Advertisement

ಕನ್ನಡ ಭಾಷೆಯ ಅಳಿವು ಕಪೋಲ ಕಲ್ಪಿತ

06:55 AM Aug 18, 2017 | |

ಉಡುಪಿ: ಕನ್ನಡ ಭಾಷೆಗೆ ಗಂಡಾಂತರ ಕಾದಿದೆ. ಅದು ಸದ್ಯದಲ್ಲಿಯೇ ಅಳಿಯಲಿದೆ ಎಂಬಿತ್ಯಾದಿ ಕೂಗುಗಳ ಕನ್ನಡಿಗರನ್ನು ತಲ್ಲಣಗೊಳಿಸುತ್ತಿವೆ. ಆದರೆ ಇದು ಕಪೋಲ ಕಲ್ಪಿತ. ಕನ್ನಡ ಭಾಷೆಗೆ ಅಳಿವಿಲ್ಲ ಎಂದು ಮಣಿಪಾಲ ಮಾಧವ ಪೈ ಸ್ಮಾರಕ ಕಾಲೇಜಿನ ಕನ್ನಡ ಉಪನ್ಯಾಸಕ ರಾಘವೇಂದ್ರ ತುಂಗ ಅವರು ಹೇಳಿದರು.

Advertisement

ಅವರು ಪೂರ್ಣಪ್ರಜ್ಞ ಕಾಲೇಜಿನ ಕನ್ನಡ ವಿಭಾಗವು ಆಯೋಜಿಸಿದ ಕನ್ನಡ ವಿದ್ಯಾರ್ಥಿಗಳ ಅಭಿನಂದನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.ಇತ್ತೀಚೆಗೆ ನಡೆದ ಸಮೀಕ್ಷೆಯ ಆಧಾರದಲ್ಲಿ ಪತ್ರಿಕೆಯಲ್ಲಿ ಲೇಖನವೊಂದು ಪ್ರಕಟವಾಗಿದೆ. ಅದರ ಪ್ರಕಾರ ಕನ್ನಡವು ಜಾಗತಿಕ ಮಟ್ಟದಲ್ಲಿ ಒಂಭತ್ತನೆಯ ಸ್ಥಾನದಲ್ಲಿದೆ. ಸುಮಾರು 30 ಭಾಷೆಗಳು ವಿಶ್ವದಲ್ಲಿ ಬಲಿಷ್ಠವಾಗಿದ್ದು, ಅದರಲ್ಲಿ ಕನ್ನಡವೂ ಒಂದು ಎನ್ನುವ ವರದಿ ಬಂದಿದೆ ಎಂದರು. 

ಕಾಲೇಜಿನ ಪ್ರಾಂಶುಪಾಲ ಡಾ| ಬಿ. ಜಗದೀಶ್‌ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ವಿಭಾಗದ ಮುಖ್ಯಸ್ಥ ಡಾ| ಶ್ರೀಕಾಂತ್‌ ಸಿದ್ದಾಪುರ ಉಪಸ್ಥಿತರಿದ್ದರು.ಕು| ಮಧುರಾ ಸ್ವಾಗತಿಸಿದರು. ಅಯ್ಯಪ್ಪ ಕಾರ್ಯಕ್ರಮ ನಿರೂಪಿಸಿದರು. ಸಹನಾ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next