Advertisement

ದಾಂಡೇಲಿ ನಗರ ಸಭೆಯಲ್ಲಿ ಕೋವಿಡ್ ಮುನ್ನೆಚ್ಚರಿಕೆಯೊಂದಿಗೆ ಕಸಾಪ ಮತದಾನ

02:56 PM Nov 21, 2021 | Team Udayavani |

ದಾಂಡೇಲಿ: ದಾಂಡೇಲಿ ನಗರ ಸಭೆಯ ಕೊಠಡಿಯಲ್ಲಿ ಕಸಾಪ ಚುನಾವಣೆಯ ಮತದಾನವು ಕೋವಿಡ್ ಮುನ್ನೆಚ್ಚರಿಕೆಯೊಂದಿಗೆ ನಡೆಯುತ್ತಿದೆ. ಇಂದು ಬೆಳಿಗ್ದಗೆ 8 ಗಂಟೆಗೆ ಸರಿಯಾಗಿ ಮತದಾನ ಆರಂಭವಾಗಿದೆ.

Advertisement

ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ಮತ್ತು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿಗೆ ನಡೆದ ಚುನಾವಣೆಯ ಮತದಾನ ಇದಾಗಿದ್ದು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿಗೆ ಐವರು ಕಣದಲ್ಲಿದ್ದಾರೆ.

ದಾಂಡೇಲಿಯಿಂದ ಪತ್ರಕರ್ತ ಬಿ.ಎನ್.ವಾಸರೆ ಹಾಗೂ ವಕೀಲ ಆರ್.ವಿ.ಗಡೆಪ್ಪನವರ ಸ್ಪರ್ಧಿಸಿದ್ದಾರೆ. ಇಂದು ಸಂಜೆ 4 ಗಂಟೆಯವರೆಗೆ ಚುನಾವಣೆ ನಡೆಯಲಿದ್ದು, ಚುನಾವಣಾಧಿಕಾರಿಗಳಾಗಿ ಕಾರವಾರದ ತಹಶೀಲ್ದಾರ್ ನಿಶ್ಚಲ್ ನರೋನಾ ಮತ್ತು ದಾಂಡೇಲಿಯ ತಹಶೀಲ್ದಾರ್ ಶೈಲೇಶ ಪರಮಾನಂದ ಅವರುಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಪೊಲೀಸ್ ಭದ್ರತೆಯೊಂದಿಗೆ ನಡೆಯುತ್ತಿರುವ ಮತಗಟೆಯ ಹೊರಗಡೆ ಆಯಾಯ ಅಭ್ಯರ್ಥಿಗಳ ಬೆಂಬಲಿಗರು ಮತದಾರರನ್ನು ಒಲೈಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next