Advertisement

ಕನ್ನಡ ಸಂಘ ಪುಣೆ ವತಿಯಿಂದ ನಾಟ್ಯ ಸಂಜೆ  

03:58 PM Jun 07, 2017 | |

ಪುಣೆ: ಕನ್ನಡ ಸಂಘ ಪುಣೆ ವತಿಯಿಂದ ಇಂಡಿಯನ್‌ ಕೌನ್ಸಿಲ್‌ ಫಾರ್‌ ಕಲ್ಚರಲ… ರಿಲೇಶನ್ಸ್‌ (ಐಸಿಸಿಆರ್‌) ಸಹಭಾಗಿತ್ವದಲ್ಲಿ ಮೇ 26ರಂದು ಸಂಜೆ ಸಂಘದ ಕನ್ನಡ ಮಾಧ್ಯಮ ಹೈಸ್ಕೂಲ್‌ ಸಭಾಂಗಣ ಕೇತ್ಕರ್‌ರೋಡ್‌ ಪುಣೆ ಇಲ್ಲಿ ಭರತನಾಟ್ಯ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

Advertisement

ಈ ಕಾರ್ಯಕ್ರಮದಲ್ಲಿ ಅಹ್ಮದಾಬಾದ್‌ನ ಪ್ರಸಿದ್ಧ ನೃತ್ಯ ಕಲಾವಿದೆ ಶಿವಾಂಗಿ ವಿಕ್ರಂ ಮತ್ತು ಪುಣೆಯ ಉದಯೋನ್ಮುಖ ಭರತನಾಟ್ಯ ಪಟು ಹಾಗು ಪ್ರಸಿದ್ಧ ನೃತ್ಯ ಪರಿಣತೆ ಸುಚೇತಾ ಚಾಪೇಕರ್‌ ಅವರ ಶಿಷ್ಯೆ ಯಶೋದಾ ಪಾಟಂಕರ್‌ ಅವರು ಅಮೋಘ ನೃತ್ಯ ಪ್ರದರ್ಶನವನ್ನಿತ್ತು ಪ್ರೇಕ್ಷಕರ ಮನ ಸೂರೆಗೊಂಡರು. ಅದ್ಭುತ ಕಲಾ ಶ್ರೀಮಂತಿಕೆಯೊಂದಿಗೆ ಪ್ರದರ್ಶನ ಗೊಂಡ ಈ ಕಾರ್ಯಕ್ರಮದಲ್ಲಿ  ಕಲಾವಿದರು ತಮ್ಮ ನೃತ್ಯಗಳ ಬಗ್ಗೆ ವಿವರಗಳನ್ನು ತಿಳಿಸುತ್ತಾ ಮರಾಠಿ ಕನ್ನಡ, ತಮಿಳು ತೆಲುಗು ಭಾಷೆಗಳ ಮಧುರ ಹಾಡುಗಳಿಗೆ ಹೆಜ್ಜೆಹಾಕಿದರು.

ಪುಣೆಯ ನೃತ್ಯ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದು ಕಾರ್ಯಕ್ರಮ ಯಶಸ್ವಿಗೊಳಿಸಿದರು. ಸಮಾರಂಭದಲ್ಲಿ ಕನ್ನಡ ಸಂಘದ ಉಪಾಧ್ಯಕ್ಷೆ ಇಂದಿರಾ ಸಾಲ್ಯಾನ್‌, ಜನಸಂಪರ್ಕಾಧಿಕಾರಿ ರಾಮದಾಸ್‌ ಆಚಾರ್ಯ, ಮುಖಸ್ಥೆ ಅನುಜಾ ಚಕ್ರವರ್ತಿ, ಪ್ರಸಿದ್ಧ ನೃತ್ಯ ಕಲಾವಿದೆ  ಸುಚೇತಾ ಚಾಪೇಕರ್‌ ಮತ್ತು ಪುಣೆಯ ಕಲಾಭಿಮಾನಿಗಳು ಹಾಜರಿದ್ದರು. ಕೊನೆಯಲ್ಲಿ ಇಂದಿರಾ ಸಾಲ್ಯಾನ್‌, ಅನುಜಾ ಚಕ್ರವರ್ತಿ, ಸುಚೇತಾ ಚಾಪೇಕರ್‌ ಜೊತೆಯಾಗಿ ಕಲಾವಿದರನ್ನು ಸತ್ಕರಿಸಿದರು. ಇಂದಿರಾ ಸಾಲ್ಯಾನ್‌ ವಂದಿಸಿದರು. 

ಪ್ರತೀ ವರ್ಷ ಕನ್ನಡ ಸಂಘ ಮತ್ತು  ಜೊತೆಯಾಗಿ ಇಂತಹ ಹಲವು ಕಾರ್ಯಕ್ರಮಗಳನ್ನು ಪುಣೆಯಲ್ಲಿ ಆಯೋಜಿಸುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next