Advertisement

ಕನ್ನಡ ಎರಡು ಸಾವಿರ ವರ್ಷಗಳ ಹಿನ್ನೆಲೆಯುಳ್ಳ ಜೀವಂತ ಭಾಷೆ: ಸಚಿವ ಕಾರಜೋಳ

07:29 PM Aug 12, 2022 | Team Udayavani |

ಬೆಂಗಳೂರು: ಹೃದಯವಾಹಿನಿ – ಕರ್ನಾಟಕ, ಮಂಗಳೂರು ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿ‌ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ 15ನೇ ರಾಷ್ಟ್ರೀಯ ಕನ್ನಡ ಸಂಸ್ಕ್ರತಿ ಸಮ್ಮೇಳನ ಬೆಂಗಳೂರಿನ ಬಸವ ಭವನ ಸಭಾಂಗಣದಲ್ಲಿ ನಡೆಯಿತು.

Advertisement

ಜಲಸಂಪನ್ಮೂಲ  ಸಚಿವ ಗೋವಿಂದ ಕಾರಜೋಳ ಅವರು  ಸಮ್ಮೇಳನವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಕನ್ನಡ ಭಾಷೆ ಎರಡುಸಾವಿರ ವರ್ಷಗಳಹಿನ್ನೆಲೆಯುಳ್ಳ ಜೀವಂತ ಭಾಷೆಯಾಗಿದೆ. ಜಗತ್ತಿನಲ್ಲಿ ಕನ್ನಡ ಭಾಷೆಗೆ ಇರುವ ಸ್ಥಾನಮಾನ ಬೇರೆ ಭಾಷೆಗಿಲ್ಲ. ಹಳೆಯ ಭಾಷೆಗಳಲ್ಲಿ ರಾಜ್ಯವೊಂದರ ಅಡಳಿತ‌ ಭಾಷೆಯಾಗಿರುವುದು ಕನ್ನಡ‌ ಮಾತ್ರ‌ ಎಂದು ಹೇಳಿದರು.

ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಖ್ಯಾತ ಲೇಖಕ ಡಾ.ಅಶೋಕ ನರೋಡೆ ಮಹಾಲಿಂಗಪುರ ಮಾತನಾಡಿ, ಕನ್ನಡ ಭಾಷಗೆ ಭವ್ಯ ಪರಂಪರೆ ಇದೆ. ಸಂಪದ್ಬರಿತವಾದ ಕನ್ನಡ‌ ಭಾಷೆಗೆ ಎರಡು ಸಾವಿರ ವರ್ಷಗಳ ಇತಿಹಾಸವಿದೆ. ಕನ್ನಡ ಅರಸು ಮನೆತನಗಳು ಅಖಂಡ ಭಾರತವನ್ನು ಆಳಿವೆ. ಕದಂಬ ಮತ್ತು ಗಂಗ ರಾಜ‌ಮನೆತನಗಳು‌ ಬಾದಾಮಿ ಚಾಲುಕ್ಯರು, ರಾಷ್ಟ್ರಕೂಟರು ಕಲ್ಯಾಣಿ ಚಾಲುಕ್ಯರು,‌ವಿಜಯನಗರ ಸಾಮ್ರಾಜ್ಯ‌ ಮುಂತಾದವುಗಳು‌ ತುಂಬಾ ಖ್ಯಾತಿವೆತ್ತ ಸಾಮ್ರಾಜ್ಯಗಳಾಗಿದ್ದವು ಎಂದರು.

ಈ ಸಂದರ್ಭ ನಾರಾಯಣ ಸಂಯುಕ್ತ ಪದವಿಪೂರ್ವ ಕಾಲೇಜಿನ ಕಾರ್ಯದರ್ಶಿ ರೂಪಾ ಎಂ.ಎಸ್, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸಹ ಕಂದಾಯ ಆಧಿಕಾರಿ ಜಿ.ಸಿದ್ದಲಿಂಗಪ್ಪ, ಮೌಲ್ಯಮಾಪಕ ರಂಗನಾಥ್, ಮುಖ್ಯೋಪಾಧ್ಯಾಹಿನಿ ವನಿತಾ.ಕೆ, ಮುಂಬೈಯ ಸಮಾಜ ಸೇವಕಿ ಪ್ರಭಾ ಸುವರ್ಣ, ಸಮಾಜ ಸೇವಕಿ ಸತ್ಯವತಿ ಚಂದ್ರಶೇಖರ್ ರಾಜು, ಶಿಲ್ಪ ಕಿರಣ್, ಸಮಾಜ ಸೇವಕಿ ಡಾ.ಸಂಸಾದ್, ಚಲನಚಿತ್ರ‌ನಟಿಗಳಾದ ಭೃಂದಾ, ಭೂಮಿಕಾ ರವರಿಗೆ ಹೃದಯವಂತರು – 2022 ಪ್ರಶಸ್ತಿ ಪ್ರದಾನ ಮಾಡಲಾಯಿತು.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮಾಜಿ ಮಹಾಪೌರ ಎಂ.ಗೌತಮ್ ಕುಮಾರ್, ಡಿ.ದೇವರಾಜ ಅರಸ್ ಟ್ರಕ್ ಟರ್ಮಿನಲ್ ಕಾರ್ಪೋರೇಶನ್ ಅಧ್ಯಕ್ಷ ಡಿ.ಎಸ್ ವೀರಯ್ಯ, ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ, ಬಿಬಿಎಂಪಿ ಮಾಜಿ ಮೇಯರ್ ಗೌತಮ್ ಕುಮಾರ್, ಕ್ಷೇಮಾಭಿವೃದ್ದಿ ಸಂಘದ ಪ್ರ.ಕಾರ್ಯದರ್ಶಿ ಕೆ.ಜಿ ರವಿ, ಕನ್ನಡ‌ ಸಂಘದ ಅಧ್ಯಕ್ಷ ಸಾಯಿಶಂಕರ್ ಉಪಸ್ಥಿತರಿದರು.

Advertisement

ಹೃದಯವಾಹಿನಿ ಅಧ್ಯಕ್ಷ ಕೆ.ಪಿ ಮಂಜುನಾಥ್ ಸಾಗರ್ ಪ್ರಾಸ್ತಾವಿಕ‌ ಮಾತುಗಳನ್ನಾಡಿದರು. ಬೃಹತ್ ಬೆಂಗಳೂರು‌ ಮಹಾನಗರ ಪಾಲಿಕೆ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿದ್ಧಿ ಸಂಘದ ಅಧ್ಯಕ್ಷ ಅಮೃತ್ ರಾಜ್ ಸ್ವಾಗತಿಸಿದರು.ಧನಂಜಯ ಮತ್ತು‌‌ ಮುರಲಿಕೃಷ್ಣ ಎನ್ ಕಾರ್ಯಕ್ರಮ ನಿರೂಪಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next