Advertisement

ಅಜೇಯ್ ರಾವ್ ‘ಶೋಕಿವಾಲ’ನ ಕಲರ್‌ ಫುಲ್‌ ಎಂಟ್ರಿ

08:54 AM Apr 29, 2022 | Team Udayavani |

ಅಜೇಯ್‌ ರಾವ್‌ ನಟನೆಯ “ಶೋಕಿವಾಲ’ ಚಿತ್ರ ಇಂದು ಬಿಡುಗಡೆಯಾಗುತ್ತಿದೆ. ಈಗಾಗಲೇ ಬಿಡುಗಡೆಯಾಗಿರುವ ಹಾಡು, ಟ್ರೇಲರ್‌ ಹಿಟ್‌ ಆಗಿದೆ. ಪಕ್ಕಾ ಫ್ಯಾಮಿಲಿ ಎಂಟರ್‌ಟೈನರ್‌ ಆಗಿ ಗಮನ ಸೆಳೆಯುತ್ತಿದೆ.

Advertisement

ಚಿತ್ರದಲ್ಲಿ ಅಜೇಯ್‌ ರಾವ್‌ ಲವರ್‌ ಬಾಯ್‌ ಹಾಗೂ ಆ್ಯಕ್ಷನ್‌ ಹೀರೋ ಆಗಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಟ್ರೇಲರ್‌ಗೆ ಮೆಚ್ಚುಗೆ ವ್ಯಕ್ತವಾಗುವ ಮೂಲಕ ಚಿತ್ರತಂಡದ ಮೊಗದಲ್ಲಿ ನಗುಮೂಡಿದೆ.

ಇನ್ನು, ಚಿತ್ರದ ಹಾಡೊಂದರಲ್ಲಿ ಕನ್ನಡ ಚಿತ್ರರಂಗದ ನಿರ್ದೇಶಕರಾದ ರವಿ ಬಸ್ರೂರ್‌, ನಂದಕಿಶೋರ್‌, ಹರಿ ಸಂತೋಷ್‌, ಶಶಾಂಕ್‌, ವಿ.ನಾಗೇಂದ್ರ ಪ್ರಸಾದ್‌ ಹೆಜ್ಜೆ ಹಾಕಿದ್ದಾರೆ. ಈ ಹಾಡನ್ನು ಚೇತನ್‌ ಕುಮಾರ್‌ ಬರೆದಿದ್ದು, ಶಶಾಂಕ್‌ ಶೇಷಗಿರಿ ಹಾಡಿದ್ದಾರೆ.

ಇದನ್ನೂ ಓದಿ:ಚಾಕೋಲೇಟ್‌ನಿಂದಾಗಿ ಹರುಡುತ್ತಿದೆ ಸೋಂಕು!

ಶ್ರೀಧರ್‌.ವಿ.ಸಂಭ್ರಮ್‌ ಸಂಗೀತ ಸಂಯೋಜಿಸಿದ್ದಾರೆ. ಕುಟುಂಬ ಸಮೇತ ಕುಳಿತು ನೋಡುವ ಸಿನಿಮಾ ವಾಗಿದ್ದು, ಎಲ್ಲರು ಸಿನಿಮಾ ನೋಡಿ ಪ್ರೋತ್ಸಾಹಿಸಿ ಎಂಬುದು ನಿರ್ಮಾಪಕ ಟಿ.ಆರ್‌. ಚಂದ್ರಶೇಖರ್‌ ಮಾತು. ಅಜೇಯ್‌ ರಾವ್‌ ಅವರಿಗೆ ನಾಯಕಿಯಾಗಿ ಸಂಜನಾ ಆನಂದ್‌ ನಟಿಸಿದ್ದಾರೆ. ಶರತ್‌ ಲೋಹಿತಾಶ್ವ, ಅರುಣಾ ಬಾಲರಾಜ್‌, ತಬಲಾ ನಾಣಿ, ನಾಗರಾಜ ಮೂರ್ತಿ ನಟಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next