Advertisement

Murphy: ʼಮರ್ಫಿʼಗೆ ಸಾಥ್‌ ನೀಡಿದ ನಟಿಮಣಿಯರು

11:46 AM Oct 14, 2024 | Team Udayavani |

ಈಗಾಗಲೇ ಹಾಡುಗಳ ಮೂಲಕ ಸದ್ದು ಮಾಡಿರುವ “ಮರ್ಫಿ’ ಚಿತ್ರದ ಟ್ರೇಲರ್‌ ಇತ್ತೀಚೆಗೆ ಬಿಡುಗಡೆಯಾಗಿದೆ. ನವರಾತ್ರಿ ಹಬ್ಬದ ಸುಂದರ್ಭದಲ್ಲಿ ಚಿತ್ರತಂಡ ಸ್ಯಾಂಡಲ್‌ ವುಡ್‌ನ‌ 9 ನಟಿಯರ ಕೈಯಿಂದ ಟ್ರೇಲರ್‌ ರಿಲೀಸ್‌ ಮಾಡಿಸಲಾಯಿತು. ಪ್ರಿಯಾಂಕಾ ಉಪೇಂದ್ರ, ಅಮೃತಾ ಅಯ್ಯಂಗಾರ್‌, ರಾಗಿಣಿ ದ್ವಿವೇದಿ, ಖುಷಿ ರವಿ, ಮೇಘನಾ ಗಾಂವ್ಕರ್‌, ಸಪ್ತಮಿ ಗೌಡ, ಧನ್ಯ ರಾಮ್‌ ಞಕುಮಾರ್‌, ರೀಶ್ಮಾ ನಾಣಯ್ಯ, ಅಂಕಿತಾ ಅಮರ್‌ ಭಾಗಿಯಾಗಿದ್ದರು.

Advertisement

ಟ್ರೇಲರ್‌ ಬಿಡುಗಡೆ ಬಳಿಕ ಮಾತನಾಡಿದ ನಾಯಕ ಪ್ರಭು ಮುಂಡ್ಕೂರು, ಕೆಲವೊಮ್ಮೆ ನಟರಿಗೆ ಒಂದು ಕಥೆ ಕಾಡುತ್ತಿರುತ್ತದೆ. ಈ ರೀತಿ ಕಥೆ ಮಾಡಬೇಕು ಅನಿಸುತ್ತದೆ. ಮರ್ಫಿ ಕಥೆ ಕೂಡ ನನ್ನ ತುಂಬಾ ಕಾಡಿತ್ತು. ಈ ಚಿತ್ರದ ಟ್ರೇಲರ್‌ ಲಾಂಚ್‌ ಮಾಡಿದ್ದೇವೆ. ನಾನು ತುಂಬಾ ಸಿನಿಮಾದಲ್ಲಿ ನಟಿಸಿದ್ದೇನೆ. 9 ನಟಿಯರು ನನ್ನ ಚಿತ್ರಕ್ಕೆ ಸಾಥ್‌ ಕೊಟ್ಟಿದ್ದಾರೆ. ಮರ್ಫಿ ಜನರಿಗೆ ಸಿನಿಮ್ಯಾಟಿಕ್‌ ಫೀಲ್‌ ಕೊಡುತ್ತದೆ, ಇದಕ್ಕಾಗಿ ಸಾಕಷ್ಟು ಕೆಲಸ ಮಾಡಿದ್ದೇವೆ. ಅದ್ಭುತ ಟೆಕ್ನಿಕಲ್‌ ಟೀಂ ನಮ್ಮ ಚಿತ್ರಕ್ಕಾಗಿ ದುಡಿದಿದೆ ಎಂದರು.

ನಿರ್ದೇಶಕರಾದ ಬಿಎಸ್‌ಪಿ ವರ್ಮಾ ಮಾತನಾಡಿ, ಅದ್ಭುತ ತಂಡದ ಜೊತೆ ಕೆಲಸ ಮಾಡಿದ ಖುಷಿ ನನ್ನಲ್ಲಿದೆ. ಇದೇ 18ರಂದು ಸಿನಿಮಾ ಬಿಡುಗಡೆಯಾಗುತ್ತಿದೆ ಎಂದರು.

ಪ್ರಭು ಮುಂಡ್ಕೂರ್‌, ಚಿತ್ರಕಥೆ ಬರೆಯುವುದರ ಜೊತೆಗೆ ನಾಯಕನಾಗಿಯೂ ಬಣ್ಣ ಹಚ್ಚಿದ್ದಾರೆ. ರೋಶಿನಿ ಪ್ರಕಾಶ್‌, ಇಳಾ ವೀರಮಲ್ಲ ಜೊತೆಯಲ್ಲಿ ದತ್ತಣ್ಣ, ಅಶ್ವಿ‌ನಿ ರಾವ್‌ ಪಲ್ಲಕ್ಕಿ, ಮಹಾಂತೇಶ್‌ ಹೀರೇಮಠ, ರಾಮಪ್ರಸಾದ್‌ ಬಾಣಾವರ ಸೇರಿದಂತೆ ಹಲವರು ಬಣ್ಣ ಹಚ್ಚಿದ್ದಾರೆ.  ನವೀನ್‌ ರೆಡ್ಡಿ, ಪ್ರಭು, ವರ್ಮಾ ಸಂಭಾಷಣೆ ಬರೆದಿದ್ದು, ಮಹೇಶ ತೊಗಟ ಸಂಕಲನ, ಆದರ್ಶ ಆರ್‌. ಕ್ಯಾಮೆರಾ ಹಿಡಿದ್ದಾರೆ. ಸೋಮಣ್ಣ ಟಾಕೀಸ್‌ ಮತ್ತು ವರ್ಣಸಿಂಧು ಸ್ಟುಡಿಯೋಸ್‌ ಬ್ಯಾನರ್‌ನಡಿ ರಾಮ್‌ ಕೋ ಸೋಮಣ್ಣ ಹಾಗೂ ಬಿಎಸ್‌ಪಿ ವರ್ಮಾ ಮರ್ಫಿ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ.

Advertisement

ಮರ್ಫಿಯಲ್ಲಿ ಏಳು ಹಾಡುಗಳಿದ್ದು, ಅರ್ಜುನ್‌ ಜನ್ಯ, ರಜತ್‌ ಹೆಗ್ಡೆ, ಕೀರ್ತನ್‌ ಹೊಳ್ಳ ಮತ್ತು ಸಿಲ್ವೆಸ್ಟರ್‌ ಪ್ರದೀಪ್‌ ಸಂಗೀತ ನಿರ್ದೇಶನ ಮಾಡಿದ್ದು, ಸಿಲ್ವೆಸ್ಟರ್‌ ಪ್ರದೀಪ್‌ ಹಿನ್ನೆಲೆ ಸಂಗೀತ ಒದಗಿಸಿದ್ದಾರೆ. ಚಿತ್ರ 18ಕ್ಕೆ ರಾಜ್ಯಾದ್ಯಂತ ತೆರೆಗೆ ಬರುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next