Advertisement
ಗಡಿಜಿಲ್ಲೆ ಬೆಳಗಾವಿ ಸೇರಿದಂತೆ ರಾಜ್ಯದ ಅನೇಕ ಜಿಲ್ಲೆಗಳಲ್ಲಿರುವ ಮರಾಠಾ ಸಮುದಾಯದ ಜನಕನ್ನಡಿಗರೇ ಆಗಿದ್ದಾರೆ. ಈ ಸಮುದಾಯದ ಮೂಲಮರಾಠಿ ಭಾಷೆ ಆಗಿದ್ದರೂ ಮನೆಯಲ್ಲಿ ಕನ್ನಡವನ್ನೇ ಮಾತನಾಡುತ್ತಾರೆ. ಅದರಂತೆ ಜಿಲ್ಲೆಯ ಅನೇಕಹಳ್ಳಿಗಳಲ್ಲಿರುವ ಮರಾಠಾ ಜನಾಂಗದವರಿಗೆ ಕನ್ನಡವೇ ಮಾತೃಭಾಷೆಯಾಗಿದೆ. ಹಿಂದುಳಿದ ಮರಾಠಾ ಸಮುದಾಯದ ಪ್ರಾಧಿಕಾರ ರಚನೆಯಾದರೆ ಅಭಿವೃದ್ಧಿ ಆಗುವುದರಲ್ಲಿ ಸಂದೇಹವೇ ಇಲ್ಲ. ಕೃಷಿ ಪ್ರಧಾನ ಜನಾಂಗ: ಬೆಳಗಾವಿ ನಗರ ಹಾಗೂ ಗಡಿಭಾಗ ಹೊರತುಪಡಿಸಿ ಅನೇಕ ಕಡೆಗಳಲ್ಲಿರುವ ಮರಾಠಾ ಸಮುದಾಯದವರ ಆಚಾರ-ವಿಚಾರ,ರೀತಿ-ನೀತಿ, ಸಂಸ್ಕೃತಿ, ಸಂಪ್ರದಾಯಗಳೆಲ್ಲವೂ ಕನ್ನಡದ್ದಾಗಿದೆ. ಹೆಚ್ಚಾಗಿ ಕೃಷಿಯನ್ನೇ ಅವಲಂಬಿಸಿರುವಈ ಸಮುದಾಯದವರ ವ್ಯವಹಾರ ಕನ್ನಡ ಭಾಷೆಯಲ್ಲಿಯೇ ನಡೆಯುತ್ತದೆ.
Related Articles
Advertisement
ನಾಡದ್ರೋಹಿ ಸಂಘಟನೆ: ಮಹಾರಾಷ್ಟ್ರ ಏಕೀಕರಣ ಸಮಿತಿ(ಎಂಇಎಸ್) ಎನ್ನುವುದು ಮರಾಠಿ ಭಾಷಿಕರಿಂದ ಕೂಡಿರುವ ನಾಡದ್ರೋಹಿ ಸಂಘಟನೆ ಆಗಿದೆ. ಈ ಸಂಘಟನೆಯಲ್ಲಿ ಅನೇಕ ಸಮುದಾಯದವರೂ ಸೇರಿಕೊಂಡಿದ್ದಾರೆ. ಮರಾಠಿ ಮಾತನಾಡುವ ಬೇರೆ ಬೇರೆ ಜನಾಂಗದವರು ಇದ್ದಾರೆ. ಖಾನಾಪುರ, ಬೆಳಗಾವಿ ದಕ್ಷಿಣ, ಉತ್ತರ, ಬೆಳಗಾವಿ ಗ್ರಾಮೀಣ ಕ್ಷೇತ್ರದ ಕೆಲವರು ಮರಾಠಿ ಭಾಷಿಕರನ್ನು ಹೊರತುಪಡಿಸಿ ಇನ್ನುಳಿದ ಜನ ಎಂಇಎಸ್‌ನತ್ತ ಕಣ್ಣೆತ್ತಿಯೂ ನೋಡುವುದಿಲ್ಲ ಎನ್ನುತ್ತಾರೆ ಕೌತಗಾರ.
ರಾಜ್ಯದಲ್ಲಿ ಸುಮಾರು 60 ಲಕ್ಷಕ್ಕೂ ಹೆಚ್ಚು ಮರಾಠಾ ಸಮದಾಯದವರು ಇದ್ದಾರೆ. ಇದರಲ್ಲಿಶೇ. 80 ಜನ ಕನ್ನಡ ಭಾಷಿಕರೇ ಇದ್ದಾರೆ. ಬೆಳಗಾವಿ, ವಿಜಯಪುರ, ಬಾಗಲಕೋಟೆ, ಬೀದರ, ಕಲಬುರ್ಗಿ,ಬೆಂಗಳೂರು, ತುಮಕೂರು, ಮೈಸೂರು,ಹುಬ್ಬಳ್ಳಿ-ಧಾರವಾಡ, ದಾವಣಗೆರೆ, ಉತ್ತರ ಕನ್ನಡ ಸೇರಿದಂತೆ ವಿವಿಧ ಕಡೆಗಳಲ್ಲಿ ನೆಲೆಸಿದ್ದಾರೆ. ಮೂಲ ಮರಾಠಿಗರಾಗಿದ್ದರೂ ಅವರೆಲ್ಲರೂ ಮಾತಾಡುವುದು ಕನ್ನಡವೇ ಆಗಿದೆ.
