Advertisement

Kannada ಸಿನೆಮಾ: ಲಂಗೋಟಿ ಮ್ಯಾನ್‌ ಟ್ರೇಲರ್‌ ಬಂತು

05:21 PM Sep 11, 2024 | Team Udayavani |

ಸಂಜೋತಾ ಭಂಡಾರಿ ನಿರ್ದೇಶನದ ಲಂಗೋಟಿ ಮ್ಯಾನ್‌ ಚಿತ್ರದ ಟೀಸರ್‌ ಹಾಗೂ ಟೈಟಲ್‌ ಸಾಂಗ್‌ ಇತ್ತೀಚೆಗಷ್ಟೇ ಬಿಡುಗಡೆಯಾಗಿ ಸಾಕಷ್ಟು ಸದ್ದು ಮಾಡಿತ್ತು. ಅದರ ಬೆನ್ನಲ್ಲೇ ಚಿತ್ರತಂಡ ಇದೀಗ ಟ್ರೇಲರ್‌ ಹರಿಬಿಟ್ಟಿದೆ. ಕಾಮಿಡಿ, ಎಮೋಷನ್ಸ್‌, ಫ್ಯಾಮಿಲಿ ಡ್ರಾಮಾ, ಆ್ಯಕ್ಷನ್‌ ಅಂಶಗಳನ್ನೊಳಗೊಂಡ ಟ್ರೇಲರ್‌ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ.

Advertisement

ಟೀಸರ್‌ ನೋಡಿ ಬೇರೆ ಬೇರೆ ರೀತಿಯ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದವು. ಹಾಡಿಗೆ ಸಾಕಷ್ಟು ಪಾಸಿಟಿವ್‌ ರೆಸ್ಪಾನ್ಸ್‌ ಸಿಕ್ಕಿತ್ತು. ಇದೀಗ ಟ್ರೇಲರ್‌ಗೆ ಮೆಚ್ಚುಗೆ ವ್ಯಕ್ತವಾಗುತ್ತಿವೆ. ಸೆಪ್ಟೆಂಬರ್‌ 20ರಂದು ರಾಜ್ಯಾದ್ಯಂತ ತೆರೆಕಾಣಲಿರುವ ನಮ್ಮ ಸಿನಿಮಾಕ್ಕೆ ಇದಕ್ಕಿಂತಲೂ ದೊಡ್ಡ ಮಟ್ಟದಲ್ಲಿ ಜನ ಕೈ ಹಿಡಿಯಲಿದ್ದಾರೆ ಎಂಬ ಭರವಸೆ ತಂಡದ್ದು. ಈ ಮೊದಲು ಮಿರ್ಚಿ ಮಂಡಕ್ಕಿ ಖಡಕ್‌ ಚಾಯ್‌ ಎಂಬ ಚಿತ್ರ ನಿರ್ದೇಶಿಸಿದ್ದ ಸಂಜೋತಾ, ಈ ಬಾರಿ ಲಂಗೋಟಿ ಮ್ಯಾನ್‌ ಬೆನ್ನು ಬಿದ್ದಿದ್ದಾರೆ. ಈ ಚಿತ್ರದ ನಿಜವಾದ ಹೀರೋ ಎಂದರೆ ಲಂಗೋಟಿಯೇ. ಅದಕ್ಕೆ ಅದನ್ನೇ ಹೆಸರಾಗಿಸಿದ್ದೇನೆ. ಇದರ ಕುರಿತು ಸಾಕಷ್ಟು ಚರ್ಚೆಗಳಾಗಿವೆ. ಅವೆಲ್ಲದಕ್ಕೂ ಸಿನಿಮಾನೇ ಉತ್ತರ ನೀಡಲಿದೆ ಎನ್ನುತ್ತಾರೆ ನಿರ್ದೇಶಕಿ.

ವಿಶೇಷವೆಂದರೆ ಸಂಜೋತಾ ಜತೆ ಮತ್ತಷ್ಟು ಮಹಿಳಾ ತಂತ್ರಜ್ಞರು ಈ ಸಿನಿಮಾಕ್ಕೆ ಕೈ ಜೋಡಿಸಿದ್ದಾರೆ. ಐಶ್ವರ್ಯಾ ರಮೇಶ್‌, ವರ್ಷ ಅಮರನಾಥ್‌ ನೃತ್ಯ ಸಂಯೋಜಿಸಿದ್ದಾರೆ. ಸುಧೀಕ್ಷಾ ಎನ್‌ ರೆಡ್ಡಿ ಕಾಸ್ಟ್ಯೂಮ್‌, ರೋಮಿ ಮೇಕಪ್‌ ವಿಭಾಗದಲ್ಲಿ ಕಾರ್ಯ ನಿರ್ವಹಿಸಿದ್ದಾರೆ.

ತನು ಟಾಕೀಸ್‌ ಬ್ಯಾನರ್‌ ಅಡಿಯಲ್ಲಿ ನಿರ್ಮಾಣವಾಗಿರುವ ಈ ಚಿತ್ರದಲ್ಲಿ ಆಕಾಶ್‌ ರ್‍ಯಾಂಬೋ, ಸ್ನೇಹ ಖುಷಿ, ಸಂಹಿತಾ ವಿನ್ಯಾ, ಧೀರೇಂದ್ರ, ಹುಲಿ ಕಾರ್ತಿಕ್‌, ಗಿಲ್ಲಿ ನಟ, ಪಲ್ಟಿ ಗೋವಿಂದ್‌ ನಟಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next