Advertisement

ಇಂದು ಹುಟ್ಟುಹಬ್ಬದ ಸಂಭ್ರಮ: ಉದಯವಾಣಿ ಜೊತೆ ಚಂದನವನದ ಸುಧಾ’ರಾಣಿ’ ಮಾತುಕತೆ   

12:08 PM Aug 14, 2021 | Team Udayavani |

ಬೆಂಗಳೂರು: ಕನ್ನಡ ಚಿತ್ರರಂಗದ ‘ರಾಣಿ’ ಯಂತಿರುವ ಸ್ನಿಗ್ದ ಸುಂದರಿ ಸುಧಾರಾಣಿಯವರಿಗೆ ಇಂದು (ಆಗಸ್ಟ್ 14)ಹುಟ್ಟು ಹಬ್ಬದ ಸಂಭ್ರಮ. ನವವಸಂತಕ್ಕೆ ಕಾಲಿಡುತ್ತಿರುವ ಈ ಹಿರಿಯ ನಟಿಗೆ ಸ್ನೇಹಿತರು, ಅಭಿಮಾನಿಗಳು ಪ್ರೀತಿಯಿಂದ ಜನುಮ ದಿನದ ಶುಭ ಕೋರುತ್ತಿದ್ದಾರೆ.

Advertisement

ಬಾಲನಟಿಯಾಗಿ ಬಣ್ಣದ ಲೋಕಕ್ಕೆ ಕಾಲಿಟ್ಟ ಸುಧಾರಾಣಿಯವರು ಇಂದು ಪೋಷಕ ನಟಿಯಾಗಿಯೂ ಅಭಿನಯಿಸುತ್ತಿದ್ದಾರೆ. ಅಂದಿನಿಂದ ಇಂದಿನವರೆಗೆ ಅವರ ಸಿನಿ ಪಯಣ ಹೇಗಿತ್ತು? ಸೇರಿದಂತೆ ಸಾಕಷ್ಟು ವಿಚಾರಗಳನ್ನು ‘ಉದಯವಾಣಿ’ಯ ತೆರೆದಿದೆ ಮನೆ ಬಾ ಅತಿಥಿ ಫೇಸ್ ಬುಕ್ ಲೈವ್ ಕಾರ್ಯಕ್ರಮದಲ್ಲಿ ಮನಬಿಚ್ಚಿ ಮಾತನಾಡಿದ್ದರು. ಮಾತುಕತೆಯ ಆಯ್ದ ತುಣುಕು ಇಲ್ಲಿದೆ…

ಅವರೇ ಹೇಳಿಕೊಂಡಿರುವಂತೆ ಸುಧಾರಾಣಿಯವರದು ಸಂಪ್ರದಾಯಸ್ಥ ಕುಟುಂಬ. ಅವರ ಮನೆಯಿಂದ ಯಾರೂ ಕೂಡ ಸಿನಿಮಾರಂಗಕ್ಕೆ ಕಾಲಿಟ್ಟರಲಿಲ್ಲ. ಬಾಲ್ಯದಲ್ಲಿ ಜಾಹೀರಾತುವೊಂದರಲ್ಲಿ ತನ್ನ ಅಣ್ಣನ ಜೊತೆ ಬಣ್ಣ ಹಚ್ಚಿದ ಇವರಿಗೆ ಬಣ್ಣದ ನಂಟು ಹೀಗೆ ಮುಂದುವರೆಯುತ್ತಾ ಹೋಗುತ್ತದೆ. ನಂತರ ಬಾಲನಟಿಯಾಗಿ ಅಭಿನಯಿಸಿ, ಶಿವರಾಜ್ ಕುಮಾರ್ ಅವರ ‘ಆನಂದ್’ ಸಿನಿಮಾಗಳ ಮೂಲಕ ಫುಲ್ ಪ್ಲೆಡ್ಜ್ ಆಗಿ ಕನ್ನಡ ಚಿತ್ರರಂಗಕ್ಕೆ ಪರಿಚಯವಾಗಿದ್ದು ಕನ್ನಡ ಸಿನಿ ರಸಿಕರಿಗೆ ಗೊತ್ತಿರುವ ವಿಚಾರ.

