Advertisement

ಒಂದೇ ತಿಂಗಳು ಎರಡು ಸಿನಿಮಾ ರಿಲೀಸ್‌ : ಅಕ್ಟೋಬರ್‌ ನಿರೀಕ್ಷೆಯಲ್ಲಿ ಭಾವನಾ

08:51 AM Oct 04, 2021 | Team Udayavani |

ಸಾಮಾನ್ಯವಾಗಿ ಹೀರೋಯಿನ್‌ಗಳು ಮದುವೆಯಾದ ಬಳಿಕ ಅವರಿಗೆ ಚಿತ್ರರಂಗದಲ್ಲಿ ಅವಕಾಶಗಳು ಕಡಿಮೆಯಾಗುತ್ತದೆ. ನಿಧಾನವಾಗಿ ಬೇಡಿಕೆ ಕಳೆದುಕೊಳ್ಳುತ್ತಾರೆ ಅನ್ನೋದು ಬಹುತೇಕ ಪ್ರೇಕ್ಷಕರ ಅಭಿಪ್ರಾಯ. ಆದರೆ ಈ ಮಾತಿಗೆ ಅಪವಾದವೆಂಬಂತೆ, ಕೆಲವು ಹೀರೋಯಿನ್ಸ್‌ ಮದುವೆಯಾದ ಬಳಿಕವೂ, ಎಂದಿನಂತೆ ತಮ್ಮ ಬೇಡಿಕೆಯನ್ನು ಉಳಿಸಿಕೊಂಡು ಬ್ಯಾಕ್‌ ಟು ಬ್ಯಾಕ್‌ ಸಿನಿಮಾಗಳ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಲೇ ಇರುತ್ತಾರೆ.

Advertisement

ಹೊಸ ಥರದ ಪಾತ್ರಗಳಿಗೆ ತೆರೆದುಕೊಂಡು ಚಿತ್ರರಂಗದಲ್ಲಿ ಸಕ್ರಿಯರಾಗಿರುತ್ತಾರೆ. ಅಂತಹ ಹೀರೋಯಿನ್ಸ್‌ ಪೈಕಿ ಭಾವನಾ ಮೆನನ್‌ ಕೂಡ ಒಬ್ಬರು. ಕನ್ನಡ ಚಿತ್ರರಂಗದಲ್ಲಿ ಜಾಕಿ ಭಾವನಾ ಅಂತಲೇ ಜನಪ್ರಿಯವಾಗಿರುವ ಮಲೆಯಾಳಿ ಚೆಲುವೆ ಭಾವನಾ, ಬಹುತೇಕರಿಗೆ ಗೊತ್ತಿರುವಂತೆ ಈಗ ಕರ್ನಾಟಕದ ಸೊಸೆ. ಮದುವೆಯಾದ ಬಳಿಕ ಭಾವನಾ ಕೂಡ ಇತರ ನಾಯಕ ನಟಿಯರಂತೆ ಬಣ್ಣದ ಲೋಕದಿಂದ ದೂರಸರಿಯಬಹುದು ಎಂದು ಕೆಲವರು ಅಂದುಕೊಂಡಿರುವಾಗಲೇ ಭಾವನಾ, ಹೊಸಥರದ ಪಾತ್ರಗಳ ಮೂಲಕ ಹೀರೋಯಿನ್‌ ಆಗಿ ಸೆಕೆಂಡ್ಸ್‌ ಇನ್ನಿಂಗ್ಸ್‌ ಶುರು ಮಾಡಿದ್ದಾರೆ.

ಮದುವೆಯಾದ ಬಳಿಕ ಭಾವನಾ ಅಭಿನಯಿಸಿದ್ದ “ಇನ್ಸ್‌ಪೆಕ್ಟರ್‌ ವಿಕ್ರಂ’ ಚಿತ್ರ ಇದೇ ವರ್ಷದ ಆರಂಭದಲ್ಲಿ ತೆರೆಗೆ ಬಂದಿತ್ತು. ಎಲ್ಲ ಅಂದುಕೊಂಡಂತೆ ನಡೆದರೆ, ಈ ವರ್ಷಾಂತ್ಯದ ಒಳಗೆ ಭಾವನಾ ಅಭಿನಯಿಸಿರುವ ಇನ್ನೂ ಮೂರು ಸಿನಿಮಾಗಳು ತೆರೆಗೆ ಬರುವ ಸಾಧ್ಯತೆ ಇದೆ. ಅದ ರಲ್ಲೂ ಅಕ್ಟೋ ಬರ್‌ನಲ್ಲೇ ಭಾವನಾ ನಟ ನೆಯ ಎರಡು ಚಿತ್ರ ಗಳು ತೆರೆ ಕಾಣಲಿವೆ.

