Advertisement

ಕನ್ನಡ ಕಾಯಕಕ್ಕೆ ಮುಂದಾದ ವೈದ್ಯರು, ರೈತರು, ಶಿಕ್ಷಕರು

12:42 PM Dec 29, 2020 | Suhan S |

ಬೆಂಗಳೂರು: ರಾಜ್ಯದಲ್ಲಿ ಕನ್ನಡ ಅನುಷ್ಠಾನದ ಬಗ್ಗೆ ನಿಗಾವಹಿಸಲು ವೈದ್ಯರು, ರೈತರು, ಶಿಕ್ಷಕರು, ಚಾಲಕರು,  ರಂಗ ಕರ್ಮಿಗಳು ಮುಂದೆ ಬಂದಿದ್ದು ಇವರೆಲ್ಲರೂಸ್ವಯಂ ಪ್ರೇರಣೆಯಿಂದ ಕನ್ನಡ ಜಾಗೃತಿ ಮೂಡಿಸುವ ಕೆಲಸ ಮಾಡಲಿದ್ದಾರೆ.

Advertisement

ಕನ್ನಡ ಅಭಿವೃದ್ಧಿ ಪ್ರಾಧಿಕಾರದಕನ್ನಡ ಕಾಯಕ ಪಡೆಯ ಸದಸ್ಯತ್ವಪಡೆದು ಕನ್ನಡ ಉಳಿಸಿ ಬೆಳೆಸುವ ಕೆಲಸದಲ್ಲಿ ಇವರುಜೊತೆಗೂಡಲಿದ್ದಾರೆ. ಈಗಾಗಲೇ 877 ಮಂದಿ ನೋಂದಣಿ ಮಾಡಿಸಿಕೊಂಡಿದ್ದು ಈ ಸಂಖ್ಯೆ ಮತ್ತಷ್ಟುಹೆಚ್ಚುವ ನಿರೀಕ್ಷೆಯಿದೆ. ಹೆಸರು ನೋಂದಾಯಿಸಿಕೊಂಡವರಲ್ಲಿ ಬೆಂಗಳೂರು ನಗರ ಮತ್ತು ಗ್ರಾಮಾಂತರಭಾಗದವರೇ ಅಧಿಕ ಸಂಖ್ಯೆಯಲ್ಲಿದ್ದಾರೆ.

ಈಗಾಗಲೇ ರಾಜ್ಯ ಸರ್ಕಾರ “ಕನ್ನಡ ಕಾಯಕ ವರ್ಷ’ ಘೋಷಿಸಿದೆ. ಅಲ್ಲದೆ ಇದರ ನಿರ್ವಹಣೆಯನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ವಹಿಸಿದೆ. ಹೀಗಾಗಿ ಇದರ ನಿರ್ವಹಣೆ ಜವಾಬ್ದಾರಿ ಹೊತ್ತಿರುವ ಪ್ರಾಧಿಕಾರವು ತನ್ನದೇ ಆದ ರೀತಿಯಲ್ಲಿ ರೂಪುರೇಷೆಗ ‌ಳನ್ನು ಸಿದ್ಧಪಡಿಸಿದೆ. ಇದರಲ್ಲಿ ಕನ್ನಡೇತರರಿಗೆ ಕನ್ನಡ ಕಲಿಸುವ ಯೋಜನೆಗೆ ಆನ್‌ಲೈನ್‌ ವೇದಿಕೆ ಬಳಸಿಕೊಳ್ಳಲಾಗುತ್ತಿದೆ. ಬ್ಯಾಂಕ್‌ ಸೇರಿದಂತೆ ವಿವಿಧ ಕಡೆಗಳಲ್ಲಿ ಕನ್ನಡ ಕಲಿಕೆ ಹಾಗೂ ಸಮುದಾಯದ ವಿವಿಧ ಹಂತಗಳಲ್ಲಿ ಭಾಷೆಯ ಬೆಳವಣಿಗೆಗೆ ಪೂರಕವಾದ 100ಕ್ಕೂ ಅಧಿಕ ಚಟುವಟಿಕೆಗಳನ್ನು ಕಾರ್ಯಗತಗೊಳಿಸಲು ರೂಪುರೇಷೆ ಅಣಿಗೊಳಿಸಿದೆ. ಸರ್ಕಾರವು ಘೋಷಿಸಿರುವ ಕನ್ನಡ ಕಾಯಕ ವರ್ಷದ ಭಾಗವಾಗಿನೋಂದಣಿ ಪ್ರಕ್ರಿಯೆ ನಡೆದಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ : ಸೋಮೇಶ್ವರ : ಆಕಸ್ಮಿಕವಾಗಿ ಸಮುದ್ರಕ್ಕೆ ಜಾರಿಬಿದ್ದ ಮಹಿಳೆಯ ರಕ್ಷಣೆ

ಅಧಿಕ ಸಂಖ್ಯೆಯಲ್ಲಿ ನೋಂದಾಣಿ: ಕನ್ನಡ ಕೆಲಸ ಮಾಡಲು ಅಧಿಕ ಸಂಖ್ಯೆಯಲ್ಲಿ ನಾಡಿನ ವಿವಿಧಜಿಲ್ಲೆಗಳಲ್ಲಿ ಹೆಸರು ನೋಂದಾಯಿಸಿ ಕೊಂಡಿದ್ದಾರೆ. ಅದರಲ್ಲಿ ಬೆಂಗಳೂರು ನಗರ ಮತ್ತುಗ್ರಾಮಾಂತರದಲ್ಲಿ 159 , ಮೈಸೂರಿನಲ್ಲಿ 39 , ಬೆಳಗಾವಿಯಲ್ಲಿ,35 ಬಾಗಲಕೋಟೆಯಲ್ಲಿ 30, ಮಂಡ್ಯದಲ್ಲಿ 27 ಹಾವೇರಿಯಲ್ಲಿ 26, ಹಾಸನದಲ್ಲಿ 23, ಧಾರವಾಡದಲ್ಲಿ 22, ಕೋಲಾರ, ಚಿತ್ರದುರ್ಗದಲ್ಲಿ ತಲಾ 21, ಕಲಬುರ್ಗಿಯಲ್ಲಿ 18,ಚಿಕ್ಕಮಗಳೂರು, ಚಾಮರಾಜನಗರದಲ್ಲಿ ತಲಾ 16 ಮಂದಿ ಕಾಯಕಕ್ಕೆ ಹೆಸರು ನೋಂದಣಿ ಮಾಡಿಕೊಂಡಿದ್ದಾರೆ.

Advertisement

ಈಗಾಗಲೇ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್‌.ನಾಗಾಭರಣ ಅವರು 12 ಜಿಲ್ಲೆಗಳ ಕನ್ನಡ ಕಾಯಕ ಪಡೆಯ ಸದಸ್ಯರುಗಳೊಂದಿಗೆ ಸಭೆ ನಡೆಸಿದ್ದಾರೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ.ಕೆ.ಮುರಳಿಧರ ತಿಳಿಸಿದ್ದಾರೆ.

ಕನ್ನಡ ಕಾಯಕ ಪಡೆಯ ಕಾರ್ಯಗಳೇನು? :

