ಬಿ.ಸತ್ಯನಾರಾಯಣ ನಿರ್ಮಿಸಿ ಕಥೆ-ಸಂಭಾಷಣೆ ಬರೆದು ನಿರ್ದೇಶಿಸಿರುವ ಉಗ್ರಮರ್ದಿನಿ ಚಿತ್ರಕ್ಕೆ ಸೆನ್ಸಾರ್ ಮಂಡಳಿಯು ಯು/ಎ ಸರ್ಟಿಫಿಕೆಟ್ ನೀಡಿದೆ. ಆಯೇಷಾ, ಮುನಿ, ಸೂರಜ್ ಸಾಸನೂರು, ರಾಘವೇಂದ್ರ, ಅಮುಲ್ ಗೌಡ ಹಾಗೂ ನಿರ್ದೇಶಕ ಬಿ.ರಾಮಮೂರ್ತಿ ಅಭಿನಯಿಸಿದ್ದಾರೆ.
ಚಿತ್ರಕ್ಕೆ ಗೌರಿ ವೆಂಕಟೇಶ್ ಛಾಯಾಗ್ರಹಣ, ರಾಜ್‌ಕಿಶೋರ್ ಸಂಗೀತವಿದೆ. ಇಚ್ಛೆ ಇರುವಲ್ಲಿ ದಾರಿ ಇರುತ್ತದೆ ಎಂಬ ಮಾತಿನಂತೆ ಕರ್ನಾಟಕ ಪೊಲೀಸ್ ಇಲಾಖೆಯು ಎಲ್ಲಿ ಕೆಡುಕಿದೆಯೋ ಅಲ್ಲಿ ಅವರ ಉಪಸ್ಥಿತಿ ಇರುತ್ತದೆ.
ನಮ್ಮ ಸಿನಿಮಾ ಉಗ್ರಮರ್ದಿನಿ ಇಂತಹ ಹಲವಾರು ದುಷ್ಟ ಪಾತ್ರಗಳ ಸುತ್ತ ಸುತ್ತುತ್ತದೆ. ಸಮಾಜದಲ್ಲಿ ಕಷ್ಟಗಳನ್ನು ಎದುರಿಸಲು ಮತ್ತು ಶಿಕ್ಷಿಸಲು ಹೊಸದಾಗಿ ಪೊಲೀಸ್ ಅಧಿಕಾರಿಯಾಗಿ ಬಂದ ಹುಡಿಗಿಯ ಸುತ್ತ ಸುತ್ತ ಚಿತ್ರ ಸಾಗುತ್ತದೆ ಎನ್ನುವುದು ಚಿತ್ರತಂಡದ ಮಾತು.