Advertisement

ಅಧಿಕ ಮತದ ಕ್ಷೇತ್ರಗಳ ಮೇಲೆ ಅಭ್ಯರ್ಥಿಗಳ ಕಣ್ಣು

03:10 PM Apr 13, 2021 | Team Udayavani |

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆ ಕಾವು ರಂಗೇರುತ್ತಿದೆ. ಮೇ.9ರಂದು ಪರಿಷತ್ತುಚುನಾವಣೆ ನಡೆಯಲಿದ್ದು ಕೇಂದ್ರ ಸಾಹಿತ್ಯ ಪರಿಷತ್ತಿನಂತೆ ಬೆಂಗಳೂರು ನಗರ ಜಿಲ್ಲಾ ಕನ್ನಡಸಾಹಿತ್ಯಪರಿಷತ್ತಿನ ಚುನಾವಣೆ ಕೂಡ ಗಮನ ಸೆಳೆದಿದೆ.

Advertisement

ಕನ್ನಡಪರ ಹೋರಾಟಗಾರರು ಮತ್ತು ಸಾಹಿತಿಗಳು ನಗರ ಜಿಲ್ಲಾ ಕಸಾಪಗೆ ಸ್ಪರ್ಧಿಸಿದ್ದುಅಧಿಕ ಮತ ಹೊಂದಿ ರುವಕೇಂದ್ರಗಳ ಮೇಲೆ ಅಭ್ಯರ್ಥಿ ಗಳುಕಣ್ಣಿಟ್ಟಿದ್ದು ಪ್ರಚಾರ ನಡೆಸಿದ್ದಾರೆ. ಕಸಾಪ ಚುನಾವಣಾಧಿಕಾರಿಗಳು ನೀಡಿದ ಅಂಕಿ- ಅಂಶದಂತೆ ಬೆಂಗಳೂರು ನಗರದಲ್ಲಿ 36,389 ಮತದಾರರಿದ್ದಾರೆ. ಬಸವನಗುಡಿ, ಗೋವಿಂದರಾಜ ನಗರ, ಪದ್ಮನಾಭ ನಗರ,ಯಶವಂತಪುರ, ರಾಜಾಜಿನಗರ, ಜಯನಗರದಲ್ಲಿ ಹೆಚ್ಚಿನ ಮತಗಳಿದ್ದು ಈ ಭಾಗಗಳಲ್ಲಿಅಭ್ಯರ್ಥಿಗಳು ಪ್ರಚಾರ ನಡೆಸಿದ್ದಾರೆ.ಬಸವನಗುಡಿಯಲ್ಲಿ 2789, ಗೋವಿಂದರಾಜ ನಗರದಲ್ಲಿ 2552, ರಾಜಾಜಿನಗರ 2368,ಯಶವಂತಪುರದಲ್ಲಿ 2547 ಹಾಗೂ ಜಯನಗರದಲ್ಲಿ2272 ಮತದಾರರು ಇದ್ದಾರೆ. ಹಾಗೆಯೇಬೆಂಗಳೂರು ದಕ್ಷಿಣದಲ್ಲಿ 1710, ಅನೇಕಲ್‌ನಲ್ಲಿ 1661,ಚಾಮರಾಜಪೇಟೆ 1284, ರಾಜರಾಜೇಶ್ವರಿ ನಗರ 1698, ಮಹಾಲಕ್ಷ್ಮೀ ಲೇಔಟ್‌ 1251, ಮಲ್ಲೇಶ್ವರದಲ್ಲಿ 1149 ಮತದಾರರಿದ್ದಾರೆ. ಪುಲಕೇಶಿ ನಗರ 120 ಮತದಾರದನ್ನು ಹೊಂದಿದ್ದು ಕಡಿಮೆ ಮತದಾರರನ್ನು ಹೊಂದಿರುವ ಕ್ಷೇತ್ರ ಎನಿಸಿಕೊಂಡಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವಬೆಂಗಳೂರು ನಗರ ಜಿಲ್ಲಾ ಕಸಾಪಅಭ್ಯರ್ಥಿ ಡಾ.ಕಾಂತರಾಜಪುರ ಸುರೇಶ್‌, ಈಗಾಗಲೇ ನಗರದ ಹಲವು ಕ್ಷೇತ್ರಗಳಲ್ಲಿ ಪ್ರಚಾರ ಮಾಡಿದ್ದೇನೆ ಜನರಿಂದಲೂಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಹೇಳಿದ್ದಾರೆ.

