Advertisement
ಬಂಟ್ವಾಳ ತಾಲೂಕಿನ ವಿಟ್ಲಮುಟ್ನೂರು ಗ್ರಾಮದ ಕುಂಡಡ್ಕ-ಸಾಂತ್ಯಡ್ಕ ನಿವಾಸಿ ಚೋಮ ನಾಯ್ಕ ಅವರ ಪುತ್ರ ಧನುಷ್ (26) ಮತ್ತು ವಿಟ್ಲ ಕನ್ಯಾನ ಕೊಣಲೆ ನಿವಾಸಿ ತನಿಯಪ್ಪ ನಾಯ್ಕ ಅವರ ಪುತ್ರ ಧನು ಯಾನೇ ಧನಂಜಯ (21) ಮೃತಪಟ್ಟವರು.
ಯುವಕರಿಬ್ಬರು ಶನಿವಾರ ತಡರಾತ್ರಿ ಸಾಗುತ್ತಿದ್ದ ಕಾರು ಬೈತಡ್ಕದಲ್ಲಿ ನಿಯಂತ್ರಣ ತಪ್ಪಿ ಸೇತುವೆಯ ತಡೆಬೇಲಿಗೆ ಢಿಕ್ಕಿ ಹೊಡೆದು ತುಂಬಿ ಹರಿಯುತ್ತಿರುವ ಗೌರಿ ಹೊಳೆಗೆ ಬಿದ್ದಿತ್ತು. ಈ ದೃಶ್ಯ ಸಮೀಪದ ಮಸೀದಿಯ ಸಿಸಿ ಕೆಮರಾದಲ್ಲಿ ದಾಖಲಾಗಿದ್ದು ರವಿವಾರ ಮುಂಜಾವ ಘಟನೆ ಬೆಳಕಿಗೆ ಬಂದಿತ್ತು.
Related Articles
Advertisement
ಈ ನಡುವೆ ಸೇತುವೆಯಿಂದ 200 ಮೀಟರ್ ಕೆಳಗೆ ಮರಕ್ಕಡ ಜೇಡರಕೇರಿಯಲ್ಲಿ ಒಂದು ಮೃತದೇಹ ಇರುವುದು ಸ್ಥಳೀಯ ದಿನೇಶ್ ಅವರ ಗಮನಕ್ಕೆ ಬಂದಿತು. ಈಜುಗಾರರಾದ ಜಯಂತ್ ಅನವುಮೂಲೆ, ಕೇಶವ ಗೌಡ ಬೈತಡ್ಕ, ಗುತ್ತಿಗಾರಿನ ವಿಪತ್ತು ನಿರ್ವಹಣ ತಂಡದ ಸದಸ್ಯರು ಮೃತದೇಹವನ್ನು ಹಗ್ಗಕಟ್ಟಿ ಮೇಲೆತ್ತಿದರು.
ಸ್ವಲ್ಪ ಸಮಯದಲ್ಲೇ ಅಲ್ಲಿಂದ 10 ಮೀ. ಕೆಳಗೆ ಮತ್ತೂಂದು ದೇಹವೂ ಪತ್ತೆಯಾಗಿದ್ದು, ಮರಣೋತ್ತರ ಪರೀಕ್ಷೆ ಗಾಗಿ ಪುತ್ತೂರಿಗೆ ಸಾಗಿಸಲಾಯಿತು. ಮೃತರ ಸಂಬಂಧಿ ಗುತ್ತಿಗಾರಿನ ಮನೋಜ್ ನೀಡಿದ ದೂರಿನಂತೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಡಬ ತಹಶೀಲ್ದಾರ್ ಅನಂತ ಶಂಕರ್, ಕಂದಾಯ ನಿರೀಕ್ಷಕ ಅವಿನ್ ರಂಗತ್ತಮಲೆ, ಬೆಳ್ಳಾರೆ ಠಾಣಾಧಿಕಾರಿ ರುಕ್ಮ ನಾಯ್ಕ…, ಬಿಜೆಪಿ ಬೆಳಂದೂರು ಶಕ್ತಿಕೇಂದ್ರದ ಅಧ್ಯಕ್ಷ ಗಣೇಶ್ ಉದನಡ್ಕ, ಬೆಳಂದೂರು ಗ್ರಾ.ಪಂ. ಅಧ್ಯಕ್ಷ ಲೋಹಿತಾಕ್ಷ ಕೆಡೆಂಜಿಕಟ್ಟ, ಸದಸ್ಯ ಮೋಹನ್ ಅಗಳಿ ಉಪಸ್ಥಿತರಿದ್ದರು.