Advertisement

ಉತ್ತರ ಕರ್ನಾಟಕ ಪ್ರವಾಹ ಪೀಡಿತರ ನೆರವಿಗೆ ಧಾವಿಸೋಣ : ಶಿವಣ್ಣ ಕರೆ

10:08 AM Aug 10, 2019 | Hari Prasad |

ಬೆಂಗಳೂರು: ಉತ್ತರ ಕರ್ನಾಟಕದ ಬಹುಭಾಗ ಭೀಕರ ನೆರೆಗೆ ತತ್ತರಿಸುತ್ತಿದೆ. ಅಲ್ಲಿನ ಜನರಲ್ಲಿ ಕ್ಷಣಕ್ಷಣವೂ ಆತಂಕ ಹೆಚ್ಚಾಗುತ್ತಿದೆ. ಇಂತಹ ಸಂದರ್ಭದಲ್ಲಿ ಸಮಸ್ತ ಕರ್ನಾಟಕವೇ ಉತ್ತರ ಕರ್ನಾಟಕದ ಸಂಕಷ್ಟಕ್ಕೆ ಬೆಂಬಲವಾಗಿ ನಿಲ್ಲುತ್ತಿದೆ.

Advertisement

ಇದಕ್ಕೆ ಪೂರಕವಾಗಿ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅವರೂ ಸಹ ಉತ್ತರ ಕರ್ನಾಟಕದ ಜನತೆಯ ಸಂಕಷ್ಟಕ್ಕೆ ಸ್ಪಂದಿಸುವ ಮಾತುಗಳನ್ನಾಡಿದ್ದಾರೆ.

‘ಉತ್ತರ ಕರ್ನಾಟಕದ ಜನ ಭಾವನಾತ್ಮಕವಾಗಿ ನನ್ನನ್ನು ತುಂಬಾ ಪ್ರೀತಿಸುತ್ತಾರೆ. ಚಿತ್ರರಂಗದ ಮೇಲೆ ಅವರು ಇಟ್ಟಿರುವ ಅಭಿಮಾನ ದೊಡ್ಡದು. ಅಭಿಮಾನಿ ದೇವರುಗಳೇ ಇವತ್ತು ಕಷ್ಟದಲ್ಲಿದ್ದಾರೆ. ದೇವರಿಗೆ ಕಷ್ಟ ಬಂದಾಗ ನಾವು ಸುಮ್ಮನಿರಲಾಗುವುದಿಲ್ಲ. ನಾನು ನಿಮ್ಮ ಜೊತೆ ಇದ್ದೇನೆ, ನಾನು ಮಾತ್ರವಲ್ಲ ಇಡೀ ಚಿತ್ರರಂಗವೇ ನಿಮ್ಮ ಜೊತೆಗಿರುತ್ತದೆ ಎಂಬ ಭರವಸೆಯನ್ನು ನಾನು ನೀಡುತ್ತೇನೆ. ಧೈರ್ಯ ಕಳೆದುಕೊಳ್ಳದಿರಿ’ ಎಂಬ ಮಾತುಗಳನ್ನು ಶಿವಣ್ಣ ಅವರು ಆಡಿದ್ದಾರೆ.

ಮಾತ್ರವಲ್ಲದೆ, ತಾನು ಚಿಕಿತ್ಸೆಗಾಗಿ ಲಂಡನ್ ಗೆ ಹೋಗಿದ್ದ ಕಾರಣ ಈ ವಿಚಾರಕ್ಕೆ ಪ್ರತಿಕ್ರಿಯಿಸಲು ಸ್ವಲ್ಪ ತಡವಾಗಿದ್ದಕ್ಕೆ ಅಭಿಮಾನಿಗಳ ಕ್ಷಮೆಯನ್ನೂ ಅವರು ಕೋರಿದ್ದಾರೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next