ಹಾವೇರಿ: ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಮೆರವಣಿಗೆ ಕಾರ್ಯಕ್ರಮವು ಪುರಸಿದ್ಧೇಶ್ವರ ದೇವಾಲಯ ಆವರಣದಲ್ಲಿ ಪೂರ್ವ ನಿಗದಿಯಂತೆ ಸಮ್ಮೇಳನದ ಮೊದಲ ದಿನವಾದ ಜ.6ರಂದು ಸರಿಯಾದ ಸಮಯಕ್ಕೆ ಆರಂಭವಾಯಿತು.
ತಾಯಿ ಭುವನೇಶ್ವರಿ ಭಾವಚಿತ್ರ ಹೊತ್ತ ರಥವು ಮೆರವಣಿಗೆಯ ವಿಶೇಷ ಆಕರ್ಷಣೆಯಾಗಿತ್ತು.
ಅಖಿಲ ಭಾರತ ಸಾಹಿತ್ಯ ಸಮ್ಮೆಳನದ ಅಧ್ಯಕ್ಷರಾದ ಕನ್ನಡದ ಮೇರು ಸಾಹಿತಿ ಡಾ.ದೊಡ್ಡರಂಗೇಗೌಡ ಅವರು ಅಲಂಕೃತ ಸಾರೋಟಿನಲ್ಲಿ ವಿರಾಜಮಾನರಾಗಿ, ಮೆರವಣಿಗೆಯುದ್ದಕ್ಕೂ ಜನಸಮೂಹದತ್ತ ಕೈಬೀಸಿ, ನುಡಿ ಅಭಿಮಾನಿಗಳಿಗೆ ಹಣೆಮಣಿದು ಗೌರವ ಸಲ್ಲಿಸಿದರು.
ಮೆರವಣಿಗೆಯ ವಿಶೇಷ ಆಕರ್ಷಣೆಯಾದ ಚಿಲಿಪಿಲಿ ಗೊಂಬೆ, ಕಂಸಾಳೆ, ಕೀಲು ಕುದುರೆ ಸೇರಿದಂತೆ ನೂರಾರು ಪ್ರಕಾರದ ವೈವಿದ್ಯಮಯ ಕಲಾ ತಂಡಗಳು ಭಾಗಿಯಾಗಿ ನಾಡಿನ ಸಾಂಸ್ಕೃತಿಕ ಪರಂಪರೆಯ ವೈವಿಧ್ಯತೆಯನ್ನು ಪ್ರದರ್ಶಿಸಿ ಕಣ್ಮನ ತಣಿಸಿದವು. ಕೊಂಬು ಕಹಳೆ, ತಮಟೆ, ಡೊಳ್ಳು, ಖಣಿ ಹಲಿಗೆಯ ಸದ್ದು ದಾರಿಯುದ್ದಕ್ಕೂ ನುಡಿ ಜಾತ್ರೆಯ ಕಳೆ ಹೆಚ್ಚಿಸಿದವು.
