Advertisement
ಕಾಪು ಶಾಸಕ ಲಾಲಾಜಿ ಆರ್. ಮೆಂಡನ್ ಸಮ್ಮೇ ಳನವನ್ನು ಉದ್ಘಾಟಿಸಲಿದ್ದಾರೆ. ಮೂಡುಬೆಳ್ಳೆ ಚರ್ಚ್ ನ ಧರ್ಮಗುರು, ಸಮ್ಮೇಳನದ ಗೌರವಾಧ್ಯಕ್ಷ ವಂ| ಕ್ಲೆಮೆಂಟ್ ಮಸ್ಕರೇನಸ್ ಹಾಗೂ ಕಾಣಿಯೂರು ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು ಉಪಸ್ಥಿತರಿ ರುವರು. ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಆಶಯ ನುಡಿಗಳನ್ನಾಡಲಿದ್ದು, ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಸ್ಮರಣ ಸಂಚಿಕೆ ಬಿಡುಗಡೆ, ಪ್ರಥಮ ಸಮ್ಮೇಳನದ ಸರ್ವಾಧ್ಯಕ್ಷ ಮುದ್ದು ಮೂಡುಬೆಳ್ಳೆ ಧ್ವಜ ಹಸ್ತಾಂತರ, ಕಸಾಪ ಪೂರ್ವ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಪುಸ್ತಕ ಬಿಡುಗಡೆ ಮಾಡಲಿದ್ದಾರೆ.
ಸಂಜೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ನಿವೃತ್ತ ಕನ್ನಡ ಉಪನ್ಯಾಸಕ ಶ್ರೀಧರ ಮೂರ್ತಿ ಸಮಾರೋಪ ಭಾಷಣ ಮಾಡಲಿದ್ದು, ಕಾಪು ತಾ| ಕಸಾಪ ಅಧ್ಯಕ್ಷ ಬಿ. ಪುಂಡಲೀಕ ಮರಾಠೆ ಅಧ್ಯಕ್ಷತೆ ವಹಿಸಲಿದ್ದಾರೆ. ಅದಾನಿ ಯುಪಿಸಿಎಲ್‌ನ ಪ್ರಾದೇಶಿಕ ಅಧ್ಯಕ್ಷ ಕಿಶೋರ್ ಆಳ್ವ ಸಾಧಕರನ್ನು ಸಮ್ಮಾನಿಸಲಿದ್ದಾರೆ.
Related Articles
Advertisement
ಸಮ್ಮಾನಹಿರಿಯ ದಾರುಶಿಲ್ಪಿ ಬಾಬು ಆಚಾರ್ಯ ಕಟ್ಟಿಂ ಗೇರಿ, ಪಾಡªನ ಕಲಾವಿದೆ ಅಪ್ಪಿ ಕೃಷ್ಣ ಪಾಣಾರ, ಪಾರಂಪರಿಕ ನಾಟಿವೈದ್ಯೆ ಶಾಲಿನಿ ಪೂಜಾರಿ, ಅಂತಾರಾಷ್ಟ್ರೀಯ ಹಿರಿಯ ಕ್ರೀಡಾಪಟು ಸುಲತಾ ಕಾಮತ್ ಕಟಪಾಡಿ, ಹೊರನಾಡ ಕನ್ನಡಿಗ ಸಾಹಿತಿ ಉದ್ಯಮಿ ಕಟ್ಟಿಂಗೇರಿ ಸುಭಾಶ್ಚಂದ್ರ ಹೆಗ್ಡೆ, ಯಕ್ಷಗಾನ, ನಾಟಕ ಕಲಾವಿದ ವಾಸುದೇವ ರಾವ್ ಎರ್ಮಾಳ್, ಡೋಲುವಾದಕ ವಸಂತ ಪಡುಬೆಳ್ಳೆ, ಯಕ್ಷಗಾನ ಸಂಘಟಕ ವಿಠಲ್ ನಾಯಕ್, ನಾಗಸ್ವರ ವಾದಕ ಚಂದಯ್ಯ ಶೆೇರಿಗಾರ್ ಕಟಪಾಡಿ, ಪ್ರಗತಿಪರ ಕೃಷಿಕ ಲಾರೆನ್ಸ್ ಆಳ್ವ ತಬೈಲ್ ಅವರನ್ನು ಸಮ್ಮಾನಿಸಲಾಗುವುದು.
