ಮುಂಬಯಿ: ನಮ್ಮ ಕನ್ನಡ ಸಂಘವು ಕನ್ನಡದ ಉಳಿವಿಗಾಗಿ ಮಾತ್ರವಲ್ಲ ಕನ್ನಡಾಂಬೆಯ ಆರಾಧನೆಯಾಗಿ ಸೇವೆ ಸಲ್ಲಿಸುತ್ತಿದೆ. ಹೊರನಾಡ, ಕರ್ಮಭೂಮಿ ಮುಂಬಯಿಯಲ್ಲಿ ಒಳನಾಡಿನ ನಂತರ ಅತ್ಯಾಧಿಕ ಹೆಚ್ಚು ಕನ್ನಡಿಗರಿದ್ದಾರೆ. ಇಲ್ಲಿ ಕನ್ನಡದ ಸೇವೆ ಪ್ರತಿಯೋರ್ವರಿಗೂ ಅಭ್ಯಾಸವಾದ ಕಾರಣ ಕನ್ನಡ ಭಾಷೆ, ಸಂಸ್ಕೃತಿ ನಿರಂತರವಾಗಿ ಜೀವಾಳವಾಗಿದೆ. ಮುಂಬಯಿಯಲ್ಲಿ ಕನ್ನಡದ ಕಹಳೆ ಮೊಳಗಿಸಿದ ಹಿರಿಮೆ ನಮ್ಮ ಸಂಸ್ಥೆಗಿದೆ ಎಂದು ಕನ್ನಡ ಸಂಘ ಸಾಂತಾಕ್ರೂಜ್ ಇದರ ಸಂಘದ ಅಧ್ಯಕ್ಷ ಎಲ್. ವಿ. ಅಮೀನ್ ಅವರು ತಿಳಿಸಿದರು.
ಬಿಲ್ಲವ ಭವನದ ಕಿರು ಸಭಾಗೃಹದಲ್ಲಿ ಆ. 18 ರಂದು ಸಂಜೆ ನಡೆದ ಕನ್ನಡ ಸಂಘ ಸಾಂತಾಕ್ರೂಜ್ ಇದರ 61 ನೇ ವಾರ್ಷಿಕ ಮಹಾಸಭೆ¿ು ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಂಸ್ಥೆಯ ನಾಡು-ನುಡಿಯಪರ ಕಾರ್ಯಕ್ರಮಗಳಿಗೆ ಎಲ್ಲರ ಸಹಕಾರ, ಪ್ರೋತ್ಸಾಹ ಸದಾಯಿರಲಿ ಎಂದು ನುಡಿದರು.
ಸಂಘದ ಉಪಾಧ್ಯಕ್ಷ ಗುಣಪಾಲ ಶೆಟ್ಟಿ ಐಕಳ, ಗೌರವ ಪ್ರಧಾನ ಕೋಶಾಧಿಕಾರಿ ಸುಧಾಕರ್ ಉಚ್ಚಿಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಾಮಾಜಿಕ-ಸಾಂಸ್ಕೃತಿಕ ಸಮಿತಿ ಕಾರ್ಯದರ್ಶಿ ಲಕ್ಷಿ¾à ಎನ್. ಕೋಟ್ಯಾನ್ ಪ್ರಾರ್ಥನೆಗೈದರು. ಗೌರವ ಪ್ರಧಾನ ಕಾರ್ಯದರ್ಶಿ ಸುಜತಾ ಆರ್.ಶೆಟ್ಟಿ ಸ್ವಾಗತಿಸಿ ಗತ ವಾರ್ಷಿಕ ಮಹಾಸಭೆ ವರದಿ ವಾಚಿಸಿದರು. ಜೊತೆ ಕೋಶಾಧಿಕಾರಿ ದಿನೇಶ್ ಬಿ. ಅಮೀನ್ ಗತ ವಾರ್ಷಿಕ ಲೆಕ್ಕಪತ್ರ ಮಂಡಿಸಿದರು. ಜೊತೆ ಕಾರ್ಯದರ್ಶಿ ಚಂದ್ರಹಾಸ ಜೆ. ಕೋಟ್ಯಾನ್ ಅವರು ವಂದಿಸಿದರು.