ಹೌದು, ಈಗಾಗಲೇ ಶಿವರಾಜಕುಮಾರ್‌ ನಾಯಕನಾಗಿರುವ “ಭಜರಂಗಿ-2′ ಚಿತ್ರದಲ್ಲಿ ಭಾವನಾ ನಾಯಕಿಯಾಗಿ ಅಭಿನಯಿಸಿದ್ದಾರೆ. ಸದ್ಯ “ಭಜರಂಗಿ-2′ ಚಿತ್ರದ ಪ್ರಚಾರ ಕಾರ್ಯಗಳು ಭರ್ಜರಿಯಾಗಿ ನಡೆಯುತ್ತಿದ್ದು, ಇದೇ ಅಕ್ಟೋಬರ್‌ 28ಕ್ಕೆ ಚಿತ್ರ ತೆರೆ ಕಾಣುತ್ತಿದೆ. ಇದರ ನಡುವೆಯೇ ಡಾರ್ಲಿಂಗ್‌ ಕೃಷ್ಣ ನಾಯಕನಾಗಿರುವ “ಶ್ರೀಕೃಷ್ಣ ಜಿಮೇಲ್‌ ಡಾಟ್‌ ಕಾಂ’ ಚಿತ್ರದಲ್ಲೂ ಭಾವನಾ ನಾಯಕಿಯಾಗಿ ಅಭಿನಯಿಸಿದ್ದು, ಈ ಚಿತ್ರ ಕೂಡ ಇದೇ ಅಕ್ಟೋಬರ್‌ 15ಕ್ಕೆ ತೆರೆಗೆ ಬರುವ ತಯಾರಿಯಲ್ಲಿದೆ.

ಈ ಎರಡೂ ಚಿತ್ರಗಳೂ ಈಗಾಗಲೇ ತಮ್ಮ ಬಿಡುಗಡೆಯ ದಿನಾಂಕವನ್ನು ಅಧಿಕೃತವಾಗಿ ಅನೌನ್ಸ್‌ ಮಾಡಿರುವುದರಿಂದ, ಅಕ್ಟೋಬರ್‌ ತಿಂಗಳಲ್ಲಿ ಬ್ಯಾಕ್‌ ಟು ಬ್ಯಾಕ್‌ ಎರಡು ಚಿತ್ರಗಳ ಮೂಲಕ ಭಾವನಾ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಇನ್ನು ಸುಮಂತ್‌ ಶೈಲೇಂದ್ರ, ರೂಪೇಶ್‌ ಶೆಟ್ಟಿ ಅಭಿನಯದ “ಗೋವಿಂದ ಗೋವಿಂದ’ ಚಿತ್ರದಲ್ಲೂ ಭಾವನಾ ನಾಯಕಿಯಾಗಿ ಅಭಿನಯಿಸಿದ್ದಾರೆ.

Advertisement

ಈ ಚಿತ್ರ ಕೂಡ ಬಿಡುಗಡೆಗೆ ಸಿದ್ಧವಾಗಿದ್ದು, ಈ ಚಿತ್ರ ಕೂಡ ಇದೇ ವರ್ಷದ ಕೊನೆಯೊಳಗೆ ತೆರೆಗೆ ಬರಬಹುದು ಎಂಬ ನಿರೀಕ್ಷೆ ಇದೆ. ಒಟ್ಟಾರೆ ಒಂದರ ಹಿಂದೊಂದು ಸಿನಿಮಾಗಳ ಮೂಲಕ ಬೇರೆ ಬೇರೆ ಪಾತ್ರಗಳಲ್ಲಿ ಪ್ರೇಕ್ಷಕರ ಮುಂದೆ ಬರುತ್ತಿರುವ ಭಾವನಾ ಎಷ್ಟರ ಮಟ್ಟಿಗೆ ಮತ್ತೂಮ್ಮೆ ಪ್ರೇಕ್ಷಕರ ಗಮನ ಸೆಳೆಯುತ್ತಾರೆ ಅನ್ನೋದು ಇನ್ನಷ್ಟೇ ಗೊತ್ತಾಗಬೇಕಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

More
Next