Advertisement

ಜನಸಾಮಾನ್ಯರೆಡೆಗೆ ಕನ್ನಡ ಸಾಹಿತ್ಯ ಪರಿಷತ್‌: ತೇಗಲತಿಪ್ಪಿ

02:42 PM Dec 22, 2021 | Team Udayavani |

ಯಡ್ರಾಮಿ: ಕಲಬುರಗಿಯಲ್ಲಿ ಮುಂಬರುವ ಐದು ವರ್ಷಗಳಲ್ಲಿ ಸಾಹಿತ್ಯಿಕ ವಾತಾವರಣ ನಿರ್ಮಿಸಿ, ಕನ್ನಡ ಸಾಹಿತ್ಯ ಪರಿಷತ್‌ನ್ನು ಜನಸಾಮಾನ್ಯರಿಗೂ ತಲುಪಿಸುವಂತ ಉದ್ದೇಶ ಇಟ್ಟುಕೊಂಡಿದ್ದೇವೆ ಎಂದು ಜಿಲ್ಲಾ ಕಸಾಪ ನೂತನ ಅಧ್ಯಕ್ಷ ಡಾ| ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಹೇಳಿದರು.

Advertisement

ಯಡ್ರಾಮಿ ವಿರಕ್ತಮಠದಲ್ಲಿ ರವಿವಾರ ಸಗರಾದ್ರಿ ಸಾಂಸ್ಕೃತಿಕ ಸಂಗಮ ವೇದಿಕೆ ವತಿಯಿಂದ ಆಯೋಜಿಸಿದ್ದ ಹುಣ್ಣಿಮೆ ಕಾರ್ಯಕ್ರಮ (ಸಂಗಮ-30)ದಲ್ಲಿ ಅವರು ಮಾತನಾಡಿದರು.

ನಮ್ಮ ನೆಲದೊಳಗೆ ವಚನ ಸಾಹಿತ್ಯ, ದಾಸ ಸಾಹಿತ್ಯ, ಜಾನಪದ ಸಾಹಿತ್ಯ ಹುಟ್ಟಿದವು. ಈ ಶ್ರೇಷ್ಠ ಸಾಹಿತ್ಯ ಪರಂಪರೆ ನಾವು ಉಳಿಸಬೇಕಿದೆ. ನಮ್ಮ ಅವಧಿಯಲ್ಲಿ ವೈಚಾರಿಕ ನೆಲೆಗಟ್ಟಿನಲ್ಲಿ ಹೊಸ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಮಕ್ಕಳಿಗೆ ಈ ನೆಲದ ಸಾಹಿತ್ಯಿಕ ಚರಿತ್ರೆ ಪರಿಚಯ ಮಾಡಿಕೊಡಬೇಕಿದೆ ಎಂದರು.

ಮಕ್ಕಳನ್ನು ಸುಸಂಸ್ಕೃತರನ್ನಾಗಿ ಮಾಡಲು ಯತ್ನಿಸಿ, ಕಸಾಪವನ್ನು ಜನಸಾಮಾನ್ಯರ ಪರಿಷತ್‌ ಮಾಡುತ್ತೇವೆ. ಈ ನಿಟ್ಟಿನಲ್ಲಿ ಶ್ರೀ ಮಠದಲ್ಲಿ ಪ್ರತಿ ಹುಣ್ಣಿಗೊಂದು ಕಾರ್ಯಕ್ರಮ ಮಾಡುತ್ತಿರುವುದು ಮಾದರಿಯಾಗಿದೆ ಎಂದು ಹೇಳಿದರು.

“ಶರಣ ಶರಣೆಯರ ಕಾಯಕ ಸಂಸ್ಕೃತಿ’ ವಿಷಯದ ಮೇಲೆ ಉಪನ್ಯಾಸಕ ಡಾ| ರಂಗ ಸ್ವಾಮಿ ಮಾತನಾಡಿ, 12ನೇ ಶತಮಾನದ ಬಸವಣ್ಣನವರಕಾಯಕ ತತ್ವ ಈಗಿನ ಸಮಾಜಕ್ಕೂ ಪ್ರಸ್ತುತವಾಗಿದೆ ಎಂದರು. ಜಿಲ್ಲಾ ಕಸಾಪ ನೂತನ ಗೌರವ ಕಾರ್ಯದರ್ಶಿ ಶಿವರಾಜ ಅಂಡಗಿ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ಕಬಡ್ಡಿ ಸ್ಪರ್ಧೆಯಲ್ಲಿ ಚಿನ್ನದ ಪದಕ ವಿಜೇತರಾದ ಇಜೇರಿ ಗ್ರಾಮದ ಅಮೀರ ಪಟೇಲ, ರುಕುಂ ಪಟೇಲ, ಸರ್ಕಾರಿ ಶಾಲೆ ಆದರ್ಶ ಶಿಕ್ಷಕ ವಿಜಯಪುರ ಜಿಲ್ಲೆಯ ಶಿವಣಗಿಯ ವಾಸೀಮ್‌ ಅಕ್ರಮ ಚಟ್ಟರಕಿ ಅವರನ್ನು ಸಂಗಮದ ವತಿಯಿಂದ ಸತ್ಕರಿಸಲಾಯಿತು. ವೇದಿಕೆ ಗೌರವ ಸಂಚಾಲಕ ಪೂಜ್ಯ ಸಿದ್ಧಲಿಂಗ ಮಹಾ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

Advertisement

ಮಹಾಲಿಂಗಪ್ಪ ಗೌಡ ಬಂಡೆಪ್ಪಗೌಡ್ರ, ಗುರುಬಸಪ್ಪ ಸಾಹು ಸಣ್ಣಳ್ಳಿ, ಪ್ರಕಾಶ ಸಾಹು ಬೆಲ್ಲದ, ಸಿದ್ಧು ಹೂಗಾರ, ಶಾಂತಗೌಡ ಪಾಟೀಲ, ಬಸವರಾಜ ಅರಕೇರಿ, ಪ್ರಶಾಂತಕುನ್ನೂರ, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಲವಂತ್ರಾಯಗೌಡ ಬಿರಾದಾರ, ಜಿ.ಎಸ್‌.ಬಿರಾದಾರ, ಆರ್‌.ಜಿ. ಪುರಾಣಿಕ, ನಾಗಪ್ಪ ಸಜ್ಜನ್‌, ಬಿ.ಬಿ. ವಾರದ, ಶಂಭುಲಿಂಗ ಹೆಬ್ಟಾಳ, ಬಸಣ್ಣ ಮಾಡಗಿ, ಕಿರಣ ಹೂಗಾರ, ಮಂಜುನಾಥ, ಸತೀಶ, ಅಶೋಕ, ವಿಶ್ವನಾಥ ಪಾಲ್ಗೊಂಡಿದ್ದರು. ಸಂತೋಷ ನವಲಗುಂದ ನಿರೂಪಿಸಿ, ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next