Advertisement

ಚೈ-ಸ್ಯಾಮ್ ವಿಚ್ಛೇದನಕ್ಕೆ ನಟ ಅಮೀರ್ ಖಾನ್ ಕಾರಣ : ಕಂಗನಾ ಗಂಭೀರ ಆರೋಪ

01:28 PM Oct 03, 2021 | Team Udayavani |

ಮುಂಬೈ : ನಟ ನಾಗಚೈತನ್ಯ ಹಾಗೂ ನಟಿ ಸಮಂತಾ ವಿಚ್ಛೇದನಕ್ಕೆ ಬಾಲಿವುಡ್ ನಟ ಅಮೀರ್ ಖಾನ್ ಕಾರಣ ಎಂದು ನಟಿ ಕಂಗನಾ ರಣಾವತ್ ಆರೋಪ ಮಾಡಿದ್ದಾರೆ.

Advertisement

ಶನಿವಾರ ಸ್ಯಾಮ್-ಚೈ ಬ್ರೇಕಪ್ ಮಾಡಿಕೊಂಡರು. ಪ್ರೀತಿಸಿ ಮದುವೆಯಾಗಿದ್ದ ಈ ಜೋಡಿ ದಾಂಪತ್ಯದಲ್ಲಿ ಬಿರುಕು ಮೂಡಲು ಕಾರಣ ಏನು ? ಎನ್ನುವುದು ಇನ್ನೂ ರಹಸ್ಯವಾಗಿಯೇ ಉಳಿದುಕೊಂಡಿದೆ. ಈ ಜೋಡಿ ಬೇರೆಯಾಗಿದ್ದಕ್ಕೆ ಅವರ ಅಭಿಮಾನಿಗಳು ಬೇಸರಪಟ್ಟುಕೊಂಡಿದ್ದಾರೆ. ಇಂತಹ ಸಂದರ್ಭದಲ್ಲಿ ಬಾಲಿವುಡ್ ಲೇಡಿ ಸೂಪರ್ ಸ್ಟಾರ್ ಕಂಗನಾ ಅವರು ಮಾಡಿರುವ ಕಾಮೆಂಟ್ ಇದೀಗ ಗಮನ ಸೆಳೆಯುತ್ತಿದೆ.

ಸಮಂತಾ ಹಾಗೂ ನಾಗಚೈತನ್ಯ ಬೇರೆಯಾಗುತ್ತಿರುವುದಕ್ಕೆ ಕಾರಣ ಡಿವೋರ್ಸ್ ಎಕ್ಸ್ ಪರ್ಟ್ ಅಮೀರ್ ಖಾನ್ . ನಾಗಚೈತನ್ಯ ಅವರು ಅಮೀರ್ ಖಾನ್ ಜೊತೆಗೆ ನಿಕಟವಾದ ಕೂಡಲೇ ಈ ವಿಚ್ಛೇದನ ನಡೆದಿದೆ   ಎಂದು ಟೀಕಿಸಿದ್ದಾರೆ.

ಈ ಬಗ್ಗೆ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಹಾಕಿರುವ ಕಂಗನಾ, ವಿಚ್ಛೇದನ ಏರ್ಪಟ್ಟ ಸಮಯದಲ್ಲಿ ತಪ್ಪು ಯಾವಾಗಲೂ ಪುರುಷನದ್ದೇ ಆಗಿರುತ್ತದೆ. ನಾನು ಹೀಗೆ ಹೇಳಿದರೆ ಗೊಡ್ಡು ಸಂಪ್ರದಾಯದಂತೆ ಅಥವಾ ಪೂರ್ವ ನಿರ್ಧರಿತವಾಗಿ ಪೂರ್ವಾಗ್ರಹಪೀಡಿತವಾಗಿ ಮಾತನಾಡುತ್ತಿದ್ದೇನೆ ಎಂದೆನಿಸಬಹುದು ಎಂದಿದ್ದಾರೆ.

ವಿಚ್ಛೇದನ ವಿಷಯದಲ್ಲಿ ನೂರರಲ್ಲಿ ಒಬ್ಬ ಮಹಿಳೆಯ ತಪ್ಪು ಇರಬಹುದು, ಆದರೆ ಬಹುತೇಕ ಸಂದರ್ಭಗಳಲ್ಲಿ ತಪ್ಪು ಪುರುಷರದ್ದೇ. ಮಹಿಳೆಯರನ್ನು ಬಟ್ಟೆಯಂತೆ ಬದಲಾಯಿಸುವ ಮತ್ತು ನಂತರ ಅವರು ಉತ್ತಮ ಸ್ನೇಹಿತರೆಂದು ಹೇಳಿಕೊಳ್ಳುವ ಇಂತವರಿಗೆ ದಯೆ ತೋರಿಸುವುದನ್ನು ನಿಲ್ಲಿಸಿ ಎಂದು ನೇರವಾಗಿ ನಾಗಚೈತನ್ಯ ಹೆಸರು ಹೇಳದೆ ಕಂಗನಾ ಬೈದಿದ್ದಾರೆ.

Advertisement

ಇನ್ನು ನಾಗಚೈತನ್ಯ ಅವರು ಅಮೀರ್ ಖಾನ್ ಅವರ ಲಾಲ್ ಸಿಂಗ್ ಚಡ್ಡಾ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದೇ ಕಾರಣಕ್ಕೆ ಕಂಗನಾ ಅವರು ಅಮೀರ್ ಖಾನ್ ವಿರುದ್ಧ ಆರೋಪ ಮಾಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

More
Next