ಚಿಕ್ಕಮಗಳೂರು: ಆರೋಗ್ಯ ಸರಿ ಇಲ್ಲ, ನಾನು ಸಿಎಂ ಆಗಬೇಕಂದ್ರೆ ನೀವು ಮತ ಹಾಕಬೇಕು ಎಂದು ಸಿದ್ದರಾಮಯ್ಯ ಭಾವನಾತ್ಮಕವಾಗಿ ಮತ ಕೇಳುತ್ತಿದ್ದಾರೆ. ಅವರು ನೂರು ಕಾಲ ಬದುಕಲಿ, ನಾನು ಪ್ರಾರ್ಥನೆ ಮಾಡುತ್ತೇನೆ ಎಂದು ಕಡೂರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಸಿದ್ದರಾಮಯ್ಯ ಅವರು 2013 ರಲ್ಲೂ ಇದೇ ರೀತಿ ಹೇಳಿದ್ದರು. ಜನ ಅವರನ್ನು ನಂಬಿ ಮತ ಹಾಕಿದ್ದರು. ಆದರೆ, ಅವರ ಆಡಳಿತ ಕಾಲದಲ್ಲಿ ಕೊಲೆ, ಸುಲಿಗೆ ಜಾಸ್ತಿಯಿತ್ತು. ಈಗ ಜನ ಅವರನ್ನು ನಂಬದೆ, ವಿರೋಧ ಪಕ್ಷದಲ್ಲಿ ಕೂರಿಸಿದ್ದಾರೆ ಎಂದರು.
ಇದನ್ನೂ ಓದಿ:ಜಾಗತಿಕ ಅಧಃಪತನಕ್ಕೆ ಕೋವಿಡ್ ಸೋಂಕು, ಉಕ್ರೇನ್ ಯುದ್ಧ ಕಾರಣವಾಗಿದೆ: ಪ್ರಧಾನಿ ಮೋದಿ
ಈಗ ಮತ್ತೆ ಅವರನ್ನು ನಂಬುವ ಸ್ಥಿತಿಯಲ್ಲಿ ಜನರಿಲ್ಲ. ಕನ್ನಡಿಗರು ಇಂತಹ ಮಾತಿಗೆ ಬೆಲೆ ನೀಡಲ್ಲ. ಕನ್ಮಡಿಗರು ವಿಶ್ಲೇಷಣೆ ಮಾಡಿ ಮತ ಹಾಕುತ್ತಾರೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.