Advertisement

Desi Swara: ಕಮ್ಯುನಿಟಿ ಕಾರ್ನಿವಲ್‌ನಲ್ಲಿ ಕನ್ನಡ ಕಲರವ

03:20 PM Aug 05, 2023 | Team Udayavani |

ಸಿಂಗಪುರದ ನರ್ಪಣಿ ಸಂಸ್ಥೆಯು ಪ್ರತೀ ವರ್ಷ ನಡೆಸುವ ನರ್ಪಣಿ ಕಮ್ಯುನಿಟಿ ಕಾರ್ನಿವಲ್‌ನ ಈ ವರ್ಷದ ಕಾರ್ಯಕ್ರಮವು ಇಲ್ಲಿನ ಪಾರ್ಸಿ ರಿಸ್‌ನ ಡಿ ಮಾರ್ಕ್ನೂ ಆವರಣದಲ್ಲಿ ಜು.16ರಂದು ಜರಗಿತು.

Advertisement

ಈ ಸಾಲಿನ ಕಾರ್ಯಕ್ರಮಕ್ಕೆ ಸಿಂಗಪುರದ ಡೆಪ್ಯುಟಿ ಪ್ರೈಮ್‌ ಮಿನಿಸ್ಟ್‌ರ್‌ ಹೆಂಗ್‌ ಸ್ವಿ ಕೀಟ್‌ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ನರ್ಪಣಿ ಸಂಸ್ಥೆಯು ಸಿಂಗಪುರದಲ್ಲಿನ ವಿವಿಧ ಸಂಘ ಸಂಸ್ಥೆಗಳ ನಡುವೆ ಸೌಹಾರ್ದತೆ ಮೂಡಿಸುವ ಕೆಲಸ ಮಾಡುತ್ತಿದೆ ಎಂದರು. ಜತೆಗೆ ಕೋವಿಡ್‌ನ‌ ಸಮಯದಲ್ಲಿ ಸಂಸ್ಥೆಯ ಸಮಾಜಮುಖಿ ಕಾರ್ಯಗಳ ಬಗ್ಗೆ ಶ್ಲಾಘಿಸಿದರು.

ಈ ಕಾರ್ನಿವಲ್‌ನಲ್ಲಿ ಕನ್ನಡ ಸಂಘ ಸಿಂಗಪುರದ ಸದಸ್ಯೆರಲ್ಲರೂ ಭಾಗವಹಿಸಿದ್ದರು. ಕನ್ನಡ ಸಂಘದಿಂದ ಯಕ್ಷಗಾನ ವೇಷಧಾರಿಯ ಭಾವ ಚಿತ್ರ, ಮೈಸೂರು ದಸರಾ ವೈಭವವನ್ನು ಬಣ್ಣಿಸುವ ಗೊಂಬೆಗಳು, ಕರ್ನಾಟಕದ ವಿಶೇಷತೆಗಳನ್ನು ತೋರುವ ಬ್ಯಾನರ್‌ಗಳಿರುವ ಮಳಿಗೆಯು ಜನರನ್ನು ಆಕರ್ಷಿಸಿತ್ತು. ಭಾರತದ ಎಲ್ಲ ರಾಜ್ಯಗಳನ್ನು ಪ್ರತಿನಿಧಿಸುವ ವಿವಿಧ ಸಂಘಗಳ ಪೈಕಿ ಕನ್ನಡ ಸಂಘ (ಸಿಂಗಪುರ)ಕ್ಕೆ ಎರಡು ಪ್ರದರ್ಶನಗಳಿಗೆ ಅವಕಾಶ ಕೊಟ್ಟಿದ್ದು ವಿಶೇಷವಾಗಿತ್ತು.

ಸ್ಯಾಂಡಲ್‌ವುಡ್‌ ಸಿಂಗಾರೀಸ್‌ ತಂಡದವರು ಕನ್ನಡ ಚಿತ್ರಗೀತೆಗಳಿಗೆ ಹೆಜ್ಜೆ ಹಾಕಿದರು. ಅನಂತರ ಕನ್ನಡದ ಪ್ರಸಿದ್ಧ ಜಾನಪದ ನೃತ್ಯ ಕಂಸಾಳೆ ಯನ್ನು ನೃತ್ಯ ಸಿಂಗಾರ ತಂಡದವರು ಪ್ರದರ್ಶಿಸಿದರು.

ನೃತ್ಯ ಪ್ರದರ್ಶನದಲ್ಲಿ ಮಮತಾ ವೆಂಕಟ್‌ ಹಾಗೂ ಅವರ ತಂಡ ದವರಾದ ಶುಭಾ, ಆಶಾ, ವಿಜಯ ಲಕ್ಷ್ಮೀ, ಅರ್ಪಿತಾ, ಸೌಜನ್ಯಾ, ಸವಿತಾ ಹಾಗೂ ಸ್ವಾತಿ ಭೂಷಣ್‌ ಭಾಗವಹಿಸಿದ್ದರು. ಕಂಸಾಳೆ ಪ್ರದರ್ಶಿ ಸಿದ ತೇಜಸ್‌ ಎಂ.ಡಿ.ಯವರ ಸಂಯೋಜನೆಯ ನೃತ್ಯ ತಂಡ ದಲ್ಲಿ ಪದ್ಮಾ ಪ್ರೇಮ್‌ ಕುಮಾರ್‌, ಅಕ್ಷತಾ ಸಮಂತ್‌, ಶ್ರೀನಿತ್ಯಾ ವೆಂಕಟ್‌, ವೇದಾ ಭಟ್‌ , ನಿಕಿತಾ ಪ್ರಸಾದ್‌, ನವೀನ್‌ ಅಂಜಿನಪ್ಪ, ವಿನಯ್‌ ದತ್ತಾತ್ರಿ ಹಾಗೂ ಶಿವಕುಮಾರ್‌ ರಂಗಾಪುರ ನರ್ತಿಸಿದರು.

Advertisement

ಕಾರ್ಯಕ್ರಮ ಆಯೋಜಕರ ಕಡೆ ಯಿಂದ ಕನ್ನಡ ಸಂಘ (ಸಿಂಗಪುರ)ಕ್ಕೆ ಪ್ರಶಂಸನಾ ಪತ್ರ ಹಾಗೂ ಸ್ಮರಣಿಕೆಯನ್ನು ನೀಡಿ ಗೌರವಿಸ ಲಾಯಿತು. ಸಂಘದ ಗೌರವಾ ಧ್ಯಕ್ಷರಾದ ವೆಂಕಟರತ್ನಯ್ಯ ನವರು ಸಂಘದ ಪರವಾಗಿ ಪ್ರಶಂಸನಾ ಪತ್ರ ಹಾಗೂ ಸ್ಮರಣಿಕೆಯನ್ನು ಸ್ವೀಕರಿಸಿದರು.

ವರದಿ: ಶಿವಕುಮಾರ್‌ ರಂಗಾಪುರ

Advertisement

Udayavani is now on Telegram. Click here to join our channel and stay updated with the latest news.

Next