Advertisement
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಇಲಾಖೆ ಹಾಗೂ ಭಾಷಾಂತರ ನಿರ್ದೇಶನಾಲಯ ಹೊರತಂದಿರುವ ಕಾನೂನು ಪದಕೋಶ ಹಾಗೂ 15 ಕೇಂದ್ರ ಅಧಿನಿಯಮಗಳನ್ನು ಇಂದು ಬೆಂಗಳೂರಿನ ವಿಧಾನಸೌಧದಲ್ಲಿ ಲೋಕಾರ್ಪಣೆ ಮಾಡಿ ಮಾತನಾಡುತ್ತಿದ್ದರು.
Related Articles
Advertisement
ನ್ಯಾಯ, ನೀತಿ ಧರ್ಮ ಸದಾ ಒಟ್ಟಿಗೆ ಸಾಗುತ್ತದೆ:
ಇದೇ ಸಂದರ್ಭದಲ್ಲಿ ಇಸ್ಕಾನ್ ಸಂಸ್ಥಾಪಕ ಆಚಾರ್ಯ ಭಕ್ತಿವೇದಾಂತ ಸ್ವಾಮಿ ಪ್ರಭುಪಾದರ 125 ನೇ ಜನ್ಮ ದಿನಾಚರಣೆಯ ಸ್ಮರಣಾರ್ಥ ಹೊರತಂದಿರುವ ನಾಣ್ಯವನ್ನು ಸಮರ್ಪಣೆ ಮಾಡಿ ಮಾತನಾಡಿದ ಮುಖ್ಯಮಂತ್ರಿಗಳು, ನ್ಯಾಯ, ನೀತಿ, ಧರ್ಮ ಸದಾ ಒಟ್ಟಿಗೆ ಸಾಗುತ್ತದೆ. ಎಲ್ಲಿ ನ್ಯಾಯ ಇರುತ್ತದೆಯೋ ಅಲ್ಲಿ ನೀತಿ ಇರಬೇಕು. ಇವೆರಡೂ ಇದ್ದಲ್ಲಿ ಧರ್ಮ ಇರಲೇಬೇಕು. ಇಂದು ಒಂದೆಡೆ ಕಾನೂನಿನ ಪದಕೋಶ ಬಿಡುಗಡೆಯಾಗಿದ್ದು, ಮತ್ತೊಂದೆಡೆ ಪ್ರಭುಪಾದರನ್ನು ನೆನಪು ಮಾಡಿಕೊಂಡಿದ್ದೇವೆ. ಅವರು ಹಾಕಿಕೊಟ್ಟ ಕೃಷ್ಣನ ಪಥದಲ್ಲಿ ನಡೆಯಬೇಕು. ಭಗವದ್ಗೀತೆ ಮೂಲಕ ಬದುಕಿಗೆ ಕೃಷ್ಣ ಮಾರ್ಗದರ್ಶನ ನೀಡಿದಂತೆ ಅತ್ಯಂತ ಸರಳವಾಗಿ ಉತ್ಸಾಹದ ಮುಖಾಂತರ ಜಗತ್ತಿನ ಭಕ್ತರಲ್ಲಿ ತುಂಬಿದರು. ನ್ಯಾಯ,ನೀತಿ ಕೃಷ್ಣನ ಧರ್ಮ. ಈ ಮೂರೂ ಅತ್ಯಂತ ಶ್ರೇಷ್ಠ ವಿಧಾನಸೌಧದಲ್ಲಿ ನಡೆದಿರುವುದು ಯೋಗಾಯೋಗ. ನ್ಯಾಯಾ, ನೀತಿ, ಧರ್ಮ ಪಾಲನೆಯೇ ಈ ಶಕ್ತಿಸೌಧದ ಮುಖ್ಯ ಕರ್ತವ್ಯವಾಗಿದೆ ಎಂದರು.
ಇಸ್ಕಾನ್ ದಕ್ಷಿಣ ಶಾಖಾಧ್ಯಕ್ಷ ಶ್ರೀ ವರದಕೃಷ್ಣದಾಸ, ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಮೊದಲಾದವರು ಉಪಸ್ಥಿತರಿದ್ದರು.