Advertisement

ಕೋವಿಡ್ ನಿಂದ ಸಾವನ್ನಪ್ಪಿದ ಸ್ಯಾಂಡಲ್ ವುಡ್ ನಿರ್ದೇಶಕ ನವೀನ್

05:44 PM May 03, 2021 | Team Udayavani |

ಬೆಂಗಳೂರು: ಸ್ಯಾಂಡಲ್ ವುಡ್ ಯುವ ನಿರ್ದೇಶಕ ನವೀನ್ ಕೋವಿಡ್ 19 ಸೋಂಕಿಗೆ ತುತ್ತಾಗಿ ಸಾವನ್ನಪ್ಪಿದ್ದಾರೆ. 36 ವರ್ಷದ ನವೀನ್ ಅವರಿಗೆ ಕೆಲ ದಿನಗಳ ಹಿಂದೆ ಸೋಂಕು ದೃಢವಾಗಿತ್ತು.

Advertisement

ಮಂಡ್ಯ ಮೂಲದ ನವೀನ್ 2011ರಲ್ಲಿ ನಿರ್ದೇಶಕನಾಗಿ ಸ್ಯಾಂಡಲ್ ವುಡ್ ಗೆ ಎಂಟ್ರಿ ನೀಡಿದ್ದರು. ನಟರಾದ ಅಪ್ಪು ವೆಂಕಟೇಶ್ ಮತ್ತು ರೇವಣ್ಣ ಮುಖ್ಯಭೂಮಿಕೆಯಲ್ಲಿದ್ದ ‘ಒನ್ ಡೇ’ ಚಿತ್ರವನ್ನು ನವೀನ್ ನಿರ್ದೇಶನ ಮಾಡಿದ್ದರು.

ಇದನ್ನೂ ಓದಿ:ಆರ್.ಆರ್.ನಗರದ 200 ಸೋಂಕಿತರಿರುವ ಆಸ್ಪತ್ರೆಯಲ್ಲೂ ಆಕ್ಸಿಜನ್ ಸಮಸ್ಯೆ: ಡಿ.ಕೆ.ಸುರೇಶ್

ಸ್ಯಾಂಡಲ್ ವುಡ್ ಗೆ ಕೋವಿಡ್ ತನ್ನ ಕರಾಳ ಛಾಯೆಯನ್ನು ವಿಸ್ತರಿಸಿದೆ. ಕೆಲ ದಿನಗಳ ಹಿಂದಷ್ಟೇ ನಿರ್ಮಾಪಕರಾದ ರಾಜಶೇಖರ್, ಚಂದ್ರಶೇಖರ್ ಅವರೂ ಕೋವಿಡ್ ಸೋಂಕಿನ ಕಾರಣದಿಂದ ಕೊನೆಯುಸಿರೆಳೆದಿದ್ದರು.

ಇದನ್ನೂ ಓದಿ: ಐಪಿಎಲ್ ಗೆ ಕೋವಿಡಾಘಾತ: ಚೆನ್ನೈ ಸೂಪರ್ ಕಿಂಗ್ಸ್ ನ ಇಬ್ಬರಿಗೆ ಕೋವಿಡ್ ಪಾಸಿಟಿವ್

Advertisement
Advertisement

Udayavani is now on Telegram. Click here to join our channel and stay updated with the latest news.

Next