ಪುರಸಿದ್ಧೇಶ್ವರ ದೇವಾಲಯ ಎದುರಿನಿಂದ, ಗಾಂಧೀ ವೃತ್ತ, ಮೈಲಾರ ಮಹದೇವ ವೃತ್ತ, ಹೊಸಮನಿ ಸಿದ್ದಪ್ಪ ವೃತ್ತ, ಹಳೆ ಪಿಬಿ ರಸ್ತೆ ಮೂಲಕ ಸಾಗಿದ ಮೆರವಣಿಗೆಯಲ್ಲಿ ಶಿವಮ್ಮ ತಂಡದಿಂದ ತಮಟೆ ನೃತ್ಯ, ಶಾಲಿನಿ ತಂಡದಿಂದ ಚಿಲಿಪಿಲಿ ಗೊಂಬೆ, ಕವಿತಾ ತಂಡದಿಂದ ಪಟ ಕುಣಿತ, ಸವಿತಾ ತಂಡದಿಂದ ಕಂಸಾಳೆ ನೃತ್ಯ, ಸುಷ್ಮಾ ತಂಡದಿಂದ ಲಂಬಾಣಿ ನೃತ್ಯ, ಕೇರಳ ವಿಶೇಷ ತಂಡದಿಂದ ಚಂಡಿ ತಯಂ, ಬಸವರಾಜ ಹೆಚ್.ಇ ಜಾನಪದ ಕಲಾ ತಂಡದಿಂದ ಕೀಲು ಕುದುರೆ, ಯಲ್ಲಪ್ಪ ಬಾಗಿವತ, ಲೋಹಿತ ಕುಮಾರ ಹೆಚ್ ತಂಡದಿಂದ ದೇವಿ ನೃತ್ಯ ಡೊಳ್ಳು, ಕೆ.ಹೆಚ್.ಪಲ್ಲವಿ ತಂಡದಿಂದ ಮಹಿಳಾ ವೀರಗಾಸೆ, ಶಿವು ಭಜಂತ್ರಿ ತಂಡದಿಂದ ಕರಡಿ ಮಜಲು, ಸುಭಾಸಚಂದ್ರ ವೀರಪ್ಪ ಹೊಸಮನಿ ತಂಡದಿಂದ ಖಣಿ ವಾದನ ಪ್ರದರ್ಶನ ನಡೆಯಿತು.
ಎ.ಕೃಷ್ಣಪ್ಪ ತಂಡದಿಂದ ಬೇಡರ ಕುಣಿತ, ಶಿವಣ್ಣ ಅಂಕನಹಳ್ಳಿ (ನಾಗೇಶ) ತಂಡದಿಂದ ಪೂಜಾ ಕುಣಿತ, ಯಶವಂತ ಎಂ.ಕೆ ಎಂ.ಕೃಷ್ಣಯ್ಯ ತಂಡದಿಂದ ಸೋಮಗ ಕುಣಿತ ಗಾರುಡಿ ಗೊಂಬೆ, ಜ್ಯೋತಿ ತಂಡದಿಂದ ಮಹಿಳಾ ಚಂಡೆ ಕುಣಿತ ಸ್ವಾಮಿ ಕೊರಗಜ್ಜ ಮಹಿಳಾ ಚಂಡೆ ಕುಣಿತ, ಕೆಂಪರಾಜು ತಂಡದಿಂದ ಸೋಮನ ಕುಣಿತ, ಗೋಪಾಲಗೌಡ ತಂಡದಿಂದ ಮಹಿಳಾ ಡೊಳ್ಳು, ಪುರುಷೋತ್ತಮ ಪಿ ಗೌಡ ತಂಡದಿಂದ ಹಾಲಕ್ಕಿ ಸುಗ್ಗಿ, ಬಿ.ಟಿ.ಮಾನವ ತಂಡದಿಂದ ಕೋಲಾಟ, ಎಪನೂರಪ್ಪ ಹಳ್ಳಿ ತಂಡದಿಂದ ಮೊಜುಗೊಂಬೆ, ತಮ್ಮಣ್ಣ ರಾಠೋಡ ತಂಡದಿಂದ ಲಂಬಾಣಿ ನೃತ್ಯ ಪ್ರದರ್ಶನ ನಡೆಯಿತು.
