Advertisement

‘ಲವ್ ಬರ್ಡ್ಸ್’ ಚಿತ್ರದ ‘ನೀನೇ ದೊರೆತ ಮೇಲೆ…’ ಹಾಡು ಬಿಡುಗಡೆ

10:06 AM Jan 29, 2023 | Team Udayavani |

ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ “ಲವ್‌ ಬರ್ಡ್ಸ್‌’ ಸಿನಿಮಾದ ಟೀಸರ್‌ ಗೆ ಸಿನಿಪ್ರಿಯರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇದರ ಬೆನ್ನಲ್ಲೇ “ಲವ್‌ ಬರ್ಡ್ಸ್‌’ ಚಿತ್ರತಂಡ, ಸಿನಿಮಾದ “ನೀನೇ ದೊರೆತ ಮೇಲೆ…’ ಎಂಬ ಹಾಡನ್ನು ಬಿಡುಗಡೆ ಮಾಡಿದೆ. ಅರ್ಜುನ್‌ ಜನ್ಯ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದಿರುವ ಈ ಹಾಡಿಗೆ ಕವಿರಾಜ್‌ ಸಾಹಿತ್ಯವಿದ್ದು, ಪಿ. ಸಿ ಶೇಖರ್‌ ಸಿನಿಮಾಕ್ಕೆ ನಿರ್ದೇಶನ ಮಾಡಿದ್ದಾರೆ.

Advertisement

ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ನಿರ್ಮಾಪಕಿ ಅಶ್ವಿ‌ನಿ ಪುನೀತ್‌ ರಾಜಕುಮಾರ್‌ “ಲವ್‌ ಬರ್ಡ್ಸ್‌’ ಸಿನಿಮಾದ ಈ ಮೊದಲ ಹಾಡನ್ನು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು.

ಇದೇ ವೇಳೆ ಮಾತನಾಡಿದ ನಿರ್ದೇಶಕ ಪಿ. ಸಿ ಶೇಖರ್‌, “ಇತ್ತೀಚೆಗೆ ಕೌಟುಂಬಿಕ ಸಿನಿಮಾಗಳ ಸಂಖ್ಯೆ ಕಡಿಮೆಯಾಗಿದೆ. ಅಂಥ ಸಮಯದಲ್ಲಿ ನನಗೊಂದು ಸದಭಿರುಚಿಯ ಫ್ಯಾಮಿಲಿ ಸಬ್ಜೆಕ್ಟ್ ಸಿನಿಮಾ ನಿರ್ದೇಶಿಸಬೇಕೆಂಬ ಕನಸಿತ್ತು. ಅದು “ಲವ್‌ ಬರ್ಡ್ಸ್‌’ ಸಿನಿಮಾದ ಮೂಲಕ ನನಸಾಗುತ್ತಿದೆ. ಇದರಲ್ಲಿ ಯುವ ಜೋಡಿಯೊಂದರ ಜೀವನ ಚಿತ್ರಣವಿದೆ. ಪ್ರತಿಯೊಬ್ಬರ ಜೀವನದಲ್ಲೂ ಮದುವೆಗೆ ಅವರದ್ದೇ ಆದ ಕನಸುಗಳಿರುತ್ತವೆ. ಆ ಸನ್ನಿವೇಶಕ್ಕೆ ತಕ್ಕಂತೆ ಸಿನಿಮಾದಲ್ಲಿ ಈ ಗೀತೆ ಮೂಡಿಬಂದಿದೆ. ಅರ್ಜುನ್‌ ಜನ್ಯ ಸಂಗೀತ, ಕವಿರಾಜ್‌ ಸಾಹಿತ್ಯದ ಈ ಹಾಡಿನಲ್ಲಿ ಕೃಷ್ಣ – ಮಿಲನಾ ತುಂಬಾ ಚೆನ್ನಾಗಿ ಅಭಿನಯಿಸಿದ್ದಾರೆ’ ಎಂದು ಹಾಡಿನ ಹಿನ್ನೆಲೆ ಬಗ್ಗೆ ಮಾಹಿತಿ ನೀಡಿದರು.

