Advertisement
ನಮ್ಮದು ಅಗಾಧ ಕನ್ನಡಕಪ್ರೇಮ! ಹುಡುಗರ ಸಾಲಿನಲ್ಲಿ ನಾವು ಮೂವರು ಕನ್ನಡಕಧಾರಿಗಳು. ಆದರೆ, ಹುಡುಗಿಯರ ಸಾಲಿನಲ್ಲಿ ನೀ ಒಬ್ಬಳೇ. ಪದವಿಯ ಕಡೆಯ ವರ್ಷದ ದಿನಗಳ ನೆನಪು ಈಗಲೂ ಹಸಿರಾಗಿದೆ. ನಮ್ಮ ವಿಭಾಗದ ನೂರಾ ಹನ್ನೆರಡು ವಿದ್ಯಾರ್ಥಿಗಳುಈ ವರ್ಷ ಒಂದು ದಿನವೂ ತಪ್ಪಿಸಿಕೊಳ್ಳದೆ ಕಾಲೇಜಿಗೆ ಬರಬೇಕೆಂಬ ಅಲಿಖೀತ ಒಪ್ಪಂದ ನೆನಪಿದೆಯಾ? ಒಪ್ಪಂದದ ಮೇರೆ ಮೀರಿದವರು ಪಾರ್ಟಿ ಕೊಡಿಸಬೇಕೆಂಬ ಕರಾರು ಇತ್ತಲ್ಲವೇ? ಅದೇಕೋ ಗೊತ್ತಿಲ್ಲ. ನನ್ನ ಕನ್ನಡಕ ಚೆನ್ನಾಗಿಯೇ ಇದ್ದರೂ, ನಿನ್ನ ಕನ್ನಡಕದ ಮೇಲೆ ನನಗೇಕೋ ಕಣ್ಣು.
ಪದವಿಯ ಮೊದಲ ವರ್ಷದಲ್ಲಿ ತಮಾಷೆಗೆಂದು ನನ್ನ ನಿನ್ನ ಕನ್ನಡಕಗಳನ್ನು ಬದಲಾಯಿಸಿಕೊಂಡು ಆದ ಫಜೀತಿ ಈಗಲೂ ನಗು ಸ್ಪುರಿಸುತ್ತದೆ. ಅದೃಷ್ಟವಶಾತ್, ಒಂದೇ ಒಂದು ಪೀರಿಯಡ್ ಹೀಗೆ ಬದಲಾಯಿಸಿಕೊಂಡದ್ದು! ಅದೂ ಕನ್ನಡ ತರಗತಿಯಲ್ಲಿ. ವರ್ಷಕ್ಕೊಂದರಂತೆ ನಾನೂ ಕನ್ನಡಕ ಬದಲಿಸು ತ್ತೇನೆ. ಆದರೆ, ನಾನೂ ನೀನೂ ಬದಲಾಗಿಲ್ಲ. ಹೊಸ ವರುಷದ ಹೊಸ ಕನ್ನಡಕದ ಕಣ್ಣಿನಲ್ಲಿ ನಿನ್ನನ್ನು ನೋಡ ಬಯಸುತ್ತೇನೆ.
Related Articles
Advertisement