Advertisement

ಬ್ರಿಟನ್‌ ಪ್ರಧಾನಿಯಾಗಿದ್ದ ವಿನ್‌ಸ್ಟನ್‌ ಚರ್ಚಿಲ್‌ ವಿಚಾರಣೆ ಏಕಾಗಲಿಲ್ಲ?: ಕಂಗನಾ

12:02 AM Nov 15, 2021 | Team Udayavani |

ಹೊಸದಿಲ್ಲಿ: “ಸ್ವಾತಂತ್ರ್ಯಾನಂತರದ ಭಾರತದ ನಿರ್ಮಾ­ತೃಗಳು, ಭಾರತದ ಅಂದಿನ ದೈನೇಸಿ ಪರಿಸ್ಥಿತಿಗೆ ಬ್ರಿಟಿಷ್‌ ಸರಕಾರವನ್ನು ಹೊಣೆಗಾರರ­ನ್ನಾಗಿಸದೇ ಇದ್ದಿದ್ದರಿಂದಲೇ, ಸ್ವಾತಂತ್ರ ಪೂರ್ವದಲ್ಲಿ ದೇಶದಲ್ಲಿ ಅನೇಕ ವಿಧ್ವಂಸಕ ಕೃತ್ಯಗಳನ್ನು ನಡೆಸಿದ ಅಂದಿನ ಬ್ರಿಟನ್‌ ಪ್ರಧಾನಿ ವಿನ್‌ಸ್ಟನ್‌ ಚರ್ಚಿಲ್‌ರನ್ನು ಇಲ್ಲಿಗೆ ಕರೆತಂದು ವಿಚಾರಣೆಗೆ ಒಳಪಡಿ­ಸಲು ಸಾಧ್ಯವಾಗಲಿಲ್ಲ’ ಎಂದು ಬಾಲಿ­ವುಡ್‌ ನಟಿ ಕಂಗನಾ ರಣಾವತ್‌ ಹೇಳಿದ್ದಾರೆ.

Advertisement

ಈ ನಡುವೆ, “1947ರಲ್ಲಿ ಸಿಕ್ಕ ಸ್ವಾತಂತ್ರ್ಯ ಬ್ರಿಟಿಷರ ಭಿಕ್ಷೆ’ ಎಂದಿದ್ದ ಕಂಗನಾರಿಗೆ ನೀಡಿರುವ ಪದ್ಮಶ್ರೀ ಪ್ರಶಸ್ತಿಯನ್ನು ಹಿಂದಕ್ಕೆ ಪಡೆಯುವಂತೆ ಆಗ್ರಹಿಸಿ, ದಿಲ್ಲಿ ಮಹಿಳಾ ಆಯೋಗದ (ಡಿಸಿಡಬ್ಲ್ಯು) ಅಧ್ಯಕ್ಷೆ ಸ್ವಾತಿ ಮಲಿವಾಲ್‌ ಅವರು ರಾಷ್ಟ್ರಪತಿಯವರಿಗೆ ಪತ್ರ ಬರೆದಿ­ದ್ದಾರೆ. ಇನ್ನೊಂದೆಡೆ ಹಿರಿಯ ಮರಾಠಿ ನಟ ವಿಕ್ರಂ ಗೋಖಲೆ ಅವರೂ ಕಂಗನಾ ಹೇಳಿಕೆಗೆ ಬೆಂಬಲ ವ್ಯಕ್ತಪಡಿಸಿದ್ದು, ಅವರ ಹೇಳಿಕೆ ಸರಿಯಾಗಿದೇ ಇದೆ ಎಂದಿದ್ದಾರೆ.

ಈ ನಡುವೆ, ಕಂಗನಾ ಹೇಳಿಕೆ ಕುರಿತು ರವಿವಾರ ಸುದ್ದಿಗಾರರ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ವಿಶ್ವ ಹಿಂದೂ ಪರಿಷತ್‌ ಪ್ರಧಾನ ಕಾರ್ಯದರ್ಶಿ ಮಿಲಿಂದ್‌ ಪರಾಂಡೆ, ಭಾರತವು ಸಾಂಸ್ಕೃತಿಕ ಹಾಗೂ ಇತರ ರೀತಿಯ ಸ್ವಾತಂತ್ರ್ಯವನ್ನು ಪಡೆದಿದ್ದು 2014ರ ಅನಂತರ’ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next