ಇದನ್ನೂ ಓದಿ:‘ನಿಮ್ಮ ಕಾಯುವಿಕೆಯನ್ನು ಅರ್ಥಪೂರ್ಣವಾಗಿಸುತ್ತೇನೆ..’; ದೊಡ್ಡದಾಗಿ ಸಿಗ್ನಲ್ ಕೊಟ್ಟ ರಾಕಿಭಾಯ್
ಅಶ್ವಸುರೇಶ ತಂಡದಿಂದ ಹಗಲುವೇಶ, ಮಹಾದೇವ ಕಲ್ಯಾಣ ತಂಡದಿಂದ ಕರಡಿ ಮಜಲು, ಅರುಣ ಕುಮಾರ ತಂಡದಿಂದ ಕಂಸಾಳೆ ನೃತ್ಯ, ಈಶ್ವರ ಮಾದರ ತಂಡದಿಂದ ದುರ್ಗಾದೇವಿ, ಸತೀಶ ಆರ್.ಗಂಟಿ ತಂಡದಿಂದ ಜಾಂಜ್, ಹೋಳಲಿಂಗೇಶ್ವರ ಯುವಕ ಡೊಳ್ಳಿನ ಸಂಘ ತಂಡದಿಂದ ಡೊಳ್ಳು ಕುಣಿತ, ಮಾದಶೆಟ್ಟಿ ತಂಡದಿಂದ ಕಂಸಾಳೆ, ಬಿ.ಎನ್.ಕೃಷ್ಣಪ್ಪ ತಂಡದಿಂದ ಭದ್ರಕಾಳಿ ನೃತ್ಯ, ರಾಜಣ್ಣ ಜಿಲ್ಲಾ ಜಾನಪದ ಕಲಾ ಮಂಡಳ ತಂಡದಿಂದ ಖಾಸಾ ಬೇಡರಪಡೆ ಕುಣಿತ, ಹಕ್ಕಿ ಗೂಡು ಹಕ್ಕಿಪಕ್ಕಿ ಮಹಿಳಾ ನೃತ್ಯ ತಂಡ ಬುಡಕಟ್ಟು ಮಹಿಳಾ ಜಾನಪದ ತಂಡದಿಂದ ಹಕ್ಕಿಪಕ್ಕಿ ನೃತ್ಯ ಪ್ರದರ್ಶನ ಗಮನ ಸೆಳೆದವು.
ಮಲ್ಲಿಕಾರ್ಜುನ ಅಲೇಮಾರಿ ದಾಲಪಟಾ ಕಲಾವಿದರ ಸಂಘ ತಂಡದಿಂದ ದಾಲಪಟಾ ಕಲಾವಿದರ ಮೆರವಣಿಗೆ, ಸಂಗಯ್ಯ ಪೂಜಾರಿ ತಂಡದಿಂದ ಕರಡಿ ಮಜಲು, ಸೋಮು ಪಕ್ಕೀರಪುರ ಗಜಾನನ ಝಾಂಜ್ ಫಥಕ ತಂಡದಿಂದ ಝಾಂಜ್ ಪ್ರದರ್ಶನ, ಹನುಮಂತರಾಯ್ ತಂಡದಿಂದ ಕೊಂಬುಕಹಳೆ, ರಾಮಲಿಂಗಪ್ಪ ಬಿನ್ ಮಾರಯ್ಯ ಬೇಳಿಬಟ್ಲು ತಂಡದಿಂದ ಗಾರುಡಿ ಗೊಂಬೆ, ಮನೋಜಕುಮಾರ ಬಿನ್ ನರಸಪ್ಪ ತಂಡದಿಂದ ಸೋಮನ ಕುಣಿತ, ಕಲ್ಲಪ್ಪ ಹಂಚಿನಮನಿ ತಂಡದಿಂದ ದೊಡ್ಡ ಹಲಿಗೆ ಬಾರಿಸುವದು, ವಾಸುದೇವ ಬನ್ನಂಜೆ ಲಕ್ಷ್ಮೀನಾರಾಯಣ ಚಂಡೆವಾದನ ಬಳಗ ತಂಡದಿಂದ ಗಂಡು ಮಕ್ಕಳ ಚಂಡೆ ವಾದ್ಯ ಪ್ರದರ್ಶನ ನಡೆದವು.
