಗಳ ಕಿಟ್ ಹಾಗೂ ಆರ್ಥಿಕ ನೆರವು ವಿತರಣಾ ಕಾರ್ಯಕ್ರಮವು ತೆಕ್ಕಟ್ಟೆ ಗ್ರಾಮ ಪಂಚಾಯತ್‌ನ ಮಾಜಿ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ ಅಧ್ಯಕ್ಷತೆಯಲ್ಲಿ ಜು.18 ರಂದು ತೆಕ್ಕಟ್ಟೆ ಶ್ರೀ ದುರ್ಗಾಪರಮೇಶ್ವರೀ ಕಲ್ಯಾಣ ಮಂಟಪ ದ ಸಭಾಂಗಣದಲ್ಲಿ ನಡೆಯಿತು.
ತೆಕ್ಕಟ್ಟೆ ಗ್ರಾಮ ಪಂಚಾಯತ್‌ನ ಮಾಜಿ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ ಮಾತನಾಡಿದರು.ಈ ಸಂದರ್ಭದಲ್ಲಿ ಯೋಧ ಸಿದ್ದಣ್ಣ ಗೌಡ ಹಾಗೂ ಕೋವಿಡ್ 19 ಸಂದರ್ಭದಲ್ಲಿ ಮಾನವೀಯವಾಗಿ ಸೇವೆ ಸಲ್ಲಿಸಿದ ಸಮಾಜಸೇವಕರಾದ ಅಲ್ಫಾಜ್, ಸಂತೋಷ್ ಶೆಟ್ಟಿ ಹಾಗೂ ಆರೀಫ್ ಅವರನ್ನು ಗುರುತಿಸಿ ಸಮ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ತೆಕ್ಕಟ್ಟೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಮಮತಾ ದೇವಾಡಿಗ, ಗ್ರಾ.ಪಂ.ಉಪಾಧ್ಯಕ್ಷ ಸಂಜೀವ ದೇವಾಡಿಗ, ಕುಂದಾಪುರ ಯುವ ಕಾಂಗ್ರೆಸ್‌ನ ಅಧ್ಯಕ್ಷ ನಿಶ್ಚಿತ್ ಆರ್.ಶೆಟ್ಟಿ,ಕನ್ನುಕರೆ ಜಾಮೀಯಾ ಮಸೀದಿಯಾ ಅಧ್ಯಕ್ಷ ಶಾನ್‌ವಾಜ್, ತೆಕ್ಕಟ್ಟೆ ರೋಟರಿ ಕ್ಲಬ್‌ನ ನೂತನ ಅಧ್ಯಕ್ಷ ಉದ್ಯಮಿ ಮಂಜುನಾಥ ಕಾಂಚನ್ ಕೊರ್ಗಿ, ಕನ್ನುಕೆರೆ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಪ್ರಶಾಂತ್ ದೇವಾಡಿಗ, ಉದ್ಯಮಿ ಅಬ್ದುಲ್ ಘನಿØ ಕನ್ನುಕರೆ, ಉದ್ಯಮಿ ಖರಮಾತುಲ್ಲಾ, ಡಾ| ಪ್ರಸಾದ್ ಶೆಟ್ಟಿ, ಉದ್ಯಮಿ ರಫಿಕ್ , ತೆಕ್ಕಟ್ಟೆ ಫ್ರೆಂಡ್ಸ್ (ರಿ.) ತೆಕ್ಕಟ್ಟೆ ಇದರ ಅಧ್ಯಕ್ಷ ರವಿಚಂದ್ರ ಶೆಟ್ಟಿ , ದಿ.ಪಾಲ್ಕನ್ ಕ್ಲಬ್, ಕನ್ನುಕೆರೆ, ತೆಕ್ಕಟ್ಟೆ ಇದರ ಸಂಸ್ಥಾಪಕ ಹಿದಾಯ ತುಲ್ಲಾ, ದಿ.ಪಾಲ್ಕನ್ ಕ್ಲಬ್ ಇದರ ಅಧ್ಯಕ್ಷ ಮಹಮದ್ ಸಲಾಂ ಕನ್ನುಕೆರೆ , ಮಹಮದ್‌ಆಸಿಫ್ ತೆಕ್ಕಟ್ಟೆ ಮತ್ತಿತರರು ಉಪಸ್ಥಿತರಿದ್ದರು. ದಿ.ಪಾಲ್ಕನ್ ಕ್ಲಬ್ ಇದರ ಅಧ್ಯಕ್ಷ ಮಹಮದ್ ಸಲಾಂ ಕನ್ನುಕೆರೆ ಸ್ವಾಗತಿಸಿ, ಪ್ರಸ್ತಾವನೆಗೈದು, ಅಲ್ಫಾಜ್ ನಿರೂಪಿಸಿ, ವಂದಿಸಿದರು.