Advertisement

ತಲೆಗೆ ಹುಳ ಬಿಡೋ ಸಿನಿಮಾ

03:45 AM Apr 07, 2017 | Team Udayavani |

-ಪಕ್ಕದಲ್ಲಿ ಮಲ್ಕೊಂಡ್ರೆ ಮಾತ್ರ ಹಾದರ ಅಲ್ಲ; ಮನಸ್ಸಲಿ ಇಟ್ಕೊಂಡ್ರೂ ಹಾದರಾನೇ
– ಸಿಕ್‌ ಸಿಕೊªàರನ್ನೆಲ್ಲಾ ಮನಸ್ಸಲ್ಲಿ ಇಟ್ಕೊಂಡು ಹೃದಯ ಹಾಳ್‌ ಮಾಡ್ಕೊàಬೇಡಿ
-ಕಣ್‌ಸನ್ನೆಯಿಂದ ಕಣ್ಣೀರವರೆಗಿನ ಕಥೆ 

ಹೀಗೆ ಚಿತ್ರದ ಹೆಸರಿನ ಸುತ್ತಮುತ್ತ ಎಲ್ಲೆಲ್ಲಿ ಜಾಗ ಸಿಗುತ್ತೋ ಅಲ್ಲೆಲ್ಲಾ ಒಂದೊಂದು ಸಾಲು ಸೇರಿಸಿದ್ದರು ನಿರ್ದೇಶಕ ಕೇಶವ್‌ ಚಂದು. ಅಷ್ಟೆಲ್ಲಾ ಸಾಲುಗಳ ಪೈಕಿ, “ಪಕ್ಕದಲ್ಲಿ ಮಲ್ಕೊಂಡ್ರೆ ಮಾತ್ರ ಹಾದರ ಅಲ್ಲ; ಮನಸ್ಸಲಿ ಇಟ್ಕೊಂಡ್ರೂ ಹಾದರಾನೇ …’ ಎಂಬ ಸಾಲು ಎಲ್ಲರನ್ನೂ ಕಾಡುತ್ತಲೇ ಇತ್ತು. ನಿರೂಪಕ ಯತಿರಾಜ್‌ಗೆ ಸ್ವಲ್ಪ ಜಾಸ್ತಿಯೇ ಕಾಡುತಿತ್ತು ಎಂದರೆ ತಪ್ಪಿಲ್ಲ. ಅದೇ ಕಾರಣಕ್ಕೆ ಅವರು ನಿರ್ದೇಶಕರನ್ನು ಅದರರ್ಥ ಏನು ಎಂದು ಕೇಳುತ್ತಿದ್ದರು. ಆದರೆ, ನಿರ್ದೇಶಕರು ಮಾತ್ರ ಉತ್ತರಿಸುವ ಮೂಡ್‌ನ‌ಲ್ಲಿರಲಿಲ್ಲ. ಅವರಿಗೆ ಚಿತ್ರದ ಟ್ರೇಲರ್‌ ಮತ್ತು ಮೇಕಿಂಗ್‌ ವೀಡಿಯೋ ಮಾತ್ರ ಬಿಡುಗಡೆ ಮಾಡುವ ಮತ್ತು ಪ್ರದರ್ಶಿಸುವ ಆಸಕ್ತಿ ಇತ್ತು. ಹಾಗಾಗಿ ಅವರು ಆ ಬಗ್ಗೆ ಹೆಚ್ಚು ಗಮನ ಹರಿಸುತ್ತಿದ್ದರೇ ಹೊರತು, ನಿರೂಪಕರ ಪ್ರಶ್ನೆಗೆ ಉತ್ತರಿಸುವ ಮೂಡ್‌ನ‌ಲ್ಲಿರಲಿಲ್ಲ.

