ದಾವಣಗೆರೆ: ಮ್ಯಾಂಚೆಸ್ಟರ್, ಬೆಣ್ಣೆ ನಗರಿ, ಶಿಕ್ಷಣ ನಗರಿ ಖ್ಯಾತಿಯ ದಾವಣಗೆರೆ 10ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಜ್ಜಾಗಿದೆ. ಜಿಲ್ಲಾ ಕೇಂದ್ರ ದಾವಣಗೆರೆಯಲ್ಲಿ ಒಟ್ಟಾರೆಯಾಗಿ ನಾಲ್ಕನೇ ಬಾರಿ ಸತತ ಎರಡನೇ ಬಾರಿಗೆ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಿದೆ.
ಮಾ.1 ಮತ್ತು 2 ರಂದು ನಡೆಯುವ 10ನೇ ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕಾಗಿ ಕುವೆಂಪು ಕನ್ನಡ ಭವನ ಸಿದ್ಧವಾಗಿದೆ. ಎರಡು ದಿನಗಳ ಕಾಲ ನಡೆಯುವ ಆಕ್ಷರ ಜಾತ್ರೆಯ ಬಗ್ಗೆ ಸಾಹಿತ್ಯಾಕ್ತಿಯರು, ಕನ್ನಡ ಪ್ರೇಮಿಗಳು ಕಾತುರದಿಂದ ಕಾಯುತ್ತಿದ್ದಾರೆ. ಬಯಲು ಸೀಮೆಯ ಜಗಳೂರು ತಾಲೂಕಿನ ಕೆನರಾ ಬ್ಯಾಂಕ್‌ನ ನಿವೃತ್ತ ಅಧಿಕಾರಿ ಎನ್.ಟಿ. ಎರ್ರಿಸ್ವಾಮಿ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಸೋಮವಾರ ಬೆಳಗ್ಗೆ 8.30ಕ್ಕೆ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಕೆ.ವಿ. ಶಾಂತಕುಮಾರಿ ರಾಷ್ಟ್ರ ಧ್ವಜಾರೋಹಣ, ಜಿಲ್ಲಾ ಕಸಾಪ ಅಧ್ಯಕ್ಷ ಡಾ| ಎಚ್.ಎಸ್. ಮಂಜುನಾಥ್ ಕುರ್ಕಿ ಪರಿಷತ್ತಿನ, ಮೇಯರ್ ಎಸ್.ಟಿ. ವೀರೇಶ್ ನಾಡ ಧ್ವಜಾರೋಹಣ ಮಾಡುವರು. ಮುದೇಗೌಡ್ರ ಗಿರೀಶ್, ಲೋಕಿಕೆರೆ ನಾಗರಾಜ್ ಭಾಗವಹಿಸವರು.
ಬೆಳಗ್ಗೆ 9.30ಕ್ಕೆ ವಿದ್ಯಾನಗರದ ಆಂಜನೇಯ ದೇವಸ್ಥಾನದಿಂದ ಪ್ರಾರಂಭವಾಗುವ ಸಮ್ಮೇಳನ ಅಧ್ಯಕ್ಷರ ಮೆರವಣಿ ಗೆಯನ್ನ ಜಿಲ್ಲಾ ರಕ್ಷಣಾಧಿಕಾರಿ ಹನುಮಂತರಾಯ ಚಾಲನೆ ನೀಡುವರು. ಪಾಲಿಕೆ ಸದಸ್ಯೆ ಗೀತಾ ದಿಳೆÂಪ್ಪ, ವೀಣಾ ನಂಜಪ್ಪ ಇತರರು ಪಾಲ್ಗೊಳ್ಳುವರು. ಕುವೆಂಪು ಕನ್ನಡ ಭವನದವರೆಗೆ ಮೆರವಣಿಗೆ ನಡೆಯಲಿದೆ.
ಬೆಳಗ್ಗೆ 11ಕ್ಕೆ ಕೇಂದ್ರಿಯ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ| ಮನು ಬಳಿಗಾರ್ ಸಮ್ಮೇಳನ, ಡಾ| ಜಿ.ಎಸ್. ಶಿವರುದ್ರಪ್ಪ ವೇದಿಕೆಯನ್ನ ಜಿಲ್ಲಾ ಉಸ್ತುವಾರಿ ಸಚಿವ ಬಿ.ಎ. ಬಸವರಾಜ್ ಉದ್ಘಾಟಿಸುವರು. ಸಂಸದ ಜಿ.ಎಂ. ಸಿದ್ದೇಶ್ವರ, ಶಾಸಕ ಶಾಮನೂರು ಶಿವಶಂಕರಪ್ಪ ಕೃತಿಗಳ ಬಿಡುಗಡೆ ಮಾಡುವರು. ಶಾಸಕ ಎಸ್.ಎ. ರವೀಂದ್ರನಾಥ್ ಅಧ್ಯಕ್ಷತೆ ವಹಿಸುವರು. ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ, ಶಾಸಕರಾದ ಕೆ. ಮಾಡಾಳ್ ವಿರುಪಾಕ್ಷಪ್ಪ, ಎಸ್.ವಿ. ರಾಮಚಂದ್ರ, ಪ್ರೊ| ಎನ್. ಲಿಂಗಣ್ಣ ಎಸ್. ರಾಮಪ್ಪ ಇತರರು ಭಾಗವಹಿಸುವರು.
ಮಧ್ಯಾಹ್ನ 2ಕ್ಕೆ ಜಾನಪದ ತಜ್ಞ ಡಾ| ಎಂ.ಜಿ. ಈಶ್ವರಪ್ಪ ಅಧ್ಯಕ್ಷತೆಯಲ್ಲಿ ಕನ್ನಡ ಕಾವ್ಯ ಮತ್ತು ವಿಶ್ವ ಮಾನವ ಪ್ರಜ್ಞೆ ವಿಷಯ ಕುರಿತ ಮೊದಲ ಗೋಷ್ಠಿ ನಡೆಯಲಿದೆ. ಡಾ| ದಾದಾಪೀರ್ ನವಿಲೇಹಾಳ್, ಡಾ|ಎ.ಬಿ. ರಾಮಚಂದ್ರಪ್ಪ, ಪ್ರೊ|ಸಿ.ವಿ. ಪಾಟೀಲ್ ವಿಷಯ ಮಂಡನೆ ಮಾಡುವರು. 3.30ಕ್ಕೆ ಪ್ರೊ| ಭಿಕ್ಷಾವರ್ತಿಮs… ಅಧ್ಯಕ್ಷತೆಯಲ್ಲಿ ಸಾಹಿತ್ಯ ಮತ್ತು ಸಾಂಸ್ಕೃತಿಕ ನೆಲೆಗಳು… ವಿಷಯ ಕುರಿತ 2ನೇ ಗೋಷ್ಠಿ ನಡೆಯಲಿದೆ. ಡಾ| ಆನಂದ ಋಗ್ವೇದಿ, ಡಾ| ಎಚ್.ಎಲ್. ಪುಷ್ಪಾ ವಿಷಯ ಮಂಡಿಸುವರು.
ಸಂಜೆ 5ಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ ಅಧ್ಯಕ್ಷತೆಯಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ. ಪಾಲಾಕ್ಷಿ ಚಾಲನೆ ನೀಡುವರು. ತಹಶೀಲ್ದಾರ್ ಬಿ.ಎನ್. ಗಿರೀಶ್ ಭಾಗವಹಿಸುವರು.