ಕಾರು ಹೊಳೆಗೆ ಬಿದ್ದ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಹತ್ತು ಹಲವು ಸಂಶಯ ಊಹಾಪೋಹಗಳು ಎದ್ದಿದ್ದವು. ಸಾಮಾಜಿಕ ಜಾಲ ತಾಣಗಳಲ್ಲಿ ತರಹೇವಾರಿ ಸುದ್ದಿಗಳು ಹರಿದಾಡುತ್ತಿದ್ದವು. ಕಾರು ಮಾತ್ರ ಬಿದ್ದಿದೆ ಯುವಕರಿಬ್ಬರು ಪರಾರಿಯಾಗಿ¨ªಾರೆ ಎನ್ನುವ ಮಾತುಗಳು ಕೇಳಿ ಬಂದಿತ್ತು. ಕಾರಿನಲ್ಲಿ ಬಂದ ಯುವಕರು ಸವಣೂರು ಚೆಕ್ ಪೋಸ್ಟಿನಲ್ಲಿ ಪೊಲೀಸರಿಗೆ ಸುಳ್ಳು ಮಾಹಿತಿ ನೀಡಿ ನಾವು ಸುಳ್ಯದ ಗುತ್ತಿಗಾರಿಗೆ ಹೋಗುವುದಾಗಿ ಹೇಳಿ ಬಂದಿದ್ದರು. ರಾತ್ರಿ 11.30ರ ವೇಳೆಗೆ ಸವಣೂರು ಮೂಲಕ ಬಂದಿದ್ದ ಯುವಕರು 11.50ರ ವೇಳೆಗೆ ಸಂಬಂಧಿಕರಿಗೆ ಕರೆ ಮಾಡಿ ನಾವು ಉಡುಪಿಯ ಆಲಂಗಾರಿನಲ್ಲಿದ್ದೇವೆ. ನಮ್ಮ ಕಾರಿಗೆ ಲಾರಿಯೊಂದು ಢಿಕ್ಕಿಯಾಗಿ ಬದುಕುಳಿದಿದ್ದೇವೆ ಎಂದು ಸುಳ್ಳು ಹೇಳಿದ್ದರು. ಬಳಿಕ 12.03ಕ್ಕೆ ಕಾರು ಸೇತುವೆಯಿಂದ ಕೆಳಗೆ ಬಿದ್ದಿದೆ. ಈ ಎಲ್ಲ ಕಾರಣಗಳಿಂದ ಕಾರು ಹೊಳೆಗೆ ಬಿದ್ದ ಬಳಿಕ ಅದರಲ್ಲಿದ್ದವರು ಪರಾರಿಯಾಗಿ¨ªಾರೆಯೇ ಎಂಬುದಾಗಿಯೂ ತರ್ಕಿಸಲಾಗಿತ್ತು. ಇನ್ನೊಂದೆಡೆ ಮೂವರು ಕಾರಿನಲ್ಲಿದ್ದು ಅವರು ನೀರು ಪಾಲಾಗಿ¨ªಾರೆ ಎನ್ನುವ ಸುದ್ದಿ ಹಬ್ಬಿತ್ತು. ಈ ಮಧ್ಯೆ ಮೃತರ ಪೈಕಿ ಓರ್ವನ ಮೇಲೆ ಅತ್ಯಾಚಾರ ಪ್ರಕರಣವಿದ್ದು, ಆದ್ದರಿಂದ ಕಾರನ್ನು ಹೊಳೆಗೆ ದೂಡಿ ಹಾಕಿ ತಲೆಮರೆಸಿಕೊಂಡಿ¨ªಾರೆ ಎನ್ನುವ ಸುದ್ದಿಯೂ ಹರಿದಾಡಿತ್ತು. ಮೃತ ಧನುಷ್ ಈ ಹಿಂದೆ ಯುವಕನೊಬ್ಬನಿಗೆ ಕೊಲೆ ಬೆದರಿಕೆ ಹಾಕಿದ್ದ ಕಾರಣ ಬೆದರಿಕೆ ಇದ್ದ ವ್ಯಕ್ತಿ ಇವರನ್ನು ಕೊಲೆ ಮಾಡಿರಬಹುದು ಎನ್ನುವ ಸುದ್ದಿ ಹಬ್ಬಿತ್ತು. ಬೆದರಿಕೆ ಇದ್ದ ವ್ಯಕ್ತಿಯನ್ನು ಕರೆಸಿ ಪೊಲೀಸರು ವಿಚಾರಣೆ ಮಾಡಿದ್ದರು. ಕೊನೆಗೂ ಇಬ್ಬರ ದೇಹಗಳೂ ಪತ್ತೆಯಾಗುವುದರೊಂದಿಗೆ ವದಂತಿಗಳಿಗೆ ತೆರೆ ಬಿದ್ದಿದೆ.