Advertisement

ಪ್ರೇಕ್ಷಕರನ್ನು ಹೆದರಿಸಲು ರೆಡಿ: ಹಾರರ್- ಥ್ರಿಲ್ಲರ್ ‘ಕಪಾಲ’ ಈ ವಾರ ತೆರೆಗೆ

03:28 PM Sep 15, 2022 | Team Udayavani |

ಬಹುತೇಕ ಹೊಸ ಪ್ರತಿಭೆಗಳೇ ಸೇರಿ ನಿರ್ಮಿಸಿರುವ “ಕಪಾಲ’ ಸಿನಿಮಾ ಈ ವಾರ ತೆರೆಗೆ ಬರುತ್ತಿದೆ. ಇತ್ತೀಚೆಗಷ್ಟೇ “ಕಪಾಲ’ ಸಿನಿಮಾದ ಟೀಸರ್‌, ಟ್ರೇಲರ್‌ ಬಿಡುಗಡೆ ಮಾಡಿರುವ ಚಿತ್ರತಂಡ ಭರದಿಂದ ಸಿನಿಮಾದ ಪ್ರಚಾರ ಕಾರ್ಯಗಳಲ್ಲಿ ನಿರತವಾಗಿದೆ. ಇನ್ನು “ಕಪಾಲ’ ಸಿನಿಮಾದ ಬಿಡುಗಡೆಗೂ ಮುನ್ನ ಮಾಧ್ಯಮಗಳ ಮುಂದೆ ಬಂದಿದ್ದ ಚಿತ್ರತಂಡ, ಸಿನಿಮಾ ಬಿಡುಗಡೆಯ ಬಗ್ಗೆ ಒಂದಷ್ಟು ಮಾಹಿತಿ ಹಂಚಿಕೊಂಡಿತು.

Advertisement

ಮೊದಲಿಗೆ ಮಾತನಾಡಿದ ನಿರ್ಮಾಪಕಿ ಸೌಮ್ಯಾ ಕೆ. ಶೆಟ್ಟಿ, “ಇದೊಂದು ಸಸ್ಪೆನ್ಸ್-ಹಾರರ್‌ ಸಿನಿಮಾ. ಹೊಸ ಪ್ರತಿಭೆಗಳೇ ಸೇರಿಕೊಂಡು ಈ ಸಿನಿಮಾ ಮಾಡಿದ್ದೇವೆ. ಈಗಾಗಲೇ ಸಿನಿಮಾದ ಟೀಸರ್‌, ಟ್ರೇಲರ್‌ ಎಲ್ಲದಕ್ಕೂ ಒಳ್ಳೆಯ ರೆಸ್ಪಾನ್ಸ್‌ ಸಿಗುತ್ತಿದೆ. ಸೆ. 16ಕ್ಕೆ ಕರ್ನಾಟಕ ರಾಜ್ಯಾದ್ಯಂತ ಸಿನಿಮಾ 80ಕ್ಕೂ ಹೆಚ್ಚಿನ ಕೇಂದ್ರಗಳಲ್ಲಿ ಬಿಡುಗಡೆಯಾಗಲಿದ್ದು, ಅದಾದ ಒಂದು ವಾರದ ಬಳಿಕ ಅಮೆರಿಕಾದಲ್ಲಿ ಸಿನಿಮಾ ಬಿಡುಗಡೆಯಾಗಲಿದೆ’ ಎಂದು ಮಾಹಿತಿ ನೀಡಿದರು.

ಚಿತ್ರದ ಬಗ್ಗೆ ಮಾತನಾಡಿದ ನಿರ್ದೇಶಕ ವಿನಯ್‌ ಯದುನಂದನ್‌, “ಕೋವಿಡ್‌ ಆತಂಕದ ನಡುವೆಯೇ ಸಿನಿಮಾದ ಬಹುತೇಕ ಚಿತ್ರೀಕರಣ ನಡೆಸಿದ್ದೇವೆ. ಮೂರು ಕಾಲಘಟ್ಟದಲ್ಲಿ ಸಿನಿಮಾದ ಕಥೆ ನಡೆಯುತ್ತದೆ. ಸಿನಿಮಾದಲ್ಲಿ ಪ್ರೇಕ್ಷಕರನ್ನು ಬಿಚ್ಚಿಬೀಳಿಸುವಂಥ ಅಂಶಗಳಿದ್ದು, ಪ್ರೇಕ್ಷಕರಿಗೆ ಇಷ್ಟವಾಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

“ಎಸ್‌ಕಾರ್‌ ಪ್ರೊಡಕ್ಷನ್ಸ್‌’ ಬ್ಯಾನರ್‌ನಲ್ಲಿ ಸೌಮ್ಯಾ ಕೆ. ಶೆಟ್ಟಿ ನಿರ್ಮಿಸಿರುವ “ಕಪಾಲ’ ಚಿತ್ರಕ್ಕೆ ವಿನಯ್‌ ಯದುನಂದನ್‌ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ನವ ಪ್ರತಿಭೆಗಳಾದ ಅಭಿಮನ್ಯು ಪ್ರಜ್ವಲ್‌, ಆರ್ಯನ್‌ ಚೌಧರಿ, ಸುಷ್ಮಾ ಗೌಡ, ಪ್ರತೀಕ್ಷಾ ಗೌಡ, ಅಶೋಕ್‌ ಹೆಗ್ಡೆ, ಬಿ. ಎಂ. ಗಿರಿರಾಜ್‌, ಯುಮುನಾ ಶ್ರೀನಿಧಿ, ಗವಿಸಿದ್ಧಯ್ಯ ಆರ್‌, ನಿತಿನ್‌ ಬಸವರಾಜು, ನಾಗಭೂಷಣ್‌ ದ್ರಾವಿಡ್‌, ಸಂಧ್ಯಾ ಅರಕೆರೆ, ಪೃಥ್ವಿ ದ್ರಾವಿಡ್‌, ವಿಲಾಸ್‌ ರಾವ್‌, ಅನಿಲ್‌ ಚಿಮ್ಮಯ್ಯ, ಸಾಯಿನಾಗ್‌ ಮೊದಲಾದವರು ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

“ಕಪಾಲ’ ಚಿತ್ರಕ್ಕೆ ಪ್ರವೀಣ್‌ ಎಂ. ಪ್ರಭು ಛಾಯಾಗ್ರಹಣ, ಶಾಂತ ಕುಮಾರ್‌ ಸಂಕಲನವಿದೆ. ಚಿತ್ರದ ಹಾಡುಗಳಿಗೆ ಸಚಿನ್‌ ಬಸ್ರೂರ್‌ ಸಂಗೀತ ಸಂಯೋಜಿಸಿದ್ದಾರೆ. ಬೆಂಗಳೂರು, ತುಮಕೂರು, ಮಂಗಳೂರು ಸುತ್ತಮುತ್ತ ಚಿತ್ರದ ಬಹುತೇಕ ಚಿತ್ರೀಕರಣ ನಡೆಸಲಾಗಿದೆ. ಟೀಸರ್‌, ಟ್ರೇಲರ್‌ ಮೂಲಕ ಸೌಂಡ್‌ ಆಡುತ್ತಿರುವ “ಕಪಾಲ’ ಹೇಗಿರಲಿದೆ ಅನ್ನೋದು ಈ ವಾರಾಂತ್ಯಕ್ಕೆ ಗೊತ್ತಾಗಲಿದೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next