ಕುಂ ವೀರಭದ್ರಪ್ಪನವರ “ಕುಬುಸ” ಕಥೆ ಆಧರಿಸಿ ಮಾಡಿರುವ ಕುಬುಸ ಕನ್ನಡ ಚಲನಚಿತ್ರದ ಮೊದಲ ಟೀಸರ್ ಇತ್ತೀಚೆಗೆ ಹೊಸಪೇಟೆಯ ಮರಿಯಮ್ಮನಹಳ್ಳಿಯಲ್ಲಿ ಬಿಡುಗಡೆ ಮಾಡಲಾಯಿತು.
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಮಂಜಮ್ಮ ಜೋಗತಿರವರು “ಕುಬುಸ” ಚಿತ್ರದ ಮೊದಲ ಟೀಸರ್ ಅನ್ನು ಬಿಡುಗಡೆ ಮಾಡಿಕೊಟ್ಟರು.
ಈ ಚಿತ್ರದಲ್ಲಿ ಎಲ್ಲರೂ ಉತ್ತಮವಾಗಿ ಅಭಿನಯಿಸಿದ್ದಾರೆ, ಈ ಜಾಗದಲ್ಲಿ ಪಂಚಮಹಾ ಸುಮಂಗಲಿಯರ ಕೈಯಲ್ಲಿ ಬಿಡುಗಡೆಯಾದ ಈ ಚಿತ್ರ ಯಶಸ್ಸು ಕಾಣಲಿ ಎಂದು ಹಾಡಿನ ಮೂಲಕ ಆಶೀರ್ವದಿಸಿದರು. ಈ ನೆಲದ ಚಿತ್ರಗಳು ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಜನರು ನೋಡಬೇಕು ಎಂದರು. ಹೊಸಪೇಟೆಯ ರಂಗಭೂಮಿಯ ಕಲಾವಿದರು ಇದ್ದು ನಮ್ಮನ್ನು ಗುರುತಿಸಿ ಈ ಚಿತ್ರದಲ್ಲಿ ಬಳಸಿರುವುದು ಸಂತಸ ತಂದಿದೆ ಎಂದರು.
ರಾಮಾ ರಾಮಾರೇ ಖ್ಯಾತಿಯ ನಟರಾಜ್ ಎಸ್ ಭಟ್ ನಾಯಕ, ಮಹಾಲಕ್ಷ್ಮಿ ನಾಯಕಿಯಾಗಿದ್ದು, ಮುಖ್ಯಭೂಮಿಕೆಯಲ್ಲಿ ಹನುಮಕ್ಕ, ಮಂಜಮ್ಮ ಜೋಗತಿ ಅಭಿನಯಿಸಿದ್ದಾರೆ. ಹೊಸಪೇಟೆಯವರಾದ ವಿ. ಶೋಭರವರು ಚಿತ್ರದ ನಿರ್ಮಾಣ ಮಾಡಿದ್ದು, ರಘುರಾಮ್ ಚರಣ್ ರವರ ಚೊಚ್ಚಲ ನಿರ್ದೇಶನದ ಚಿತ್ರವಾಗಿದೆ. ಪ್ರದೀಪ್ ಚಂದ್ರ ಸಂಗೀತ ನೀಡಿದ್ದು, ಚೇತನ್ ಶರ್ಮ ಛಾಯಾಗ್ರಹಣವಿದೆ