ಪ್ರಯಾಣಿಕರ ಸೇವಾ ಕೇಂದ್ರಗಳಲ್ಲಿರುವ ಎಲ್ಲಾ ರೀತಿಯ ಮನರಂಜನೆಗಳು ಕನ್ನಡದಲ್ಲಿ ಇರಬೇಕು. ಒಂದು ವೇಳೆ ಇಲ್ಲದೆ ಇದ್ದರೆ ಈ ಬಗ್ಗೆ ಸಂಬಂಧ ಪಟ್ಟವರಲ್ಲಿ ಮನವಿ ಮಾಡುವುದು. ಅಂಗಡಿಗಳಲ್ಲಿ ಕನ್ನಡ ಬಳಸುವಂತೆ ಅರಿವು ಮೂಡಿಸುವುದು, ವಿದ್ಯಾರ್ಥಿಗಳಿಗೆ ಪ್ರಬಂಧ ಸೇರಿದಂತೆ ವಿವಿಧ ಸ್ಪರ್ಧೆಗಳ ಆಯೋಜನೆ ಸೇರಿದಂತೆ ವಿವಿಧ ಚಟುವಟಿಕೆಗಳನ್ನುಆಯೋಜಿಸುವುದು. ವಾಹನಗಳಲ್ಲಿ ಕನ್ನಡ ಘೋಷ ವಾಕ್ಯಗಳಿರುವ ಭಿತ್ತಿಚಿತ್ರಗಳನ್ನು ಅಂಟಿಸಲು ಇತರರಲ್ಲಿ ಮನವಿ ಮಾಡುವುದು. ರೈಲ್ವೆ,ಅಂಚೆ, ಆದಾಯ ತೆರಿಗೆ, ವಿಮಾ ಸೇರಿದಂತೆ ಇನ್ನಿತರ ಕಚೇರಿಗಳಲ್ಲಿ ಕನ್ನಡ ನಮೂನೆಗಳನ್ನು ಬಳಲುವಂತೆ ಮನವಿ ಮಾಡುವುದು ಸೇರಿದಂತೆ ಹಲವು ಕಾರ್ಯ ಸೂಚಿಗಳು ಕಾಯಕ ಪಡೆಯ ಸದಸ್ಯರ ಚಟುವಟಿಕೆಯ ಪಟ್ಟಿಯಲ್ಲಿವೆ.

ಇಂದು ಕುವೆಂಪು ಜನ್ಮದಿನ : ಜಿಲ್ಲಾ ಲೀಡ್‌ ಬ್ಯಾಂಕ್‌ಗಳ ಮುಂದೆ ಕನ್ನಡ ಕಾಯಕ ಪಡೆಯ ಸದಸ್ಯರು ಅಭಿಯಾನ ನಡೆಸಲುಯೋಜನೆ ರೂಪಿಸಲಾಗಿದೆ. ಕುವೆಂಪು ಜನ್ಮ ದಿನಾಚರಣೆಯಂದು (ಡಿ.29)ಲೀಡ್‌ ಬ್ಯಾಂಕ್‌ಗಳಮುಂದೆ ಕನ್ನಡದ ಅಭಿಯಾದ ಬಗ್ಗೆ ಜಾಗೃತಿ ಮೂಡಿಸಲು ಸಲುವಾಗಿ ಈಗಾಗಲೇ ಕನ್ನಡ ಅಭಿವೃದ್ಧಿಪ್ರಾಧಿಕಾರದ ಅಧ್ಯಕ್ಷರು ಕಾಯಕ ಪಡೆಯ ಸದಸ್ಯರಿಗೆ ಕೆಲವು ಮಾರ್ಗ ಸೂಚಿ ನೀಡಿದ್ದಾರೆಪ್ರಾಧಿಕಾರದ ಕನ್ನಡ ಕಾಯಕ ಪಡೆಯಲ್ಲಿ ವೈದ್ಯರು, ಎಂಜಿನಿಯರ್‌ಗಳು, ಪೊಲೀಸರು,ಶಿಕ್ಷಕರು, ಚಾಲಕರು, ರೈತರು, ರಂಗಕರ್ಮಿಗಳುಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವವರು ಹೆಸರು ನೋಂದಾಣಿ ಮಾಡಿಕೊಂಡಿರುವುದು ಖುಷಿ ವಿಚಾರ. ಟಿ.ಎಸ್‌.ನಾಗಾಭರಣ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ

 

ದೇವೇಶ ಸೂರಗುಪ್ಪ

Advertisement

Udayavani is now on Telegram. Click here to join our channel and stay updated with the latest news.

Next