Advertisement

ಕಂಕನಾಡಿ ನೂತನ ಮಾರುಕಟ್ಟೆ ರಚನೆ: ಪರಿಶೀಲನೆ

11:07 PM May 08, 2019 | Sriram |

ಮಹಾನಗರ: ಕಂಕನಾಡಿಯಲ್ಲಿ ನೂತನವಾಗಿ ಮಾರುಕಟ್ಟೆ ನಿರ್ಮಾಣ ಕಾಮಗಾರಿ ಶೀಘ್ರದಲ್ಲಿ ಪ್ರಾರಂಭಗೊಳ್ಳಲಿದ್ದು, ಅಧಿಕಾರಿಗಳು ಕಾಮಗಾರಿ ಪರಿಶೀಲಿಸದರು.

Advertisement

ಮಾರುಕಟ್ಟೆಯಲ್ಲಿ ಕಾರ್ಯನಿರ್ವಹಿ ಸುತ್ತಿರುವ ವರ್ತಕರಿಗೆ, ಸಾರ್ವಜನಿಕರಿಗೆ ಎಲ್ಲ ಸೌಲಭ್ಯಗಳನ್ನು ನೂತನ ವಿನ್ಯಾಸದಲ್ಲಿ ಜೋಡಣೆ ಮಾಡಬೇಕೆಂಬ ಸಾರ್ವ ಜನಿಕರ ಮನವಿಯನ್ನು ಪರಿಗಣಿಸಿ ಸಿಎಂ ಸಂಸದೀಯ ಕಾರ್ಯದರ್ಶಿ ಐವನ್‌ ಡಿ’ಸೋಜಾ ಅವರು ಪಾಲಿಕೆ ಆಯುಕ್ತ ನಾರಾಯಣಪ್ಪ, ಎಕ್ಸಿಕ್ಯೂಟಿವ್‌ ಎಂಜಿನಿ ಯರ್‌ ನಿಂಗೇಗೌಡ, ಜೂನಿಯರ್‌ ಎಂಜಿನಿಯರ್‌ ಗಣಪತಿ, ಇತರ ಅಧಿ ಕಾರಿಗಳೊಂದಿಗೆ ಭೇಟಿ ನೀಡಿ ನೂತನ ವಿನ್ಯಾಸವನ್ನು ಪರಿಶೀಲಿಸಿದರು.

ಉಪಸ್ಥಿತರಿದ್ದ ರಿಕ್ಷಾ ಮತ್ತು ಕಾರು ಚಾಲಕ ಸಂಘಟನೆಗಳು ನೂತನ ವ್ಯವಸ್ಥೆಯಲ್ಲಿ ರಿಕ್ಷಾ ಮತ್ತು ಕಾರುಗಳ ಪಾರ್ಕ್‌ಗೆ ಅನುಮತಿ ಒದಗಿಸಬೇಕೆಂಬ ಬೇಡಿಕೆಯನ್ನು ಈಗಾಗಲೇ ನಕ್ಷೆಯಲ್ಲಿ ಅಳವಡಿಸಲಾಗಿದ್ದು, ಬಸ್‌ ನಿಲ್ದಾಣಕ್ಕೂ ಅವಕಾಶ ನೀಡಬೇಕೆಂಬ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಯಿತು. ಬಸ್‌ ನಿಲ್ದಾಣಕ್ಕೆ ಪಂಪ್‌ವೆಲ್‌ನಲ್ಲಿ ವ್ಯವಸ್ಥೆ ಮಾಡಲಾಗಿದ್ದು, ಮಾರುಕಟ್ಟೆ ಪ್ರದೇ ಶದಲ್ಲಿ ಬಸ್‌ ನಿಲ್ದಾಣಕ್ಕೆ ಅವಕಾಶ ಕಲ್ಪಿಸುವ ಯಾವುದೇ ಒತ್ತಡವನ್ನು ಪರಿಗಣಿಸ ಬಾರದೆಂದು ಐವನ್‌ ಡಿ’ಸೋಜಾ ಅವರು ಅಧಿಕಾರಿಗಳಿಗೆ ತಿಳಿಸಿದರು.

ಕ್ಯಾಬ್‌ ಯೂನಿಯನ್‌ ಅಧ್ಯಕ್ಷ ದಿನೇಶ್‌ ಕುಂಪಲ, ಶೇಖರ್‌ ದೇರಳಕಟ್ಟೆ, ಮಾಜಿ ಕಾರ್ಪೊರೇಟರ್‌ ನಾಗೇಂದ್ರ ಕುಮಾರ್‌, ಸುರೇಶ್‌ ಶೆಟ್ಟಿ ಜಪ್ಪಿನಮೊಗರು, ನವೀನ್‌ ದೇವಾಡಿಗ, ಗೋಪಾಲ್‌ ಕೃಷ್ಣ, ಖಾದರ್‌, ಹಮೀದ್‌, ರಾಜೇಶ್‌ ವೀರನಗರ, ಗಣೇಶ್‌ ಉಳ್ಳಾಲ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next