Advertisement

ಕಸಾಪ ಅಧ್ಯಕ್ಷರ ಅವಧಿ 5 ವರ್ಷ: ಎಚ್. ಎಲ್. ಮಲ್ಲೇಶಗೌಡ.

06:49 PM Jan 01, 2022 | Team Udayavani |

ಆಲೂರು: ಶಕ್ತಿ, ಆಸಕ್ತಿ ಹೊಂದಿರುವ ಹಾಗೂ ಸಾಮಾಜಿಕ ನ್ಯಾಯದಲ್ಲಿ ಸಾಹಿತ್ಯಾಸಕ್ತರ ಅಭಿಪ್ರಾಯದಂತೆ ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷರನ್ನು ಆಯ್ಕೆ ಮಾಡಲಾಗುವುದು ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಎಚ್. ಎಲ್. ಮಲ್ಲೇಶಗೌಡ ತಿಳಿಸಿದರು.

Advertisement

ಪಟ್ಟಣದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ತಾಲ್ಲೂಕು ಪದಾಧಿಕಾರಿಗಳ ಆಯ್ಕೆ ಕುರಿತು ಏರ್ಪಡಿಸಲಾಗಿದ್ದ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಕನ್ನಡ ಸಾಹಿತ್ಯವನ್ನು ಪ್ರತಿ ಅಂಗಳದಲ್ಲಿ ಪಸರಿಸುವ ಶಕ್ತಿ ಹೊಂದಿರುವ ಸಾಹಿತ್ಯ ಆಸಕ್ತರನ್ನು ಸಮಿತಿಯಲ್ಲಿ ನೇಮಕ ಮಾಡುವ ಉದ್ದೇಶ ಹೊಂದಲಾಗಿದೆ. ಪ್ರತಿ ಹೋಬಳಿಯಲ್ಲಿ ಕನಿಷ್ಠ 500 ಜನರು ಸದಸ್ಯರಾಗುವುದರೊಂದಿಗೆ ಕನ್ನಡ ಸಾಹಿತ್ಯ ಭವನ ನಿರ್ಮಾಣವಾಗಬೇಕು.

ಸಮಿತಿ ಐದು ವರ್ಷ ಆಡಳಿತದಲ್ಲಿ ಇರುತ್ತದೆ. ಪದಾಧಿಕಾರಿಗಳು ನಿಷ್ಕ್ರಿಯಾದ ಸಂದರ್ಭದಲ್ಲಿ ಖಂಡಿತ ಬದಲಾವಣೆಯನ್ನು ಸರ್ವ ಸದಸ್ಯರ ಸಮ್ಮುಖದಲ್ಲಿ ಮಾಡಲಾಗುವುದು. ಯಾವುದೇ ಕಾರಣಕ್ಕೂ ಆವಧಿಯನ್ನು ಅನ್ಯತಾ ಮೊಟಕುಗೊಳಿಸವುದಿಲ್ಲ ಎಂದರು.

ಸಣ್ಣ ಪತ್ರಿಕೆಗಳ ರಾಜ್ಯ ಅಧ್ಯಕ್ಷ ಜೆ. ಆರ್. ಕೆಂಚೇಗೌಡ ರವರು ಮಾತನಾಡಿ, ಪರಿಷತ್ತು ಪರಿಶುದ್ಧವಾಗಿರಬೇಕು. ಒಮ್ಮತ ಅಭಿಪ್ರಾಯದ ಮೂಲಕ ಕನ್ನಡ ಸಾಹಿತ್ಯ ತೇರನ್ನು ಎಳೆಯೋಣ ಎಂದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್  ಮಾಜಿ ಅಧ್ಯಕ್ಷ ಉದಯರವಿ ಮಾತನಾಡಿ ಹಿಂದೆ ನಾನು ಅಧ್ಯಕ್ಷನಾದ ಸಂದರ್ಭದಲ್ಲಿ ಸಭೆಗೆ ಬಂದ ಸಂದರ್ಭದಲ್ಲಿ ನಾಲ್ಕರಿಂದ ಐದು ಜನ ಸಾಹಿತ್ಯ ಅಸಕ್ತರಿರುತ್ತಿದ್ದರು ಇಂದು ನೂರಾರು ಜನ ಸಭೆಗೆ ಬರುತ್ತಾರೆ ಇದು ಸಂತೋಷದ ವಿಷಯ ತಾಲ್ಲೂಕಿನಲ್ಲಿ ಸಾಹಿತ್ಯ ಅಸಕ್ತರು ಹೆಚ್ಚುತ್ತಿದ್ದು ಸಾಹಿತ್ಯ ಮನೆ ಮನೆಗೆ ತಲುಪಬೇಕು ಯಾರೇ ಅಧ್ಯಕ್ಷರಾದರೂ ಯಾವುದೇ ಅಸಮಾಧಾನವಿಲ್ಲದೇ ಸಾಹಿತ್ಯ ಕಟ್ಟುವ ಕೆಲಸವಾಗಬೇಕು ಎಂದರು.

Advertisement

ಕಾರ್ಯಕ್ರಮದಲ್ಲಿ ಜಿಲ್ಲಾ ಸಮಿತಿ ಗೌರವ  ಕಾರ್ಯದರ್ಶಿ ಬಿ. ಆರ್. ಬೊಮ್ಮೇಗೌಡ,ಕೋಶಾಧ್ಯಕ್ಷ ಬಿ.ಎನ್. ಜಯರಾಂ, ಉದಯರವಿ,ತಾಲ್ಲೂಕು ನಿಕಟಪೂರ್ವ ಅಧ್ಯಕ್ಷ ಶ್ರೀಕಾಂತ ಇತರರು ಹಾಜರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next