ಇದನ್ನೂ ಓದಿ:ಬಿಹಾರದಲ್ಲಿ ಮದ್ಯ ನಿಷೇಧವನ್ನು ಹಿಂಪಡೆಯಲೇಬೇಕು, ಯಾಕೆಂದರೆ.. : ಮಾಜಿ ಸಿಎಂ ಮಾಂಝಿ ಬೇಡಿಕೆ

“ಮದುವೆಗೆ ಸಂಬಂಧಿಸಿದ ಈ ಹಾಡು ಎಲ್ಲರ ಮನಸ್ಸಿಗೂ ಹತ್ತಿರವಾಗಲಿದೆ’ ಎಂದು ಸಾಹಿತಿ ಕವಿರಾಜ್‌ ಅಭಿಪ್ರಾಯ ವ್ಯಕ್ತಪಡಿಸಿದರೆ, “ಈ ಹಾಡನ್ನು ಅಶ್ವಿ‌ನಿ ಪುನೀತ್‌ ರಾಜಕುಮಾರ್‌ ಬಿಡುಗಡೆ ಮಾಡಿರುವುದು ನಮಗೆ ಇನ್ನಷ್ಟು ಸಂತೋಷವಾಗಿದೆ’ ಎಂಬುದು ನಾಯಕಿ ಮಿಲನಾ ಮಾತಾಗಿತ್ತು.

Advertisement

ಇನ್ನು “ಶ್ರೀಬನಶಂಕರಿ ಚಿತ್ರಾಲಯ’ ಬ್ಯಾನರ್‌ ನಲ್ಲಿ ಕಡ್ಡಿಪುಡಿ ಚಂದ್ರು “ಲವ್‌ ಬರ್ಡ್ಸ್‌’ ಸಿನಿಮಾವನ್ನು ನಿರ್ಮಿಸಿದ್ದಾರೆ. “ಎಲ್ಲರ ಸಹಕಾರದಿಂದ ಇಡೀ ಫ್ಯಾಮಿಲಿ ಕೂತು ನೋಡುವಂಥ ಒಳ್ಳೆಯ ಸಿನಿಮಾ ಮಾಡಿದ್ದೇವೆ. ಸದ್ಯ ಸಿನಿಮಾದ ಮೊದಲ ಹಾಡು ಬಿಡುಗಡೆಯಾಗಿದ್ದು, ಎಲ್ಲರ ಬಾಯಲ್ಲೂ ಗುನುಗುವಂತ ಹಾಡಾಗಲಿದೆ. ಸಿನಿಮಾ ಕೂಡ ಅಷ್ಟೇ ಚೆನ್ನಾಗಿ ಬಂದಿದ್ದು, ಆದಷ್ಟು ಬೇಗ “ಲವ್‌ ಬರ್ಡ್ಸ್‌’ ಅನ್ನು ಪ್ರೇಕ್ಷಕರ ಮುಂದೆ ತರಲಿದ್ದೇವೆ’ ಎಂಬುದು ನಿರ್ಮಾಪಕ ಕಡ್ಡಿಪುಡಿ ಚಂದ್ರು ಮಾತು. ಉಳಿದಂತೆ ಸಮಾರಂಭದಲ್ಲಿ ಹಾಜರಿದ್ದ ಚಿತ್ರದ ಕಲಾವಿದರು, ತಂತ್ರಜ್ಞರು “ಲವ್‌ ಬರ್ಡ್ಸ್‌’ ಬಗ್ಗೆ ಒಂದಷ್ಟು ಮಾತನಾಡಿದರು.

ಅಂದ ಹಾಗೆ, ಸದ್ಯ ಟೀಸರ್‌ ಮತ್ತು ಹಾಡು ಬಿಡುಗಡೆ ಮೂಲಕ ಪ್ರಚಾರ ಕಾರ್ಯದಲ್ಲಿರುವ “ಲವ್‌ ಬರ್ಡ್ಸ್‌’ ಸಿನಿಮಾವನ್ನು ಇದೇ ಫೆಬ್ರವರಿ ವೇಳೆಗೆ ತೆರೆಗೆ ತರುವ ಯೋಚನೆಯಲ್ಲಿದೆ ಚಿತ್ರ ತಂಡ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next