Advertisement

ಕಸಾಪ ಚುಕ್ಕಾಣಿ ಹಿಡಿಯಲು ಈಗಲೇ ಪ್ರಚಾರ

10:10 AM Feb 09, 2020 | mahesh |

ಕಲಬುರಗಿ: ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಮನು ಬಳಿಗಾರ್‌ ಅವರ ಅವಧಿ ಇನ್ನೂ ಒಂದು ವರ್ಷ ಇದ್ದು, ಈಗಾಗಲೇ ಅಧ್ಯಕ್ಷರ ಸ್ಥಾನದ ಮೇಲೆ ಕಣ್ಣಿಟ್ಟಿರುವ ಹಲವು ಹುರಿಯಾಳುಗಳು ಪ್ರಚಾರ ಅಖಾಡಕ್ಕೆ ಇಳಿದಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ವ.ಚ. ಚನ್ನೇಗೌಡ, ಕೊಪ್ಪಳ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಶೇಖರಗೌಡ ಮಾಲೀ ಪಾಟೀಲ, ದೂರದರ್ಶನ ಕೇಂದ್ರದ ವಿಶ್ರಾಂತ ಹೆಚ್ಚುವರಿ ಮಹಾನಿರ್ದೇಶಕ ಡಾ. ಮಹೇಶ್‌ ಜೋಶಿ, ಕನ್ನಡ ಪರ ಹೋರಾಟಗಾರ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಗೌರವ ಕಾರ್ಯದರ್ಶಿ ಸಿ.ಕೆ. ರಾಮೇಗೌಡ ಅವರು ಈಗಾಗಲೇ ತಮ್ಮ ಬೆಂಬಲಿಗರ ಒಡಗೂಡಿ ಪ್ರಚಾರ ಆರಂಭಿಸಿದ್ದಾರೆ.

Advertisement

ಈ ಹಿಂದೆ ಧಾರವಾಡ ಸಾಹಿತ್ಯ ಸಮ್ಮೇಳನದಲ್ಲೂ ಈ ಮುಖಂಡರು ಪ್ರಚಾರ ನಡೆಸಿದ್ದರು. ಅದೇ ರೀತಿಯಲ್ಲಿ ಡಾ. ಮಹೇಶ್‌ ಜೋಶಿ ಮತ್ತು ಸಿ.ಕೆ. ರಾಮೇಗೌಡ ಕಲಬುರಗಿ ಸಮ್ಮೇಳನದಲ್ಲೂ ತಮ್ಮ ಪರಿಚಯ ಮತ್ತು ಸಾಧನೆ ಪಕ್ಷಿನೋಟವುಳ್ಳ ಕರಪತ್ರಗಳನ್ನು ಹಂಚುವುದರಲ್ಲಿ ನಿರತರಾಗಿದ್ದರು. “ಮುಂದಿನ ವರ್ಷ ನಡೆಯಲಿರುವ ಕಸಾಪ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತೇವೆ. ನಮಗೆ ಬೆಂಬಲ ನೀಡಿ’ ಎನ್ನುತ್ತಾ, ಕೈಮುಗಿದು ಪ್ರಚಾರ ನಡೆಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಪರಿಷತ್ತಿನಲ್ಲಿ ಮಹಿಳೆಯರಿಗೆ ಆದ್ಯತೆ ನೀಡುತ್ತೇನೆ. ಹಳ್ಳಿ ಹಳ್ಳಿಗೆ ಪ್ರವಾಸ ಕೈಗೊಂಡು, ಕಸಾಪ ಆಶಯಗಳನ್ನು ತಲುಪಿಸುತ್ತೇನೆ.
● ಮಹೇಶ ಜೋಶಿ, ದೂರದರ್ಶನ ಕೇಂದ್ರದ ವಿಶ್ರಾಂತ ಹೆಚ್ಚುವರಿ ಮಹಾನಿರ್ದೇಶಕ

2021ರ ಮಾರ್ಚ್‌ನಲ್ಲಿಹಾಲಿ ಕಾರ್ಯಕಾರಿಣಿ ಮಂಡಳಿಯ ಅವಧಿ ಮುಗಿಯಲಿದೆ. ನಾನು ಕೂಡ ಸ್ಪರ್ಧಿ.
ಈಗಿನಿಂದಲೇ ಪ್ರಚಾರದಲ್ಲಿ ನಿರತನಾಗಿದ್ದೇನೆ.
● ವ.ಚ. ಚನ್ನೇಗೌಡ, ಕಸಾಪ ಗೌರವ ಕಾರ್ಯದರ್ಶಿ

ಪರಿಷತ್ತಿನ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಎಲ್ಲಾ ರೀತಿಯಲ್ಲಿ ಸಿದ್ಧತೆ ಮಾಡಿಕೊಂಡಿದ್ದೇನೆ. ಕಸಾಪದಲ್ಲಿ ಕೆಲಸ ಮಾಡಿದ ಅನುಭವ ನನ್ನ ಕೈಹಿಡಿಯಲಿದೆ.
● ಸಿ.ಕೆ. ರಾಮೇಗೌಡ, ಕಸಾಪ ಮಾಜಿ ಗೌರವ ಕಾರ್ಯದರ್ಶಿ

Advertisement
Advertisement

Udayavani is now on Telegram. Click here to join our channel and stay updated with the latest news.

Next