ಲಕ್ಷ್ಮಣ ತಟ್ಟೇಕೆರೆ ತಂಡದಿಂದ ಕಂಸಾಳೆ ನೃತ್ಯ, ಪ್ರದೀಪ ಪಾಂಡುರಂಗಿ ಸುಗಂಧಿ ತಂಡದಿಂದ ರಾಜವೈಭವ ಚಿತ್ರ ಚಾಮರಗಳು, ದುರ್ಗಾ ಮಹಿಳಾ ಚಂಡೆ ಬಳಗ ತಂಡದಿಂದ ಮಹಿಳಾ ಚಂಡೆ, ಕೆ.ಪಿ.ದೇವರಾಜ ತಂಡದಿಂದ ಪೂಜಾ ಕುಣಿತ, ವಿಜಯಲಕ್ಷ್ಮೀ ಕುಂಕುಮದಾರಿ ತಂಡದಿಂದ ಮಹಿಳಾ ಡೊಳ್ಳು ಕುಣಿತ, ನಗಾರಿ ಮಂಜು ತಂಡದಿಂದ ಚರ್ಮ ನಗಾರಿ ವಾದ್ಯ, ಸವಿತಾ ಚಿನಕುರ್ನಯಾ ತಂಡದಿಂದ ಮಹಿಳಾ ಪೂಜಾ ಕುಣಿತ, ಗದ್ದೆಪ್ಪ ಭಜಂತ್ರಿ ತಂಡದಿಂದ ಖಣಿ ವಾದನ, ಶಂಕರ ತಂಡದಿಂದ ಗೊರವರ ಕುಣಿತ, ರಾಮಕ್ಕ ತಂಡದಿಂದ ಜೋಗತಿ ನೃತ್ಯ ಪ್ರದರ್ಶನ ನಡೆದವು.
ರಮೇಶ ಮಂಚಿ ತಂಡದಿಂದ ಕರಗ, ಮಳಿಯಪ್ಪ ತಂಡದಿಂದ ಹೆಜ್ಜೆಮೇಳ, ಮಂಜುನಾಥ ತಂಡದಿಂದ ಮರಗಾಲ ಕುಣಿತ, ಮಹೇಶ ಹಿರೇಗೌಡ್ರ ತಂಡದಿಂದ ವೀರಗಾಸೆ, ಹೆಚ್.ಡಿ ಜಗ್ಗಿನ ತಂಡದಿಂದ ವೀರಗಾಸೆ, ಕನ್ನಡ ರಥ ಕೋಲಾಟ, ಶಿವಮ್ಮ ಎಚ್.ಇ ತಂಡದಿಂದ ಸೋಮನ ಕುಣಿತ, ಎಚ್.ಡಿ.ಜಗ್ಗಿನ ತಂಡದಿಂದ ಒಂದು ರಥ ತಂಡ ಪ್ರದರ್ಶನ ನಡೆದವು.
ಮಹಾರುದ್ರಪ್ಪ ವೀರಪ್ಪ ಇಟಗಿ ಬಸವೇಶ್ವರ ಕಲಾ ಪುರವಂತಿಕೆ ಸಂಘ ತಂಡದಿಂದ ಪುರವಂತಿಕೆ, ಲಕ್ಷ್ಮಣ ರೊಟ್ಟಿ ಮೈಲಾರಲಿಂಗೇಶ್ವರ ಜಾನಪದ ಡೊಳ್ಳಿನ ನೃತ್ಯ ತಂಡದಿಂದ ಡೊಳ್ಳು ಕುಣಿತ, ಅಶೋಕ ಮಾವೂರ ತಂಡದಿಂದ ಡೊಳ್ಳು ಕುಣಿತ, ಮಹೇಶಪ್ಪ ಕಾಯಕದ ತಂಡದಿಂದ ನಂದಿಕೋಲು, ಮಹೇಶ್ವರಗೌಡ ಲಿಂಗದಹಳ್ಳಿ ತಂಡದಿಂದ ಪುರವಂತಿಕೆ, ಮೃತ್ಯುಂಜಯ ರಾಮಗೊಂಡೇನಹಳ್ಳಿ ವೀರಭದ್ರೇಶ್ವರ ಜಾನಪದ ಕಲಾ ಸಂಘದ ತಂಡದಿಂದ ಸಮಾಳ, ಬಡವೆಪ್ಪ ಆನವಟ್ಟಿ ತಂಡದಿಂದ ಡೊಳ್ಳಿನ ಕುಣಿತ, ಶಿವಾನಂದ ಈರಗೊಂಡ ದುರ್ಗಾದೇವಿ ಜಾನಪದ ಕಲಾ ತಂಡದಿಂದ ಜಾಂಜ್, ಯಲ್ಲಪ್ಪ ಕಂಬಳಿ ತಂಡದಿಂದ ಡೊಳ್ಳಿನ ಕುಣಿತ ಪ್ರದರ್ಶನ ನಡೆದವು.
