Advertisement
ಸಿಲಿಕಾನ್ ಸಿಟಿಯ ಬಸ್ ನಿಲ್ದಾಣಗಳಲ್ಲಿ ಬಿಬಿಎಂಪಿ ಅಳವಡಿಕೆ ಮಾಡಿರುವ ಬೋರ್ಡ್ ಗಳಲ್ಲಿ ಹಾಗೂ ವಿವಿಧ ಕಾಮಗಾರಿಗಳ ಬಗ್ಗೆ ವಿವರ ನೀಡುವ ನಾಮಫಲಕಗಳಲ್ಲಿ ಗೂಗಲ್ ಭಾಷಾಂತರ ಕನ್ನಡ ಅಕ್ಷರಗಳ ಲೋಪ ಕನ್ನಡಪರ ಹೋರಾಟಗಾರರ ಸಿಟ್ಟಿಗೆ ಕಾರಣವಾಗಿದೆ.
Related Articles
Advertisement
ಸರ್ಕಾರ ಎಚ್ಚರ ವಹಿಸಬೇಕು: ಸರ್ಕಾರ “ಗೂಗಲ್ ಭಾಷಾಂತರ’ ಕನ್ನಡದ ಮೇಲೆ ಎಚ್ಚರಿಕೆ ವಹಿಸಬೇಕು. ನಮ್ಮಲ್ಲಿ ಮ್ಯಾನ್ಯುವೆಲ್‌ಗಳಿಗೆ ಯಾವುದೇ ರೀತಿಯ ಕೊರತೆಯಿಲ್ಲ. ಅವುಗಳನ್ನು ಬಳಕೆಯತ್ತ ಆಲೋಚನೆ ಮಾಡಬೇಕು. ಹಿರಿಯ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳು ಕನ್ನಡ ಅರ್ಥವಾಗದೇ ಇದ್ದಾಗ ಗೂಗಲ್ ಭಾಷಾಂತರ ಕನ್ನಡದ ಮೊರೆ ಹೋಗುತ್ತಾರೆ. ಗೂಗಲ್ ಭಾಷಾಂತರ ನಮ್ಮ ಕನ್ನಡ ಅಕ್ಷರ ಮಾಲೆಯ ಸಿರಿತನಕ್ಕೆ ಧಕ್ಕೆಯುಂಟು ಮಾಡುತ್ತಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮತ್ತು ಹಿರಿಯ ಸಾಹಿತಿ ಪ್ರೊ. ಎಸ್.ಜಿ.ಸಿದ್ದರಾಮಯ್ಯ ದೂರುತ್ತಾರೆ.
ಭಾಷೆ ವಿಚಾರದಲ್ಲಿ ಬರೀ ಆದೇಶಗಳಿಂದ ಏನೇನೂ ಆಗದು. ಅದಕ್ಕೆ ಶಾಸನಬದ್ಧವಾದಂತಹ ಕಾಯ್ದೆಯನ್ನು ಸರ್ಕಾರ ಜಾರಿಗೆ ತರಬೇಕು. ಶಾಸನ ಬದ್ಧ ಕಾಯ್ದೆ ಆದಾಗ ಯಾವುದೇ ಕೋರ್ಟ್ ಕೂಡ ತಿರಸ್ಕಾರ ಮಾಡುವುದಿಲ್ಲ. ಸುಮ್ಮನೆ ಆದೇಶದ ರೀತಿಯಲ್ಲಿ ಕೆಲಸ ಮಾಡಿದರೆ ಅದರಿಂದ ಯಾವುದೇ ರೀತಿಯ ಪ್ರಯೋಜನವಿಲ್ಲ. ಭಾಷೆ ಮತ್ತು ಪ್ರಾದೇಶಿಕ ವಿಚಾರದಲ್ಲಿ ನಾವು ನೆರೆಯ ತಮಿಳುನಾಡಿನವರನ್ನು ನೋಡಿ ಕಲಿಯಬೇಕಾಗಿದೆ ಎನ್ನುತ್ತಾರೆ.
ಪ್ರಾಧಿಕಾರಕ್ಕೆ ಪತ್ರ ಬರೆಯುತ್ತೇನೆ: ನಾವೀಗ ಕರ್ನಾಟಕ-50 ಸಂಭ್ರಮದಲ್ಲಿದ್ದೇವೆ. ಇಂತಹ ಸಂದರ್ಭದಲ್ಲಿ ಕನ್ನಡದ ಬಗ್ಗೆ ಮತ್ತಷ್ಟು ಎಚ್ಚರಿಕೆ ವಹಿಸಬೇಕಾಗಿದೆ. ಪಾಲಿಕೆ ವಾರ್ಡ್ ಮಟ್ಟದ ನಾಮಫಲಕಗಳು, ಬಸ್ ನಿಲ್ದಾಣದ ಬೋರ್ಡ್‌ಗಳು ಸೇರಿ ಹಲವುಕಡೆಗಳಲ್ಲಿ ಗೂಗಲ್ ಭಾಷಾಂತರ ಮೂಲ ಕನ್ನಡ ಭಾಷೆಗೆ ಧಕ್ಕೆ ತಂದಿದೆ. ಇದನ್ನು ಕಸಾಪ ತೀವ್ರವಾಗಿ ಖಂಡಿಸುತ್ತದೆ ಎಂದು ಪರಿಷತ್ ಅಧ್ಯಕ್ಷ ಮಹೇಶ ಜೋಶಿ ಹೇಳಿದರು. ಕೆಲವು ಹೆದ್ದಾರಿಗಳಲ್ಲಿ ಅಳವಡಿಸಿರುವ ಬೋರ್ಡ್ ಗಳಲ್ಲಿ ಅಕ್ಷರ ದೋಷಗಳಿವೆ. ಅವುಗಳನ್ನು ಸರಿಪಡಿಸುವ ಕಾರ್ಯಕ್ಕೆ ಸಂಬಂಧ ಪಟ್ಟ ಇಲಾಖೆಗೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೂ ಪತ್ರ ಬರೆಯುತ್ತೇನೆ ಎಂದು ಹೇಳಿದರು.
ಗೂಗಲ್ ಭಾಷಾಂತರ ಬಳಸಿ ತಪ್ಪಾಗಿ ಕನ್ನಡ ಬರೆಯಬಾರದು. ಸರಿಯಾದ ಪದವನ್ನು ವಿದ್ವಾಂಸರಿಂದ, ಇಲ್ಲವೇ ಶಬ್ದಕೋಶ ಬಳಸಬೇಕು. ತಪ್ಪು ಬರೆಯುವುದು ಕನ್ನಡದ ಕೊಲೆ ಮಾಡಿದಂತೆ. ಜತೆಗೆ ಭಾಷೆಗೆ ಅಪಮಾನ ಮಾಡಿದಂತೆ ಆಗುತ್ತದೆ. ಈ ಹಿನ್ನೆಲೆಯಲ್ಲಿ ನಾಮಫಲಕಗಳಲ್ಲಿ ಕನ್ನಡವನ್ನು ಸರಿಯಾಗಿ ಬರೆಯಬೇಕು.-ಡಾ.ದೊಡ್ಡರಂಗೇಗೌಡ, ಹಿರಿಯ ಸಾಹಿತಿ
– ದೇವೇಶ ಸೂರಗುಪ್ಪ