ಗೌರವಾರ್ಪಣೆ
ಇತ್ತೀಚೆಗೆ ಗ್ಲೋಬಲ್ ಫೌಂಡೇಶನ್ ಅಚೀವರ್ ಸಂಸ್ಥೆಯು ರಷ್ಯಾ ರಾಷ್ಟ್ರದ ತಾಷೆRಂಟ್‌ನಲ್ಲಿ ನಡೆದ ಸಮಾವೇಶದಲ್ಲಿ ಕನ್ನಡ ಸಂಘ ಸಾಂತಾಕ್ರೂಜ್ ಸಂಸ್ಥೆಯ ಅಧ್ಯಕ್ಷ ಎಲ್. ವಿ. ಅಮೀನ್ ಅವರಿಗೆ “ಏಯಾ ಪೆಸಿಫಿಕ್ ಅಚೀವರ್ ಅವಾರ್ಡ್’ ಪ್ರಶಸ್ತಿ ಪ್ರದಾನಿಸಿದ ಗೌರವ ಈ ಸಂಸ್ಥೆಯ ಹಿರಿಮೆಯಾಗಿದೆ ಎಂದು ಸಂಘದ ಪರವಾಗಿ ಸಂಸ್ಥೆಯ ಪ್ರೇಮಾ ಆರ್. ಕೋಟ್ಯಾನ್ ಮತ್ತಿತರರು ಎಲ್. ವಿ. ಅಮೀನ್ ಅವರನ್ನು ಗೌರವಿಸಲಾಯಿತು.
ಸಭೆಯಲ್ಲಿ ಕಾರ್ಯಕಾರಿ ಸಮಿತಿಯ ಸದಸ್ಯರಾದ ಗೋವಿಂದ ಆರ್. ಬಂಗೇರ, ಸುಮಾ ಎಂ. ಪೂಜಾರಿ, ಶಾಲಿನಿ ಎಸ್. ಶೆಟ್ಟಿ, ಆರ್. ಪಿ. ಹೆಗ್ಡೆ, ಸಲಹಾ ಸಮಿತಿಯ ಸದಸ್ಯರಾದ ನಾರಾಯಣ ಎಸ್. ಶೆಟ್ಟಿ, ಬಿ. ಆರ್. ಪೂಂಜಾ, ಎನ್. ಎಂ. ಸನೀಲ್, ವಿಶೇಷ ಆಮಂತ್ರಿತ ಸದಸ್ಯರಾದ ಶಿವರಾಮ ಎಂ. ಕೋಟ್ಯಾನ್, ವಿಜಯಕುಮಾರ್ ಕೆ. ಕೋಟ್ಯಾನ್, ಲಿಂಗಪ್ಪ ಬಿ. ಅಮೀನ್, ಹರೀಶ್ ಜೆ. ಪೂಜಾರಿ, ಸುಜಾತಾ ಸುಧಾಕರ್ ಉಚ್ಚಿಲ್, ಆಂತರಿಕ ಲೆಕ್ಕ ಪರಿಶೋಧಕ ರಾಜಶೇಖರ್ ಎ. ಅಂಚನ್, ಬಾಹ್ಯ ಲೆಕ್ಕ ಪರಿಶೋಧಕ ಎಚ್. ಡಿ. ಪೂಜಾರಿ, ಶಿಕ್ಷಣ ಸಮಿತಿಯ ಕಾರ್ಯಾಧ್ಯಕ್ಷ ಬನ್ನಂಜೆ ರವೀಂದ್ರ ಅಮೀನ್, ಕಾರ್ಯದರ್ಶಿ ಶಕೀಲಾ ಪಿ. ಶೆಟ್ಟಿ, ಸಾಮಾಜಿಕ-ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷೆ ವನಿತಾ ವೈ. ನೋಂದ ಸೇರಿದಂತೆ ಸದಸ್ಯರು ಉಪಸ್ಥಿತರಿದ್ದರು.
ಚಿತ್ರ-ವರದಿ : ರೋನ್ಸ್ ಬಂಟ್ವಾಳ್