ರಾಮಕೃಷ್ಣ ಸುಗಂಧಿ ಮಹಿಳಾ ಕಲಾ ತಂಡದಿಂದ ಗೊಂಬೆಗಳು/ಬೇಡರವೇಶ, ದತ್ತಾತ್ರೇಯ ಮಹಿಳಾ ಕಲಾ ತಂಡದಿಂದ ಬೇಡರವೇಶ, ಬಸವರಾಜ ದೊಡ್ಡಲಿಂಗಣ್ಣವರ ಆದಿ ಜಾಂಬವ ಧರ್ಮ ವಾದ್ಯಗಳ ಕಲಾ ತಂಡದಿಂದ ಹಲಗೆ, ಮಾಯಪ್ಪ ಹವಳೆಮ್ಮನವರ ತಂಡದಿಂದ ಹಲಗೆ, ಸಂತ್ರವ್ವ ಲಮಾಣಿ ತುಳಜಾದೇವಿ ಸಂಘ ತಂಡದಿಂದ ಲಂಬಾಣಿ ನೃತ್ಯ, ಸರಸ್ವತಿ ಓಲೇಕಾರ, ಶರೀಫ್ ಮಾಕಪ್ಪನವರ ರಮಾಬಾಯಿ ಅಂಬೇಡ್ಕರ್ ಮಹಿಳಾ ಡೊಳ್ಳು ಕಲಾ ಸಂಘ ತಂಡದಿಂದ ಡೊಳ್ಳು ಕುಣಿತ. ಶಿವಮೂರ್ತಿ ಹುಣಸಿಹಳ್ಳಿ ವಾಲ್ಮೀಕಿ ಡೊಳ್ಳಿನ ಸಂಘ ತಂಡದಿಂದ ಡೊಳ್ಳು ಕುಣಿತ, ಷಣ್ಮುಖಪ್ಪ ಭಜಂತ್ರಿ ಚನ್ನಬಸವೇಶ್ವರ ಕಲಾವಾದ್ಯಮೇಳ ತಂಡದಿಂದ ಕರಡಿ ಮಜಲು ಪ್ರದರ್ಶನ ನಡೆದವು. ಯಲ್ಲಪ್ಪ ಭಜಂತ್ರಿ ಸರಸ್ವತಿ ಕಲಾ ತಂಡದಿಂದ ಕರಡಿ ಮಜಲು, ಚಿಕ್ಕಪ್ಪ ಚಲವಾದಿ ತಂಡದಿಂದ ಜಾಂಜ್, ಶಂಕ್ರಪ್ಪ ವೇಷಗಾರ ತಂಡದಿಂದ ಹಗಲುವೇಷಗಾರ, ಪರಶುರಾಮ ಬಂಡಿವಡ್ಡರ ಮಾತಂಗೆಮ್ಮದೇವಿ ಕಲಾ ಸಂಘ ತಂಡದಿಂದ ಜಾಂಜ್, ಮೌನೇಶ್ವರ ಮನ್ವಾಚಾರಿ ವೀರಬೊಮ್ಮಪ್ಪಜನ್ನವರ ಪುರವಂತಿಕೆ ಹವ್ಯಾಸಿ ಕಲಾ ತಂಡದಿಂದ ಪುರವಂತಿಕೆ, ಪ್ರಶಾಂತ ಗುಡಿ ತಂಡದಿಂದ ಬೇಡರ ವೇಶ, ವೀರಪ್ಪ ಮರಳಿಹಳ್ಳಿ ತಂಡದಿಂದ ಪುರವಂತಿಕೆ, ಮಂಜುನಾಥ ಮಿರ್ಜಿ ತಂಡದಿಂದ ವೀರಗಾಸೆ ಪುರವಂತಿಕೆ, ರಾಜು ಗಂಗಾ ಪರಮೇಶ್ವರಿ ಡೊಳ್ಳಿನ ಸಂಘ ತಂಡದಿಂದ ಡೊಳ್ಳು ಕುಣಿತ, ಅಂಬೇಡ್ಕರ ತರುಣ ಸಂಘ ತಂಡದಿಂದ ಗೆಜ್ಜೆ ಕುಣಿತ ಪ್ರದರ್ಶನ ನಡೆದವು. ಕೊಟ್ಟೂರು ಬಸವೇಶ್ವರ ಯುವಕರ ಸಂಘ ತಂಡದಿಂದ ಕೋಲಾಟ, ಬೀರಲಿಂಗೇಶ್ವರ ಡೊಳ್ಳಿನ ಸಂಘ ತಂಡದಿಂದ ಡುಳ್ಳು, ಬೀರಲಿಂಗೇಶ್ವರ ಡೊಳ್ಳಿನ ಸಂಘ ತಂಡದಿಂದ ಡೊಳ್ಳು, ಚಂದ್ರಪ್ಪ ಭಜಂತ್ರಿ ತಂಡದಿಂದ ಶಹನಾಯಿ ಮೇಳ, ಬಸವರಾಜ ಕಡೇಮನಿ ವೀರಭದ್ರೇಶ್ವರ ಸಾಂಸ್ಕೃತಿಕ ಕಲಾ ಸಂಸ್ಥೆ ತಂಡದಿಂದ ವೀರಗಾಸೆ ಪುರವಂತಿಕೆ, ನಿಂಗಪ್ಪ ಕಾಳೆ ಬಿ.ಆರ್.ಅಂಬೇಡ್ಕರ ಸಂಸ್ಕೃತಿ ಕಲಾ ತಂಡದಿಂದ ಜಾಂಜ್ ಪ್ರದರ್ಶನ ನಡೆಯಿತು. ವೀರಣ್ಣ ಬಡಿಗೇರ ತಂಡದಿಂದ ನಂದಿ ಕುಣಿತ, ಮೆಹಬೂಬಸಾಬ ಖಾನನವರ ತಂಡದಿಂದ ಕುದುರೆ ಕುಣಿತ, ಫಕ್ಕೀರಪ್ಪ ಚಲವಾದಿ ಸಿದ್ದೇಶ್ವರ ಕಲಾ ತಂಡದಿಂದ ಜಾಂಜ್, ಬಸಪ್ಪ ಬೆನ್ನೂರು ತಂಡದಿಂದ ಡೊಳ್ಳು, ಮಧುಕರ ಹಾವೇರಿ, ದುರಗಪ್ಪ ಕಾಳೆ, ಅಶೋಕ ಕಾಳೆ ತಂಡದಿಂದ ಕಹಳೆ, ಓಂಪ್ರಕಾಶ ಅಂಗಡಿ ತಂಡದಿಂದ ವೀರಭದ್ರೇಶ್ವರ ವೀರಗಾಸೆ ಪ್ರದರ್ಶನ ನಡೆದವು.