Advertisement

‘ಸ್ಪೂಕಿ’ಟೀಸರ್‌ ನಲ್ಲಿ ಕಾಲೇಜ್‌ ಸ್ಟೋರಿ!: ಹಾರರ್‌-ಥ್ರಿಲ್ಲರ್‌ ಚಿತ್ರ ತೆರೆಗೆ ಸಿದ್ಧ

02:01 PM Jun 24, 2022 | Team Udayavani |

ಆರಂಭದಿಂದಲೂ ತನ್ನ ಟೈಟಲ್‌ ಮತ್ತು ಫ‌ಸ್ಟ್‌ಲುಕ್‌ ಪೋಸ್ಟರ್‌ ಮೂಲಕ ಕುತೂಹಲ ಮೂಡಿಸಿದ್ದ “ಸ್ಪೂಕಿ ಕಾಲೇಜ್‌’ ಸಿನಿಮಾದ ಮೊದಲ ಟೀಸರ್‌ ಹೊರ ಬಂದಿದೆ. ನಿರ್ಮಾಪಕ ಹೆಚ್‌.ಕೆ ಪ್ರಕಾಶ್‌ “ಶ್ರೀದೇವಿ ಎಂಟರ್‌ಟೈನರ್’ ಬ್ಯಾನರ್‌ನಲ್ಲಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಭರತ್‌ ಜಿ. “ಸ್ಪೂಕಿ ಕಾಲೇಜ್‌’ ಸಿನಿಮಾಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಆ್ಯಕ್ಷನ್‌-ಕಟ್‌ ಹೇಳಿದ್ದಾರೆ.

Advertisement

ಇನ್ನು “ಶ್ರೀದೇವಿ ಮ್ಯೂಸಿಕ್‌’ ಯು-ಟ್ಯೂಬ್‌ ಚಾನೆಲ್‌ನಲ್ಲಿ ಬಿಡುಗಡೆಯಾಗಿರುವ ಔಟ್‌ ಆ್ಯಂಡ್‌ ಔಟ್‌ ಸೈಕಾಲಜಿಕಲ್‌ ಹಾರರ್‌-ಥ್ರಿಲ್ಲರ್‌ ಶೈಲಿಯ “ಸ್ಪೂಕಿ ಕಾಲೇಜ್‌’ ಟೀಸರ್‌ಗೆ ಸೋಶಿಯಲ್‌ ಮೀಡಿಯಾದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಟೀಸರ್‌ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಲಕ್ಷಕ್ಕೂ ಹೆಚ್ಚು ವೀವ್ಸ್‌ ಪಡೆದುಕೊಂಡಿದೆ.

“ಸ್ಪೂಕಿ’ ಟೀಸರ್‌ ಸಿನಿಪ್ರಿಯರು ಮಾತ್ರವಲ್ಲದೆ ಚಿತ್ರರಂಗದ ಮಂದಿಯ ಗಮನವನ್ನೂ ಸೆಳೆಯುತ್ತಿದ್ದು, ನಟರಾದ ರಮೇಶ್‌ ಅರವಿಂದ್‌, ಡಾಲಿ ಧನಂಜಯ್‌ ಸೇರಿದಂತೆ ಅನೇಕ ಸ್ಟಾರ್ “ಸ್ಪೂಕಿ ಕಾಲೇಜ್‌’ ಟೀಸರ್‌ ನೋಡಿ ಮೆಚ್ಚುಗೆಯ ಮಾತುಗಳನ್ನಾಡಿದ್ದು, ತಮ್ಮ ಸೋಶಿಯಲ್‌ ಮೀಡಿಯಾ ಖಾತೆಗಳಲ್ಲೂ ಟೀಸರ್‌ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:‘ಗೀತಾ ಪಿಕ್ಚರ್’ ನಡಿ ಅದ್ಧೂರಿ ‘ವೇದಾ’: ಶಿವಣ್ಣ ನಿರ್ಮಾಣದಲ್ಲಿ 125ನೇ ಚಿತ್ರ

“ಸ್ಪೂಕಿ’ ಎಂದರೆ ಭಯ. ಟೀಸರ್‌ ನೋಡಿದ ವರಿಗೆ “ಸ್ಪೂಕಿ’ ಪದದ ವಿಶ್ಲೇಷಣೆಯನ್ನು ನಿರ್ದೇಶಕರು ತಿಳಿಸುವ ಪ್ರಯತ್ನ ಮಾಡಿದ್ದಾರೆ. ಕನ್ನಡದ “ನಾ ನಿನ್ನ ಬಿಡಲಾರೆ’, “ಆಪ್ತಮಿತ್ರ’ದಂತಹ ಹಾರರ್‌ ಕಂ ಸಸ್ಪೆನ್ಸ್‌-ಥ್ರಿಲ್ಲರ್‌ ಸಿನಿಮಾಗಳ ರೀತಿ “ಸ್ಪೂಕಿ ಕಾಲೇಜ್‌’ ಕೂಡ ಪ್ರೇಕ್ಷಕರ ಮನಗೆಲ್ಲಲಿದೆ ಎಂಬ ವಿಶ್ವಾಸದ ಮಾತುಗಳನ್ನಾಡಿದ್ದಾರೆ.

Advertisement

ವಿವೇಕ್‌ ಸಿಂಹ, ಖುಷಿ ರವಿ, ಅಜಯ್‌ ಪೃಥ್ವಿ, ಹನುಮಂತೇ ಗೌಡ, ಕೆ. ಎಸ್‌ ಶ್ರೀಧರ್‌, ವಿಜಯ್‌ ಚೆಂಡೂರ್‌, ಎಂ. ಕೆ ಮಠ ಮೊದಲಾದ ಕಲಾವಿದರ ತಾರಾಗಣ “ಸ್ಪೂಕಿ ಕಾಲೇಜ್‌’ ಚಿತ್ರದಲ್ಲಿದೆ.

 ಜಿ. ಎಸ್‌. ಕಾರ್ತಿಕ ಸುಧನ್

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next