ರಾಜಕಾರಣ ಭಿನ್ನ : ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಸುಮಾರು ಒಂದೂವರೆ ಲಕ್ಷಕ್ಕೂ ಹೆಚ್ಚು ಮರಾಠಾ ಸಮುದಾಯವರಿದ್ದಾರೆ. ಆದರೆ ಇಲ್ಲಿ ಶಾಸಕರಾಗಿ ಆಯ್ಕೆ ಆಗಿರುವವರು ಲಿಂಗಾಯತಸಮುದಾಯದ ಲಕ್ಷ್ಮೀ ಹೆಬ್ಟಾಳಕರ. ಇವರಿಗೆ ಮರಾಠಿ ಭಾಷೆ ಗೊತ್ತಿಲ್ಲದಿದ್ದರೂಇಲ್ಲಿಯ ಜನಶಾಸಕಿಯನ್ನಾಗಿ ಆಯ್ಕೆ ಮಾಡಿದ್ದಾರೆ. ಜತೆಗೆ ಬೆಳಗಾವಿ ಉತ್ತರ, ದಕ್ಷಿಣ, ಖಾನಾಪುರ, ಕಿತ್ತೂರುಕ್ಷೇತ್ರಗಳಲ್ಲಿರುವ ಅನೇಕ ಮರಾಠಾ ಸಮುದಾಯದವರು ಕನ್ನಡ ಭಾಷೆ ಮಾತನಾಡುತ್ತಾರೆ. ಬೆಳಗಾವಿ ತಾಲೂಕಿನ ರಾಜಕಾರಣ ವಿಭಿನ್ನವಾಗಿದ್ದು, ಜಾತಿ, ಭಾಷೆಯ ರಾಜಕಾರಣಕ್ಕಿಂತ ಪಕ್ಷ ಹಾಗೂ ವ್ಯಕ್ತಿಯ ಆಧಾರದ ಮೇಲೆ ನಡೆಯುತ್ತಿದೆ.
ಮರಾಠಾ ಸಮುದಾಯದವರು ಕನ್ನಡ ಭಾಷೆಯನ್ನುಒಪ್ಪಿಕೊಂಡಿದ್ದಾರೆ. ಅನೇಕ ಕಡೆಗಳಲ್ಲಿ ನೆಲೆಸಿರುವ ಈ ಸಮುದಾಯ ಕನ್ನಡವನ್ನೇ ಅಪ್ಪಿಕೊಂಡು ಬದುಕು ಸಾಗಿಸುತ್ತಿದೆ. ಎಂಇಎಸ್ ಸಂಘಟನೆಯೇ ಬೇರೆ, ಮರಾಠಾ ಸಮುದಾಯವೇ ಬೇರೆಯಾಗಿದೆ. ಈಸಂಘಟನೆಯೊಂದಿಗೆ ಮರಾಠಾ ಜಾತಿಯನ್ನುತುಲನೆ ಮಾಡುವುದು ಸರಿಯಲ್ಲ. – ಅನಿಲ್ ಬೆನಕೆ, ಶಾಸಕ, ಉತ್ತರ ಕ್ಷೇತ್ರ
ಮರಾಠಾ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿರುವಮುಖ್ಯಮಂತ್ರಿಗಳ ಕ್ರಮ ಸ್ವಾಗತಾರ್ಹ. ಒಂದು ಸಮುದಾಯದ ಅಭಿವೃದ್ಧಿಗಾಗಿ ಈ ಪ್ರಾಧಿಕಾರ ರಚಿಸಿ 50 ಕೋಟಿ ರೂ. ಅನುದಾನವನ್ನು ಸರ್ಕಾರ ನೀಡಿದೆ. ಇದನ್ನು ವಿರೋಧಿ ಸುವಬದಲು ಸಾಧಕ-ಬಾಧಕ ಬಗ್ಗೆ ಚರ್ಚೆ ನಡೆಸಬೇಕಾದ ಅಗತ್ಯವಿದೆ. –ಅಭಯ ಪಾಟೀಲ, ಶಾಸಕ, ದಕ್ಷಿಣ ಕ್ಷೇತ
-ಭೈರೋಬಾ ಕಾಂಬಳೆ