Advertisement

ಕನ್ನಡ ಚಿತ್ರರಂಗದ ಹಿರಿಯ ನಟಿ ಸುರೇಖಾ ಇನ್ನಿಲ್ಲ

01:52 PM Jun 06, 2021 | Team Udayavani |

ಬೆಂಗಳೂರು : ಡಾ. ರಾಜ್‌ಕುಮಾರ್ ಸೇರಿದಂತೆ ಕನ್ನಡದ ಹಲವು ನಟರ ಜೊತೆಗೆ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದ ನಟಿ ಸುರೇಖಾ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 66 ವರ್ಷ ವಯಸ್ಸಾಗಿತ್ತು.

Advertisement

160ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದ ಸುರೇಖಾ ಬೆಂಗಳೂರು ನಗರದಲ್ಲಿ ನಿಧನರಾದರು. ಮಣ್ಣಿನ ಮಕ್ಕಳು, ಸಂಭ್ರಮ, ಕಿಂಗ್, ಶಂಕರ್ ಸುಂದರ್, ಆಲೆಮನೆ, ಬಿಳಿಗಿರಿಯ ಬನದಲ್ಲಿ ಚಿತ್ರಗಳಲ್ಲಿ ರಾಜ್‌ಕುಮಾರ್ ಜತೆ ನಟಿಸಿದ್ದಾರೆ.

ನಟಿ ಸೆನ್ಸಾರ್ ಬೋರ್ಡ್ ಸದಸ್ಯೆ ಹಾಗೂ ಸ್ಟೇಟ್ ಅವಾರ್ಡ್ ಕಮಿಟಿಯ ಸದಸ್ಯೆಯಾಗಿದ್ದರು. ಸುರೇಖಾ ಅವರಿಗೆ ವಿವಾಹವಾಗಿರಲಿಲ್ಲ, ಸೋದರಿ ಶಾರದಾ ಹಾಗೂ ಪ್ರೇಮಾ ಅವರನ್ನು ಅಗಲಿರುವ ನಟಿಯ ಅಂತ್ಯ ಸಂಸ್ಕಾರ ಇಂದು ಬನಶಂಕರಿ ಚಿತಾಗಾರದಲ್ಲಿ ನೆರವೇರಲಿದೆ ಎಂದು ಮೂಲಗಳು ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next