Advertisement

ಕನ್ನಡ ವಿರೋಧಿ ಟಿಪ್ಪು ಸುಲ್ತಾನ್‌ ಜಯಂತಿ ಆಚರಣೆ ಅರ್ಥಹೀನ

06:59 PM Nov 08, 2017 | |

ಚಿತ್ರದುರ್ಗ: ಕಂದಾಯ ಇಲಾಖೆಯಲ್ಲಿ ಪ್ರಚಲಿತದಲ್ಲಿರುವ ಪಹಣಿ, ಪಟ್ಟಾ, ಬಗರ್‌ಹುಕುಂ, ಟಿಪ್ಪಣಿ ಇತರೆ ಎಲ್ಲ ಶಬ್ದಗಳು ಕನ್ನಡ ಭಾಷೆಯಿಂದ ಬಂದಿದ್ದಲ್ಲ. ಟಿಪ್ಪು ಕನ್ನಡ ಭಾಷೆಯನ್ನು ಮೂಲೆಗುಂಪು ಮಾಡಿ ಪರ್ಷಿಯನ್‌ ಭಾಷೆಯ ಶಬ್ದಗಳಿಗೆ ಪ್ರಾಶಸ್ತ ನೀಡಿದ್ದ. ಹಾಗಾಗಿ ಕನ್ನಡ ವಿರೋಧಿ ಟಿಪ್ಪುವಿನ ಜಯಂತಿ ಆಚರಿಸುವುದು ಅರ್ಥಹೀನ ಎಂದು ಮೈಸೂರು-ಕೊಡಗು ಕ್ಷೇತ್ರದ ಸಂಸದ ಸಂಸದ ಪ್ರತಾಪ ಸಿಂಹ ತಿಳಿಸಿದರು.

Advertisement

ಇಲ್ಲಿನ ಪತ್ರಕರ್ತರ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರು, ಚಿತ್ರದುರ್ಗ, ದೇವನಹಳ್ಳಿ, ಕೊಡಗು, ಮಂಗಳೂರು ಮತ್ತಿತರ ಹೆಸರುಗಳನ್ನು ಬದಲಾಯಿಸಿ ಪರ್ಷಿಯನ್‌ ಭಾಷೆಯ ಹೆಸರುಗಳನ್ನು ನಾಮಕಾರಣ ಮಾಡಿದ್ದರು. ಇಂತಹ ವ್ಯಕ್ತಿ ಹೇಗೆ ಕನ್ನಡ ನಾಡಿಗೆ ಆದರ್ಶವಾಗಲು ಸಾಧ್ಯ ಎಂದು ಆಕ್ರೋಶ ವ್ಯಕ್ತಪಡಿಸಿದರು. ಹೈದರಾಲಿಯ ಸೈನಿಕರು ಬೆನ್ನಿಗೆ  ಖಡ್ಗದಿಂದ ಇರಿದು ಒನಕೆ ಓಬವ್ವಳನ್ನು ಕೊಂದರು. ಕೋಟೆ ನಿರ್ಮಿಸಿದ ಮದಕರಿ ನಾಯಕರಿಗೆ ವಿಷ ಹಾಕಿ ಕೊಲ್ಲಲಾಯಿತು ಇಂತಹ ಇತಿಹಾಸ ಹೊಂದಿರುವ ಟಿಪ್ಪುವಿನ ಜಯಂತಿ ಆಚರಿಸಿದರೆ ಮಕ್ಕಳ ಮನಸ್ಸಿನ ಮೇಲೆ ಯಾವ ರೀತಿ ಪರಿಣಾಮ ಬೀರಬಹುದು
ಎಂಬುದನ್ನು ಯೋಚಿಸಬೇಕಿದೆ ಎಂದರು.

ನಾವು ಕಳೆದ ಮೂರು ವರ್ಷಗಳಿಂದ ಟಿಪ್ಪು ಜಯಂತಿ ವಿರೋಧಿ ಸುತ್ತ ಬಂದಿದ್ದೇವೆ. ಸೈದ್ಧಾಂತಿಕ ವಿಚಾರ ಪ್ರತಿಪಾದಿಸಿ ಪ್ರತಿಭಟಿಸುತ್ತಿದ್ದೇವೆ. ಕನ್ನಡಕ್ಕೆ ಅಪಮಾನ ಮಾಡಿದ ಟಿಪ್ಪುವಿನ ಜಯಂತಿ ಯಾಕಾದರೂ ಆಚರಿಸಬೇಕು ಎಂಬುದನ್ನು ಇನ್ನಾದರೂ ಅರ್ಥೈಸಿಕೊಳ್ಳಲಿ ಎಂದರು. ಹೈದರಾಲಿ ಮತ್ತು ಟಿಪ್ಪು ಸುಲ್ತಾನ್‌ ಚಿತ್ರದುರ್ಗ ಕೋಟೆ ಮೇಲೆ ದಾಳಿ ಮಾಡಿದ ಇತಿಹಾಸ ಇದೆ. ಮದಕರಿ ನಾಯಕರಿಗೆ ವಿಷ ಹಾಕಿ ಸಾಯಿಸಿದ ಟಿಪ್ಪುವಿನ ಜಯಂತಿ ಆಚರಣೆ ದುರ್ಗದ ಜನರಿಗೆ ಮಾಡುವ ಅಪಮಾನ. ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುತ್ತಿರುವವರು ಯಾರು ಎಂಬುದನ್ನು ಪೊಲೀಸರು ಆತ್ಮಾವಲೋಕನ ಮಾಡಿಕೊಳ್ಳಬೇಕು. ಭಾರತದಲ್ಲಿ ಪಾಕಿಸ್ತಾನದ ಬಾವುಟ ಹಾರಿಸುತ್ತಿರುವವರು ಯಾರು ಎಂಬುದನ್ನು ತಿಳಿಯಬೇಕು ಎಂದರು.

ಸಿಎಂ ಸಿದ್ದರಾಮಯ್ಯನವರಿಗೆ ಸಮಾಜದ ಋಣ ತೀರಿಸುವ ಉದ್ದೇಶವಿದ್ದರೆ ಮೈಸೂರು ವಂಶಸ್ಥರ ಜಯಂತಿ ಆಚರಿಸಲಿ. ಇಡೀ ದೇಶದಲ್ಲಿ ಮೊದಲು ಮೀಸಲಾತಿ ಕೊಟ್ಟಿದ್ದು ಮೈಸೂರು ಮಹಾರಾಜರು.  ಕೆಆರ್‌ಎಸ್‌, ಮೈಸೂರು ವಿವಿ, ಮೈಸೂರು ಬ್ಯಾಂಕ್‌, ಟಾಟಾ ಸಂಸ್ಥೆ, ಉಕ್ಕು ಕಾರ್ಖಾನೆ, ಹಲವು ಆಣೆಕಟ್ಟೆಗಳನ್ನು ನಾಡಿಗೆ ನೀಡಿದ ಮೈಸೂರು ವಂಶಸ್ಥರನ್ನು ಸಿಎಂ ಮರೆತಿದ್ದಾರೆ.  ಪ್ರತಾಪ ಸಿಂಹ, ಮೈಸೂರು-ಕೊಡಗು ಕ್ಷೇತ್ರದ ಸಂಸದರು.

Advertisement

Udayavani is now on Telegram. Click here to join our channel and stay updated with the latest news.

Next