Advertisement

ಹಾಗಂತ ಯತಿರಾಜ್‌ ಸಹ ಬಿಡುವ ಮೂಡ್‌ನ‌ಲ್ಲಿರಲಿಲ್ಲ. ನಿಲ್ಲಿಸಿಕೊಂಡು ಕೇಳಿಯೇ ಬಿಟ್ಟರು, ಏನದು ಅಂತ. ಕೊನೆಗೆ ಉತ್ತರಿಸಿದ ನಿರ್ದೇಶಕರು, “ಇದೊಂದು ಪ್ರೀತಿಯ ಕುರಿತಾದ ಸಿನಿಮಾ. ಇವತ್ತು ಜನ ಹೇಗಾಗಿದ್ದಾರೆ ಅಂದರೆ, ಸಂದೇಶ ಎಲ್ಲಾ ಕೇಳುವ ಸ್ಥಿತಿಯಲ್ಲಿಲ್ಲ. ಆದರೆ, ಅವರು ಯೋಚನೆ ಮಾಡುವಂತೆ ಮಾಡಬೇಕು. ಇನ್ನೂ ಸರಿಯಾಗಿ ಹೇಳಬೇಕೆಂದರೆ, ಅವರ ತಲೆಗೆ ಹುಳ ಬಿಡಬೇಕಿತ್ತು. ಆ ಕಾರಣ ಇಂತಹ ಸಂಭಾಷಣೆಗಳು ಮತ್ತು ಸಾಲುಗಳನ್ನು ಸೇರಿಸಿದ್ದೇವೆ. ಚಿತ್ರ ನೋಡಿದ ನಂತರ ಒಂದಿಷ್ಟು ವಿಷಯಗಳು ಕಾಡಬೇಕು ಎನ್ನುವ ಕಾರಣಕ್ಕೆ ಈ ಪ್ರಯತ್ನ’ ಎಂದರು.

ಈ ಚಿತ್ರದಲ್ಲಿ ಒಂದು ಅನಿರೀಕ್ಷಿತ ಕ್ಲೈಮ್ಯಾಕ್ಸ್‌, ಎರಡು ಜಾನರ್‌ಗಳು, ಮೂರು ಪ್ರೇಮಕಥೆಗಳು ಮತ್ತು ನಾಲ್ಕು ಪಾತ್ರಗಳು ಪ್ರಮುಖವಾಗಿ ಇದೆಯಂತೆ. “ಎಲ್ಲವನ್ನೂ ವಿಭಿನ್ನವಾಗಿ ಹೇಳುವ ಪ್ರಯತ್ನ ಮಾಡಿದ್ದೇವೆ. ಚಿತ್ರ ನೋಡೋಕೆ ಬಂದ ಪ್ರೇಕ್ಷಕರು ಯೋಚಿಸಬೇಕು. ಇಲ್ಲಿ ಪ್ರೇಮ ಮತ್ತು ಕಾಮದ ವ್ಯತ್ಯಾಸವನ್ನ ಹೇಳ್ಳೋಕೆ ಹೊರಟಿದ್ದೇವೆ. ಇನ್ನೂ ಹೆಚ್ಚು ಅರ್ಥವಾಗಬೇಕು ಎಂದರೆ ಸಿನಿಮಾ ನೋಡಿ’ ಎಂದು ಮಾತು ಮುಗಿಸಿದರು.

ಈ ಚಿತ್ರದಲ್ಲಿ ಪ್ರಮೋದ್‌, ಲಕ್ಕಿ, ಸುವರ್ಣ, ಕಿಂಗ್‌ ಮೋಹನ್‌ ಮುಂತಾದವರು ನಟಿಸಿದ್ದಾರೆ. ಕವಿತಾ ರಘು ಎನ್ನುವವರು ಈ ಚಿತ್ರವನ್ನು ನಿರ್ಮಿಸಿದರೆ, ಆದಿಲ್‌ ನದಾಫ್ ಎನ್ನುವವರು ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಅಂದ ಹಾಗೆ, “ಐ — ಯೂ’ ಚಿತ್ರ ಮುಂದಿನ ತಿಂಗಳು ಬಿಡುಗಡೆಯಾಗುತ್ತದಂತೆ.

Advertisement

Udayavani is now on Telegram. Click here to join our channel and stay updated with the latest news.

Next