Advertisement

‘ಆನಂದ್’ ಸಿನಿಮಾದ ಮೂಲಕ ಚಂದನವನದಲ್ಲಿ ‘ಸುಂದರ’ ರಾಣಿ ಎಂದೇ ಫೇಮಸ್ ಆದ ಸುಧಾರಾಣಿಯವರು ಪರಭಾಷೆ ಸಿನಿಮಾಗಳಲ್ಲಿಯೂ ಛಾಪು ಮೂಡಿಸುತ್ತಾರೆ. ಆದರೆ, ನಮ್ಮ ಭಾಷೆಯೇ ನಮಗೆ ಮೇಲು ಎಂದು ಹೆಚ್ಚು ಹೆಚ್ಚು ಕನ್ನಡ ಸಿನಿಮಾಗಳಲ್ಲಿ ಅಭಿನಯಿಸುತ್ತಾರೆ. ಇವರ ಕಲಾತ್ಮಕ ಅಭಿನಯಕ್ಕೆ ಎರಡು ಬಾರಿ ರಾಜ್ಯ ಪ್ರಶಸ್ತಿ ಒಲಿದು ಬಂದಿದೆ. ಆದರೆ, ಮೂರನೇ ಬಾರಿ ಪ್ರಶಸ್ತಿ ಅಧಿಕೃತವಾಗಿ ಘೋಷಣೆಯಾಗುತ್ತದೆ, ಫೋನ್ ಕರೆ ಮೂಲಕವು ಪ್ರಶಸ್ತಿ ಆಯ್ಕೆ ತಂಡ ಅಭಿನಂದಿಸುತ್ತದೆ. ಆದರೆ, ಮರು ದಿನ ಪತ್ರಿಕೆಗಳಲ್ಲಿ ಇವರ ಹೆಸರಿಗೆ ಬದಲಿಗೆ ಬೇರೆ ನಟಿಗೆ ಪ್ರಶಸ್ತಿ ಘೋಷಣೆಯಾಗಿರುತ್ತದೆ. ಇದನ್ನು ನೆನಪಿಸಿಕೊಳ್ಳುವ ಸುಧಾರಾಣಿ, ಪ್ರಶಸ್ತಿ ಕೈ ತಪ್ಪಿದ್ದಕ್ಕೆ ಬೇರೆ ಕಾರಣಗಳು ಇವೆ. ಈ ಬಗ್ಗೆ ಎಲ್ಲಿಯೂ ನಾ ಮಾತಾಡಿಲ್ಲ ಎನ್ನುತ್ತಾರೆ.ಮತ್ತೊಂದು ಮೈಸೂರು ಮಲ್ಲಿಗೆಗೆ ರಾಷ್ಟ್ರಪ್ರಶಸ್ತಿ ಬರಬೇಕಾಗಿತ್ತು. ಅದು ತಪ್ಪಿ ಹೋಗಿದ್ದು ತುಂಬಾ ಬೇಸರದ ಸಂಗತಿಯಾಗಿದೆ ನನಗೆ ಎಂದು ಮನದಾಳದ ನೋವನ್ನು ಬಿಚ್ಚಿಟ್ಟಿದ್ದರು.

ಸುಧಾರಾಣಿಯವರಿಗೆ ಶ್ರೀನಿವಾಸ್ ಕಲ್ಯಾಣ ಚಿತ್ರದಲ್ಲಿಯ ‘ಪವಡಿಸು ಪರಮಾತ್ಮ’ ಗೀತೆ ಅಚ್ಚುಮೆಚ್ಚು. ತಮಗೆ ಬೇಕೆನಿಸಿದಾಗ ಈ ಹಾಡು ಕೇಳುತ್ತಾರೆ. ಅದರ ಜೊತೆಗೆ ಮೈಸೂರು ಮಲ್ಲಿಗೆ ಸಿನಿಮಾದ ‘ಹಕ್ಕಿಯ ಹಾಡಿಗೆ ತಲೆದೂಗುವ’ ಹಾಡು ಕೂಡ ಇಷ್ಟವಂತೆ.

ಚಿತ್ರರಂಗವೇ ನನ್ನ ಪ್ರಪಂಚ, ಅಭಿನಯ ಬಿಟ್ಟು ನನಗೆ ಏನೂ ಗೊತ್ತಿಲ್ಲ ಎನ್ನುವ ಸುಧಾರಾಣಿಯವರು, ಇದೆ ರಂಗದಲ್ಲಿ ಮುಂದುವರೆಯುವುದಾಗಿ ಹೇಳುತ್ತಾರೆ. ಒಳ್ಳೆಯ ಪಾತ್ರಗಳು ಸಿಕ್ಕರೆ ತುಂಬಾ ಖುಷಿ ಎನ್ನುತ್ತಾರೆ. ಪುಸ್ತಕ ಓದುವುದು ಈ ನಟಿಗೆ ತುಂಬ ಇಷ್ಟವಂತೆ. ಒಟ್ಟೊಟ್ಟಿಗೆ ಮೂರು-ನಾಲ್ಕು ಪುಸ್ತಕಗಳನ್ನು ರಾಶಿ ಹಾಕಿಕೊಂಡು ಓದುತ್ತಾರಂತೆ.

ಇನ್ನು ನಟಿ ಶೃತಿ ಹಾಗೂ ತಾರಾ ಅನುರಾಧ ಜೊತೆಗಿನ ತಮ್ಮ ಗೆಳೆತನವನ್ನು ಮೆಲುಕು ಹಾಕಿರುವ ಅವರು, ನಾವು ಹೆಚ್ಚು ಕಡಿಮೆ ಒಂದೇ ಸಮಯದಲ್ಲಿ ಚಿತ್ರರಂಗಕ್ಕೆ ಬಂದವರು. ನಾವು ಕ್ಯಾಮರಾ ಮುಂದಷ್ಟೆ ಪೈಪೋಟಿ ಮಾಡುತ್ತಿದ್ದೇವು. ಆಫ್ ದಿ ಸ್ಕ್ರೀನ್ ನಾವು ಒಳ್ಳೆಯ ಸ್ನೇಹಿತರು. ಇಂದಿಗೂ ಕೂಡ ನಾವು ಹಾಗೆ ಇದ್ದೇವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next