Advertisement

ಕಾಣಿಯೂರು-ಕಾಞಂಗಾಡ್‌ ರೈಲ್ವೇ ಮಾರ್ಗಕ್ಕೆ ಶಾಶ್ವತ ಹಿನ್ನಡೆ

12:09 AM Sep 19, 2022 | Team Udayavani |

ಸುಳ್ಯ: ಕಾಞಂಗಾಡ್‌ – ಕಾಣಿಯೂರು ರೈಲ್ವೇ ಮಾರ್ಗ ಪ್ರಸ್ತಾವವನ್ನು ಈ ಹಿಂದೆ ರೈಲ್ವೇ ಇಲಾಖೆಯೂ ತಿರಸ್ಕರಿಸಿದ್ದು, ಎರಡೂ ರಾಜ್ಯಗಳು ಒಪ್ಪಿಗೆ ನೀಡಿದರೆ ಪರಿಶೀಲನೆ ನಡೆಸಬಹುದು ಎಂದಿತ್ತು. ಈಗ ರಾಜ್ಯ ಸರಕಾರ ಇದನ್ನು ತಿರಸ್ಕರಿಸಿದೆ.

Advertisement

ಕೇರಳ ಮತ್ತು ಕರ್ನಾಟಕ ಹಾಗೂ ಪುಣ್ಯಕ್ಷೇತ್ರಗಳನ್ನು ಸಂಪರ್ಕಿಸುವ ದೃಷ್ಟಿಯಿಂದ ಅನೇಕ ವರ್ಷಗಳ ಹಿಂದೆಯೇ ಈ ಪ್ರಸ್ತಾವ ಚಾಲನೆಗೆ ಬಂದಿತ್ತು.

ಸರ್ವೇ ನಡೆಸಲು ಬಜೆಟ್‌ನಲ್ಲಿ ಹಣವನ್ನೂ ಮೀಸಲಿರಿಸಲಾಗಿತ್ತು. ರೈಲ್ವೇ ಮಾರ್ಗದ ಅನುಷ್ಠಾನಕ್ಕೆ ಕೇರಳ ಸರಕಾರ ಹೆಚ್ಚಿನ ಉತ್ಸುಕತೆ ತೋರಿತ್ತಲ್ಲದೆ ಕೇರಳದ ಪಾಣತ್ತೂರಿನವರೆಗೆ ಸರ್ವೇ ಪೂರ್ತಿಗೊಳಿಸಿತ್ತು.
ಈ ಯೋಜನೆ ನನೆಗುದಿಗೆ ಬೀಳುವ ಹಂತದಲ್ಲಿದ್ದಾಗ ಸುಳ್ಯ ಭಾಗದ ಕೆಲವು ಮುಖಂಡರು ಕ್ರಿಯಾಸಮಿತಿ ರಚಿಸಿ ಕಾಞಂಗಾಡ್‌ ಭಾಗದ ಜನಪ್ರತಿನಿಧಿಗಳೊಂದಿಗೆ ಕೇಂದ್ರ – ರಾಜ್ಯ ಸಚಿವರನ್ನು ಭೇಟಿ ಮಾಡಿದ್ದರು. ಆಗ ಭರವಸೆಗಳು ದೊರೆತಿದ್ದವು. ಆದರೆ ರಾಜ್ಯ ಸರಕಾರ ತಿರಸ್ಕರಿಸುವುದರೊಂದಿಗೆ ಯೋಜನೆ ಶಾಶ್ವತವಾಗಿ ಬದಿಗೆ ಸರಿಯಲಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next