Advertisement
ಜೂ. 24ರಂದು ವಿಕ್ರೋಲಿ ಕನ್ನಡ ಸಂಘ ಸಂಚಾಲಕತ್ವದ ವಿಕ್ರೋಲಿ ಪೂರ್ವ ಠಾಗೋರ್ ನಗರ ವೀಕೇಸ್ ಇಂಗ್ಲಿಷ್ ಹೈಸ್ಕೂಲ್ ಸಭಾಗೃಹದಲ್ಲಿ ನಡೆದ ದಶಮಾನೋತ್ಸವ ಸಂಭ್ರಮ ದಲ್ಲಿರುವ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಇದರ ಕಲಾವಿದರಿಂದ ನಡೆಯಲಿರುವ ಮಹಿಷ ಮರ್ದಿನಿ ಯಕ್ಷಗಾನ ಪ್ರಸಂಗದ ತರಬೇತಿಗೆ ದೀಪ ಪ್ರಜ್ವಲಿಸಿ ಚಾಲನೆ ನೀಡಿ ಮಾತನಾಡಿದ ಅವರು, ಕಳೆದೆರಡು ದಶಕಗಳಿಂದ ಮುಂಬಯಿ ಪತ್ರ ಕರ್ತರು ನನ್ನ ಕಲಾಸೇವೆಗೆ ಬಹಳಷ್ಟು ಸಹಕರಿಸುತ್ತಿದ್ದಾರೆ. ಅವರ ಈ ಸಣ್ಣ ಪ್ರಯತ್ನಕ್ಕೆ ನನ್ನ ಸಹಕಾರ, ಪ್ರೋತ್ಸಾಹ ಸದಾಯಿದೆ. ಇದು ನನ್ನ ಪಾಲಿಗೆ ಒದಗಿ ಬಂದ ಸುವರ್ಣ ಅವಕಾಶವಾಗಿದ್ದು, ಯಾವುದೇ ರೀತಿಯ ಫಲಾಪೇಕ್ಷೆಯಿ ಲ್ಲದೆ ಸಹಕರಿಸುತ್ತೇನೆ ಎಂದು ಶುಭಹಾರೈಸಿದರು.
Related Articles
Advertisement
ಜಾಗತಿಕವಾಗಿ ಪತ್ರಕರ್ತರ ಕೊಡುಗೆ ಅಮೂಲ್ಯವಾದುದು. ಭೌಗೋಳಿಕ ವಿಚಾರಗಳನ್ನು ಜನರತ್ತ ಮನವೊಲಿಸುವಲ್ಲಿ ಶ್ರಮಿಸುವಲ್ಲಿ ಪತ್ರಕರ್ತರ ಪಾತ್ರ ಮಹತ್ತರವಾದುದು ಮಾಧ್ಯಮಗಳ ಮೂಲಕ ಆಚಾರ-ವಿಚಾರಗಳನ್ನು ವಿನಿ ಯೋಗಿಸಿಕೊಳ್ಳುವ ಪತ್ರಕರ್ತರ ಸಾಂಘಿಕತೆ ಅವಶ್ಯವಾಗಿದೆ. ನಮ್ಮ ಪತ್ರಕರ್ತರು ದಶ ಸಂಭ್ರಮದಲ್ಲಿದ್ದು ಅವರೆಲ್ಲರ ಸೇವೆ ಫಲ ಪ್ರದವಾಗಲಿ. ಸಂಘದ ವತಿ ಯಿಂದ ನಿಮ್ಮ ಈ ಕಲಾ ಸೇವೆಗೆ ಪ್ರೋತ್ಸಾಹ, ಸಹಕಾರ ಸದಾಯಿದೆ.-ಶ್ಯಾಮ್‌ಸುಂದರ್ ಶೆಟ್ಟಿ, ಅಧ್ಯಕ್ಷರು, ವಿಕ್ರೋಲಿ ಕನ್ನಡ ಸಂಘ ಸಂಘವು 10 ವರ್ಷ ಪೂರೈಸುತ್ತಿದ್ದು ಇದರ ದಶಮಾನೋತ್ಸವವನ್ನು ಸಾಂಕೇ ತಿಕವಾಗಿ ಆಚರಣೆ ಮಾಡುವ ನಿರ್ಣಯ ಮಾಡಿದ್ದೇವೆ. ಅದಕ್ಕಾಗಿ ಮನೋ ರಂಜನೆ, ನೃತ್ಯ, ಯಕ್ಷಗಾನ ಇತ್ಯಾದಿಗಳ ಸಮ್ಮಿಲನದೊಂದಿಗೆ ದಶ ಸಂಭ್ರಮಕ್ಕೆ ಸಿದ್ಧರಾಗಿದ್ದೇವೆ. ಕಲಾ ಉಳಿವಿಗಾಗಿ ಅಜೆಕಾರು ಬಾಲಕೃಷ್ಣರು ಸ್ವಾರ್ಥ ಕಂಡವರಲ್ಲ. ಹಣವನ್ನೂ ಬಯಸಿದವರಲ್ಲ. ಗಳಿಕೆಯನ್ನೇ ಆಯ್ಕೆ ಮಾಡಿದ್ದರೆ ಇವರು ದೊಡ್ಡ ಯಕ್ಷಗಾನ ಅಕಾಡೆಮಿಯನ್ನೇ ಹುಟ್ಟುಹಾಕಬಹುದಿತ್ತು. ಅದನ್ನೆಲ್ಲಾ ಬದಿಗೊತ್ತಿ ಅವರು ಸಾವಿರಾರು ಕಲಾವಿದರನ್ನು ರೂಪಿಸುತ್ತಿರುವುದು ಸ್ತುತ್ಯರ್ಹ. ಇಂತಹ ಕಲಾಪೋಷಕರಿಂದ ಪತ್ರಕರ್ತ ಕಲಾವಿದರು ಯಕ್ಷಗಾನ ತರಬೇತಿ ಪಡೆಯುತ್ತಿರುವುದು ಕಲಾ ಶ್ರೀಮಂತಿಕೆಯಾಗಿದೆ.
-ಚಂದ್ರಶೇಖರ ಪಾಲೆತ್ತಾಡಿ, ಅಧ್ಯಕ್ಷರು, ಕನ್ನಡಿಗ ಪತ್ರಕರ್ತರ ಸಂಘ ಚಿತ್ರ-ವರದಿ: ರೊನಿಡಾ ಮುಂಬಯಿ