ಅಂದು ಬೆಳಗ್ಗೆ ಮೂಡುಬೆಳ್ಳೆ ಪೇಟೆಯಲ್ಲಿ ಭುವನೇಶ್ವರಿ ದೇವಿಯ ಆಕರ್ಷಕ ಶೋಭಾಯಾತ್ರೆ ನಡೆಯಲಿದೆ. ಸಮ್ಮೇಳನದಲ್ಲಿ ಚಿತ್ರಕಲಾ ಪ್ರದರ್ಶನ, ಪುಸ್ತಕ ಪ್ರದರ್ಶನ ಮತ್ತು ಮಾರಾಟದ ವ್ಯವಸ್ಥೆ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಕಾಪು ತಾ| ಕಸಾಪ ಅಧ್ಯಕ್ಷ ಬಿ. ಪುಂಡಲೀಕ ಮರಾಠೆ ಮತ್ತು ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷ ಕೆ. ದೇವದಾಸ್ ಹೆಬ್ಟಾರ್ ತಿಳಿಸಿದ್ದಾರೆ. ವಿವಿಧ ಗೋಷ್ಠಿಗಳು
ಸಮ್ಮೇಳನದಲ್ಲಿ ಮೂರು ಪ್ರಮುಖ ಗೋಷ್ಠಿಗಳು ನಡೆಯಲಿದ್ದು, ಬೆಳಗ್ಗೆ ಬೆಳ್ಳೆ ಕಟ್ಟಿಂಗೇರಿ ಐತಿಹಾಸಿಕ ಸಾಂಸ್ಕೃತಿಕ ಪರಂಪರೆ ವಿಷಯದಲ್ಲಿ ಪ್ರಧಾನ ಗೋಷ್ಠಿ ನಡೆಯಲಿದೆ. ನಿವೃತ್ತ ಪ್ರಾಧ್ಯಾಪಕ ಲ| ಪ್ರೊ| ವಿಲ್ಫೆ†ಡ್ ಆರ್. ಡಿ’ಸೋಜಾ ಅಧ್ಯಕ್ಷತೆ ವಹಿಸಲಿದ್ದಾರೆ. ಸಾಹಿತಿ ಅನು ಬೆಳ್ಳೆ (ರಾಘವೇಂದ್ರ ಬಿ. ರಾವ್) ಮತ್ತು ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನ ಪ್ರಾಂಶುಪಾಲ ವಿನ್ಸೆಂಟ್ ಆಳ್ವ ವಿಷಯ ಮಂಡಿಸಲಿದ್ದಾರೆ. ಕವಿಗೋಷ್ಠಿ
ಬಳಿಕ ಸಾಹಿತಿ ಕವಿ ರಂಗಕರ್ಮಿ ಗುರುರಾಜ ಮಾರ್ಪಳ್ಳಿ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಕವಿಗೋಷ್ಠಿಯಲ್ಲಿ ಇಂದಿರಾ ಸುಬ್ಬಯ್ಯ ಹೆಗ್ಡೆ ಶಿರ್ವ, ಸುಧಾ ಭಟ್ ಉಚ್ಚಿಲ,ವೀಣೇಶ್ ಅಮೀನ್ ಸಾಂತೂರು, ದಿವ್ಯಾ ಭಟ್ ಮೂಡುಬೆಳ್ಳೆ, ವಂದನಾ ಕುಮಾರಿ ಕುತ್ಯಾರು, ವಾಲ್ಸ್ ಸ್ಟನ್ ಡೇಸಾ ಶಂಕರಪುರ, ಫಾತಿಮಾ ರಲಿಯಾ ಹೆಜಮಾಡಿ, ಲಕ್ಷ್ಮೀದೇವಿ ಪಿ. ಶೆಟ್ಟಿ ಶಿರ್ವ, ರೋಹಿಣಿ ಕಟಪಾಡಿ, ಎಚ್. ಮಲ್ಲಿಕಾರ್ಜುನ್ ರಾವ್ ಉಳಿಯಾರು ತಮ್ಮ ಕವನಗಳನ್ನು ವಾಚಿಸಲಿದ್ದಾರೆ. ವಿದ್ಯಾರ್ಥಿಗೋಷ್ಠಿ
ಅಪರಾಹ್ನ ನಡೆಯುವ ವಿದ್ಯಾರ್ಥಿಗೋಷ್ಠಿಯ ಅಧ್ಯಕ್ಷತೆಯನ್ನು ದಂಡತೀರ್ಥ ಪ.ಪೂ. ಕಾಲೇಜಿನ ಉಪನ್ಯಾಸಕ ನೀಲಾನಂದ ನಾಯಕ್ ವಹಿಸಲಿದ್ದಾರೆ. ವರ್ಷಿತಾ ಸುವರ್ಣ ಮೂಡುಬೆಳ್ಳೆ ಸಂತ ಲಾರೆನ್ಸ್ ಪ.ಪೂ. ಕಾಲೇಜು, ಸ್ಫೂರ್ತಿ ಶಿರ್ವ ಹಿಂದೂ ಪ.ಪೂ. ಕಾಲೇಜು, ಸಂಜನಾ ಹೆಬ್ಟಾರ್ ಜ್ಞಾನಗಂಗಾ ಪ.ಪೂ. ಕಾಲೇಜು ನೆಲ್ಲಿಕಟ್ಟೆ, ದಿಶಾ ಆಚಾರ್ಯ ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್ ಕಾಪು, ಸರಸ್ವತಿ ಶಿರೂರು, ಎಸ್‌ವಿಎಸ್ ಪ.ಪೂ. ಕಾಲೇಜು ಕಟಪಾಡಿ, ರಕ್ಷಾ ಆರ್. ಪ್ರಭು ಸಂತ ಜಾನ್ಸ್ ಪ.ಪೂ.ಕಾಲೇಜು ಶಂಕರಪುರ, ಶಾಯಿರಾ ಬಾನು ಸರಕಾರಿ ಪ.ಪೂ. ಕಾಲೇಜು ಪಡುಬಿದ್ರಿ, ಛಾಯಾ ಬಲ್ಲಾಳ್ ದಂಡತೀರ್ಥ ಆಂಗ್ಲಮಾಧ್ಯಮ ಶಾಲೆ ಕಾಪು ಇಲ್ಲಿನ ವಿದ್ಯಾರ್ಥಿಗಳು “ನಾನು ಓದಿದ ಪುಸ್ತಕ’ ಎಂಬ ವಿಷಯದಲ್ಲಿ ಮಾತನಾಡಲಿದ್ದಾರೆ.