ಮತದಾನದ ಮೇಲೆ ಕೋವಿಡ್ ಕರಿನೆರಳು: ಕೋವಿಡ್ 2ನೇ ಅಲೆ ಆರಂಭವಾಗಿದೆ. ಬೆಂಗಳೂರಿ ನಲ್ಲಿ ಕೋವಿಡ್ ಸೋಂಕಿತರ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು ಇದು ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆ ಮೇಲೆ ಪರಿಣಾಮ ಬೀರುವ ಆತಂಕ ಎದುರಾಗಿದೆ. ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವವರು ಹಿರಿಯ ವಯಸ್ಸಿನವರೂ ಇದ್ದಾರೆ. ಕೋವಿಡ್ ಹಿನ್ನೆಲೆ ಮನೆಯಿಂದ ಮತದಾನದ ಕೇಂದ್ರದ ವರೆಗೂ ಬಂದು ಮತದಾನ ಮಾಡುತ್ತಾರೆಯೇ ಎಂಬ ಅನುಮಾನ ಕಾಡತೊಡಗಿದೆ.

ಪರಿಷತ್ತಿನ ರಾಜ್ಯಾಧ್ಯಕ್ಷರ ಸ್ಥಾನಕ್ಕೆ ಸ್ಪರ್ಧಿಸಿರುವವ.ಚ.ಚನ್ನೇಗೌಡ ಮಾತನಾಡಿ, ಬೆಂಗಳೂರಿನಲ್ಲಿ ಅಧಿಕ ಸಂಖ್ಯೆಯಲ್ಲಿ ಹಿರಿಯರು ಮತ ಹೊಂದಿದ್ದಾರೆ. ಕೋವಿಡ್ ಹಿನ್ನೆಲೆಯಲ್ಲಿ ಈಗಾಗಲೇ ನೈಟ್‌ ಕರ್ಫ್ಯೂ ಜಾರಿ ಆಗಿದೆ. ಹೀಗಾಗಿ ಹಿರಿಯರು ಮನೆಯಿಂದ ಹೊರ ಬಂದು ಮತದಾನ ಮಾಡಲು ಭಯಪಡುತ್ತಿದ್ದಾರೆ ಎಂದಿದ್ದಾರೆ. ಕಸಾಪ ಚುನಾವಣಾ ಇನ್ನೂ ಒಂದು ತಿಂಗಳು ಇದೆ. ಮೇ ತಿಂಗಳಲ್ಲಿ ಸೋಂಕಿತರಸಂಖ್ಯೆ ಹೆಚ್ಚಾಗಲಿದೆ ಎಂದು ತಜ್ಞರು ಹೇಳುತ್ತಿದ್ದಾರೆ.ಹೀಗಾಗಿ ಮತದಾನ ಕಡಿಮೆ ಎಂದು ಹೇಳಿದ್ದಾರೆ.

Advertisement

ಮತದಾನಕ್ಕೆ ಭೀತಿ ಬೇಡ :

ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಗಾಗಿ ಚುನಾವಣಾ ಆಯೋಗ ಎಲ್ಲಾ ರೀತಿಯ ಸಿದ್ಧತೆಮಾಡಿಕೊಂಡಿದೆ. ಪ್ರತಿ ಮತದಾನ ಕೇಂದ್ರದಲ್ಲಿ ಕೋವಿಡ್ ಮಾರ್ಗ ಸೂಚಿಗಳನ್ನು ಪಾಲನೆಮಾಡಲಾಗುತ್ತದೆ. ಅಲ್ಲದೆ ಸ್ಯಾನಿಟೈಸರ್‌ ಜತೆಗೆಆರೋಗ್ಯ ತಪಸಾಣೆ ಮಾಡಿ ಮತದಾನ ಮಾಡಲುಮತದಾರರಿಗೆ ಅನುವು ಮಾಡಿ ಕೊಡಲಾಗುತ್ತದೆ. ಮತದಾರರು ಭಯಪಡುವ ಅಗತ್ಯವಿಲ್ಲ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣಾಧಿಕಾರಿ ಮೋಹನ್‌ರಾಜ್‌ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಪ್ರತಿ ಮತದಾರರನ್ನು ತಲುಪು ಕಾರ್ಯ ನಡೆದಿದೆ.ಹಾಗೆಯೇ ಕೋವಿಡ್ ಹಿನ್ನೆಲೆಯಲ್ಲಿ ಕಸಾಪ ಮತದಾನದ ಮೇಲೆ ಒಂದಿಷ್ಟು ಪ್ರಭಾವ ಬೀರಲಿದೆ.ಆದರೂ ಕೂಡ ಮತದಾರರು ಮತದಾನ ಮಾಡುತ್ತಾರೆ ಎಂಬ ನಂಬಿಕೆ ಕೂಡ ಇದೆ. – ಸಿ.ಕೆ.ರಾಮೇಗೌಡ, ಕಸಾಪ ರಾಜ್ಯಾಧ್ಯಕ್ಷ ಅಭ್ಯರ್ಥಿ

Advertisement

Udayavani is now on Telegram. Click here to join our channel and stay updated with the latest news.

Next